ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೈಲರ್‌ ಸ್ವಿಫ್ಟ್‌ ಫ್ಯಾನ್ಸ್‌ ಆ್ಯಪ್‌

Last Updated 24 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಅಮೆರಿಕದ ಜನಪ್ರಿಯ ಗಾಯಕಿ ಟೈಲರ್‌ ಸ್ವಿಫ್ಟ್‌ ಅವರು ತಮ್ಮ ಅಭಿಮಾನಿಗಳಿಗಾಗಿ ಸಾಮಾಜಿಕ ಜಾಲತಾಣದ ಅಪ್ಲಿಕೇಶನ್‌ವೊಂದನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ನನ್ನ ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಯುವಕರು ಇಷ್ಟಪಡಲಿದ್ದಾರೆ ಎಂದು ಟೈಲರ್‌ ಸ್ವಿಫ್ಟ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟೈಲರ್‌ ಸ್ವಿಫ್ಟ್‌ ಅವರು ತಮ್ಮ ಜಾಲತಾಣದ ಬಗ್ಗೆ ಯುಟೂಬ್‌ನಲ್ಲಿ ಬ್ಯಾಡ್ ಬ್ಲಡ್‌ ಎಂಬ ವಿಡಿಯೊ ಹಾಡಿನ ಮೂಲಕ ಪ್ರಚಾರ ಮಾಡಿದ್ದಾರೆ. ಇದು ಯುಟ್ಯೂಬ್‌ನಲ್ಲಿ ಸಾಕಷ್ಟು ಹಿಟ್‌ಗಳನ್ನು ಪಡೆದಿದೆ.
ಗೂಗಲ್‌ ಪ್ಲೇಸ್ಟೋರ್‌: Taylor Swift app

ಪಾಲಿಗಾಮಿ ಡೇಟಿಂಗ್‌ ಆ್ಯಪ್‌
ಇಂಡೊನೇಷ್ಯಾದಲ್ಲಿ ಸಂಪ್ರದಾಯವಾದಿಗಳ ವಿರೋಧದ ನಡುವೆಯೂ ಪಾಲಿಗಾಮಿ (ಬಹುಪತ್ನಿತ್ವ) ಡೇಟಿಂಗ್‌  ಆ್ಯಪ್‌ ಬಿಡುಗಡೆಯಾಗಿದೆ.  ಏಪ್ರಿಲ್‌ ತಿಂಗಳಲ್ಲಿ ಬಿಡುಗಡೆಯಾಗಿರುವ ಈ ಆ್ಯಪ್ ಅನ್ನು ಇಲ್ಲಿಯವರೆಗೂ ಅಸಂಖ್ಯಾತ ಜನರು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. 35 ರಿಂದ 50 ವರ್ಷದೊಳಗಿನ ಅವಿವಾಹಿತ ಮಹಿಳೆಯರು ಸಂಗಾತಿಗಳನ್ನು ಹುಡುಕಿಕೊಳ್ಳುವ ಉದ್ದೇಶದಿಂದ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಒಬ್ಬಳಿಗಿಂತ ಹೆಚ್ಚು ಪತ್ನಿಯರನ್ನು ವರಿಸಲು ಬಯಸುವ ಪುರುಷರಿಗೂ ಇದರಿಂದ ಹೆಚ್ಚಿನ ಪ್ರಯೋಜನ ಇದೆ ಎಂದು ಇದನ್ನು ವಿನ್ಯಾಸ ಮಾಡಿರುವ ಕಂಪೆನಿ ತಿಳಿಸಿದೆ.

ಇಂಡೊನೇಷ್ಯಾದಲ್ಲಿ ಸಾಕಷ್ಟು ಮಧ್ಯವಯಸ್ಸಿನ ಮಹಿಳೆಯರು ಕನ್ಯೆಯರಾಗಿಯೇ ಉಳಿದಿದ್ದಾರೆ. ಇಂತಹ ಅವಿವಾಹಿತ ಮಹಿಳೆಯರು ಈ ಆ್ಯಪ್ ಮೂಲಕ ಸುಲಭವಾಗಿ ಸಂಗಾತಿಗಳನ್ನು ಹುಡುಕಿಕೊಳ್ಳಬಹುದು ಎಂದು ಕಂಪೆನಿ ತಿಳಿಸಿದೆ. ಆದರೆ ಅಲ್ಲಿನ ಸಂಪ್ರದಾಯವಾದಿಗಳು ಮತ್ತು ಮಹಿಳಾ ಸಂಘಟನೆಗಳು ಈ ಆ್ಯಪ್‌ ಮೇಲೆ ನಿಷೇಧ ಹೇರುವಂತೆ ನ್ಯಾಯಾಲಯದ ಮೊರೆ ಹೋಗಿವೆ.
ಗೂಗಲ್‌ ಪ್ಲೇಸ್ಟೋರ್‌: Polygamy dating app

ನೋಟಿಫಿಕೇಷನ್‌ಗಳ ಕಿರಿ ಕಿರಿ
ಮೊಬೈಲ್‌ ಫೋನ್‌ಗಳಿಗೆ ಬರುವ ಮೂರನೇ ಒಂದರಷ್ಟು ಡಿಜಿಟಲ್‌ ನೋಟಿಫಿಕೇಷನ್‌ಗಳು ಬಳಕೆದಾರರಿಗೆ ಸಾಕಷ್ಟು ಕಿರಿ ಕಿರಿ ಉಂಟುಮಾಡುತ್ತವೆ ಎಂದು ಬ್ರಿಟನ್‌ ಅಧ್ಯಯನ ತಿಳಿಸಿದೆ.

ಅಲ್ಲಿನ ವಿಶ್ವವಿದ್ಯಾಲಯದ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ಅದಕ್ಕಾಗಿ 50 ಜನರನ್ನು ಸಂಶೋಧನೆಗೆ ಒಳಪಡಿಸಿದ್ದಾರೆ. ಅವರಿಗೆ ಐದು ವಾರಗಳ ಕಾಲ ಸಾವಿರಕ್ಕೂ ಹೆಚ್ಚು ಡಿಜಿಟಲ್‌ ನೋಟಿಫಿಕೇಷನ್‌ಗಳನ್ನು ಕಳುಹಿಸಿದಾಗ ಅವರ ವರ್ತನೆ ಮತ್ತು ಭಾವನೆಗಳನ್ನು ಅನುಸರಿಸಿ  ಈ ಅಧ್ಯಯನ ನಡೆಸಿದ್ದಾರೆ. 

ಸಾಕಷ್ಟು ಡಿಜಿಟಲ್‌ ನೋಟಿಫಿಕೇಷನ್‌ಗಳು ಬಳಕೆದಾರರಿಗೆ ಕಿರಿ ಕಿರಿ ಉಂಟುಮಾಡುತ್ತಿವೆ. ಅವರ ದೈನಂದಿನ ಜೀವನ, ವೃತ್ತಿ ಮತ್ತು ದಾಂಪತ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿವೆ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಎಮಾನ್‌ ಕುಂಜೊ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT