ಹೆಚ್ಚು ಆಕರ್ಷಣೆ

ಕನ್ನಡಿಯಂಥ ಕಟ್ಟಡಗಳು

ಸಾಮಾನ್ಯ ಕಟ್ಟಡಗಳಿಗಿಂತ ಗಾಜಿನ ಕಟ್ಟಡಗಳು ಹೆಚ್ಚು ಆಕರ್ಷಿಸುತ್ತವೆ. ವಿಚಿತ್ರ ಆಕಾರಗಳಲ್ಲಿ ವಿದ್ಯುತ್‌ ದೀಪಗಳಿಂದ ಕಂಗೊಳಿಸುವ, ವಿಶೇಷ ಎನಿಸುವ ಕೆಲವು ಗಾಜಿನ ಕಟ್ಟಡಗಳ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ

30 ಸೇಂಟ್ ಮೇರಿ ಆ್ಯಕ್ಸ್

30 ಸೇಂಟ್ ಮೇರಿ ಆ್ಯಕ್ಸ್
ಲಂಡನ್‌ ನಗರದ ಮಧ್ಯಭಾಗದಲ್ಲಿ ಈ ಕಟ್ಟಡ ಇದೆ. 2001ರಲ್ಲಿ ಆರಂಭವಾದ ಇದರ ನಿರ್ಮಾಣ ಕಾರ್ಯ 2003ರಲ್ಲಿ ಮುಗಿಯಿತು. 2004ರಲ್ಲಿ ಉದ್ಘಾಟನೆಯಾಯಿತು. ಮೊದಲು ಇದನ್ನು 91 ಅಂತಸ್ತಿನ ಕಟ್ಟಡವಾಗಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ 41 ಅಂತಸ್ತಿಗೆ ಸೀಮಿತಗೊಳಿಸಲಾಯಿತು. ಇದರಲ್ಲಿ ಚರ್ಚ್‌ ಸೇರಿದಂತೆ, ಕಾರ್ಪೊರೇಟ್‌ ಕಚೇರಿಗಳು, ಬ್ಯಾಂಕ್‌ಗಳು, ಷಾಪಿಂಗ್‌ ಮಾಲ್ಸ್‌, ಸಿನಿಮಾ ಹಾಲ್ಸ್‌ ಇವೆ.

*

ಸೌಂಡ್‌ ಅಂಡ್ ವಿಷನ್‌
ಬಣ್ಣ ಬಣ್ಣದ ಗಾಜಿನಿಂದ ಕಂಗೊಳಿಸುವ ಈ ಕಟ್ಟಡ ನೆದರ್ಲ್ಯಾಂಡ್ಸ್‌ನ ಹಿಲ್‌ವೇರ್ಸಮ್‌ ನಗರದಲ್ಲಿ ಇದೆ. 2014ರಲ್ಲಿ ನಿರ್ಮಾಣವಾಯಿತು. ಇದೊಂದು ಅದ್ಭುತವಾದ ಆಡಿಯೊ ವಿಷುವಲ್‌ ಮ್ಯೂಸಿಯಂ. ಇದರಲ್ಲಿ ಸುಮಾರು 7.50 ಲಕ್ಷ ಗಂಟೆ ಅವಧಿಯ ಆಡಿಯೊ ತುಣುಕುಗಳನ್ನು ಸಂಗ್ರಹಿಸಿ ಇಡಲಾಗಿದೆ.

ವಿವಿಧ ಭಾಷೆಯ ಸಿನಿಮಾ, ಕಿರುಚಿತ್ರ, ಸಾಕ್ಷ್ಯ ಚಿತ್ರಗಳ ಆಡಿಯೊ ತುಣುಕುಗಳು ಇಲ್ಲಿವೆ. 1898ರಿಂದ ಇಲ್ಲಿಯವರೆಗಿನ ಕೆಲವು ಆಡಿಯೊ ತುಣುಕುಗಳನ್ನು ಸಂಗ್ರಹಿಸಿರುವುದು ವಿಶೇಷ. 

Comments
ಈ ವಿಭಾಗದಿಂದ ಇನ್ನಷ್ಟು
ಹೀಗಿರಲಿ ಬಾಗಿಲಿನ ಅಲಂಕಾರ...

ಒಳಾಂಗಣ
ಹೀಗಿರಲಿ ಬಾಗಿಲಿನ ಅಲಂಕಾರ...

19 Jan, 2018
ಹೀರೇಕಾಯಿ ಬೆಳೆಯುವುದು ಬಲು ಸರಳ

ಕೈತೋಟ
ಹೀರೇಕಾಯಿ ಬೆಳೆಯುವುದು ಬಲು ಸರಳ

19 Jan, 2018
ರೇಸ್‌ನ ಬೇಡಿಕೆ ಕುದುರೆ ಕೋರಮಂಗಲ...

ಹೂಡಿಕೆ
ರೇಸ್‌ನ ಬೇಡಿಕೆ ಕುದುರೆ ಕೋರಮಂಗಲ...

19 Jan, 2018
ನೆಮ್ಮದಿಗೆ ಇವುಗಳಿಂದ ದೂರವಿರಿ

ವಾಸ್ತು ಪ್ರಕಾರ
ನೆಮ್ಮದಿಗೆ ಇವುಗಳಿಂದ ದೂರವಿರಿ

19 Jan, 2018
ಮೆಟ್ರೊ ವಿಸ್ತರಣೆ: ಹೂಡಿಕೆದಾರರ ಆಕರ್ಷಣೆ

ಹೂಡಿಕೆ
ಮೆಟ್ರೊ ವಿಸ್ತರಣೆ: ಹೂಡಿಕೆದಾರರ ಆಕರ್ಷಣೆ

12 Jan, 2018