ಅಭಿಪ್ರಾಯಗಳು

ತೆರೆದ ಅಂಚೆ

ರಾಜ್ಯದ ಕೃಷಿ ಕ್ಷೇತ್ರದಲ್ಲಿ ನಡೆದಿರುವ ಇಂತಹ ಪ್ರಯೋಗಗಳ ಕುರಿತು ಮಾಹಿತಿ ಒದಗಿಸುವ ಇಂತಹ ಲೇಖನಗಳು ಇತರ ಭಾಗದ ರೈತರಿಗೂ ಉಪಯುಕ್ತ.

ತೆರೆದ ಅಂಚೆ

ಬೆರಗು ಮೂಡಿಸಿದ ಅರಗು
ಸುಧಾ ಹೆಗಡೆಯವರ ‘ಅಲ್ಲಿನ ರಾಳಕ್ಕೆ ಇಲ್ಲೂ ಗಾಳ’ ಲೇಖನ ತುಂಬಾ ಮಾಹಿತಿ ಪೂರ್ಣವಾಗಿತ್ತು. ಅರಗಿನ ಈ ಕೃಷಿ ಬೆರಗು ಮೂಡಿಸಿತು. ಅಪರೂಪದ ಈ ವನ್ಯಜನ್ಯದ ಉತ್ಪಾದನೆಯಿಂದ ಅದರ ಅಂತಿಮ ಅನುಭೋಗದವರೆಗೆ ಎಲ್ಲ ವಿವರಗಳೂ ಲೇಖನದಲ್ಲಿವೆ. ರಾಜ್ಯದ ಕೃಷಿ ಕ್ಷೇತ್ರದಲ್ಲಿ ನಡೆದಿರುವ ಇಂತಹ ಪ್ರಯೋಗಗಳ ಕುರಿತು ಮಾಹಿತಿ ಒದಗಿಸುವ ಇಂತಹ ಲೇಖನಗಳು ಇತರ ಭಾಗದ ರೈತರಿಗೂ ಉಪಯುಕ್ತ.
–ಅರ್ಜುನ ಕೋರಟಕರ್ ಜಮಖಂಡಿ

*
ಶೃಂಗಾರ ಕಾವ್ಯ
ಶಶಿಧರಸ್ವಾಮಿ ಹಿರೇಮಠ ಅವರ ‘ಜಾಣ್ವಕ್ಕಿಗಳ ಪ್ರಣಯ’ ಲೇಖನ ಶೃಂಗಾರ ಕಾವ್ಯದಂತಿದೆ. ಬರವಣಿಗೆ ಶೈಲಿ ತುಂಬಾ ಚೆನ್ನಾಗಿದೆ. ಜೊತೆಗೆ ಆ ಗಿಳಿ ಕುರಿತ ಕಿರು ಪರಿಚಯವೂ ಸಂದರ್ಭೋಚಿತವಾಗಿದೆ.
-ರಾಜಶೇಖರ ಸಿ.ಡಿ ಈಚಲಯಲ್ಲಾಪುರ

*
‘ಜಾಣ್ವಕ್ಕಿಗಳ ಪ್ರಣಯ’ ಲೇಖನದ ಓದು ಖುಷಿ ಕೊಟ್ಟಿತು. ಲೇಖಕರಿಗೆ ಧನ್ಯವಾದಗಳು.
–ಸದಾಶಿವ ಬೆಳವಾಡಿ

*
ಮುದಿ ಪದ ಬೇಡವಾಗಿತ್ತು
‘ಮುದಿ ಸ್ಮಾರಕಗಳಿಗೆ ಮತ್ತೆ ಹರೆಯ’ ಲೇಖನ (ಶಶಿಕಾಂತ ಶೆಂಬೆಳ್ಳಿ) ಓದಿದೆ. ಹಂಪಿಯ ಜೀರ್ಣಾವಸ್ಥೆಯಲ್ಲಿರುವ ಸ್ಮಾರಕಗಳ ಜೀರ್ಣೋದ್ಧಾರ ಕಾರ್ಯ ನಡೆದಿರುವುದು ಖುಷಿಯ ವಿಚಾರ. ಆದರೆ, ಲೇಖನದ ತಲೆ ಬರಹದಲ್ಲಿ ಇರುವ ‘ಮುದಿ’ ಎಂಬ ಶಬ್ದ ಕಿರಿಕಿರಿ ಉಂಟುಮಾಡಿತು. ಭವ್ಯ ಪರಂಪರೆ ಸಾರುವ ಸ್ಮಾರಕಗಳಿಗೆ ಮುದಿ ಎಂದು ಕರೆದಿರುವುದು ಸರಿಯಲ್ಲ. ಅದರ ಬದಲು ಬೇರೆ ಪದವನ್ನು ಬಳಕೆ ಮಾಡಬೇಕಿತ್ತು.
–ಎಚ್‌.ಎನ್‌. ರಮೇಶ ಮೈಸೂರು

Comments
ಈ ವಿಭಾಗದಿಂದ ಇನ್ನಷ್ಟು
ಎಪ್ಪತ್ತೇಳು ಮಲೆಗಳ ಕಣಿವೆ ಗ್ರಾಮ!

ಕರ್ನಾಟಕ ದರ್ಶನ
ಎಪ್ಪತ್ತೇಳು ಮಲೆಗಳ ಕಣಿವೆ ಗ್ರಾಮ!

16 Jan, 2018
ಬರಡಾದ ಬೆಟ್ಟದಲಿ ಬೀಜ ಬಿತ್ತಿದವರು...

ಕರ್ನಾಟಕ ದರ್ಶನ
ಬರಡಾದ ಬೆಟ್ಟದಲಿ ಬೀಜ ಬಿತ್ತಿದವರು...

16 Jan, 2018
ಮಡಿಕೆ ಮಣ್ಣಿನಲ್ಲಿ ಮೂಡಿದ ಬೆಳಕು

ಕರ್ನಾಟಕ ದರ್ಶನ
ಮಡಿಕೆ ಮಣ್ಣಿನಲ್ಲಿ ಮೂಡಿದ ಬೆಳಕು

16 Jan, 2018
ಕಲ್ಲೂಡಿಯ ಹಪ್ಪಳ ಮಾಡಿತಲ್ಲ ಸಪ್ಪಳ!

ಕರ್ನಾಟಕ ದರ್ಶನ
ಕಲ್ಲೂಡಿಯ ಹಪ್ಪಳ ಮಾಡಿತಲ್ಲ ಸಪ್ಪಳ!

9 Jan, 2018
ತೇರಿಲ್ಲದ ಜಾತ್ರೆಗೆ 100ರ ಸಂಭ್ರಮ

ಕರ್ನಾಟಕ ದರ್ಶನ
ತೇರಿಲ್ಲದ ಜಾತ್ರೆಗೆ 100ರ ಸಂಭ್ರಮ

9 Jan, 2018