ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ಮನೆಗೋಗ್ತೀವಿ... ಆದ್ರ ಹೊಂದಾಣಿಕೆಗಲ್ರೀ..!

ವಾರೆಗಣ್ಣು
Last Updated 28 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ವಿಜಯಪುರ: ‘ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಮನೆಗೆ ಹೋಗೋದು ಖರೆ. ಆದ್ರ ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಹೇಳದಂಗ ನಾವು ಹೊಂದಾಣಿಕೆಗೆ ಹೋಗಲ್ರೀ...’

ಬಿಜೆಪಿಯ ವಿಜಯಪುರ ಜಿಲ್ಲಾ ಘಟಕದ ಮುಖಂಡರ ಹೊಂದಾಣಿಕೆ ರಾಜಕಾರಣದ ಕುರಿತಂತೆ ಯತ್ನಾಳ ಅವರು ಈಚೆಗೆ ದೂರಿರುವ ಬಗ್ಗೆ ಬಿಜೆಪಿ ಮುಖಂಡ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸಿದ ಪರಿಯಿದು.

‘ನಾವು ಜಿಲ್ಲೆಯ ಅಭಿವೃದ್ಧಿ, ಜನರ ಸಮಸ್ಯೆ ಚರ್ಚಿಸಿ, ಪರಿಹಾರ ಕಂಡುಕೊಳ್ಳಲು ಜಲಸಂಪನ್ಮೂಲ ಸಚಿವರ ನಿವಾಸಕ್ಕೆ ಆಗಿಂದಾಗ್ಗೆ ಹೋಗ್ತೀವಿ. ಆದ್ರಾ ಎಂದೂ ನಸುಕಿನಲ್ಲಿ, ತಡರಾತ್ರಿ ಹೋಗಿಲ್ಲ. ಆದ್ರೂ ಯತ್ನಾಳಗೆ ಬಿಜೆಪಿ ಜಿಲ್ಲಾ ನಾಯಕರು ತಡರಾತ್ರಿ ಹೊಂದಾಣಿಕೆ ರಾಜಕಾರಣಕ್ಕಾಗಿ ಎಂ.ಬಿ.ಪಾಟೀಲ ಮನೆಗೆ ಹೋಗಿ ಬರ್ತಾರೆ ಎಂಬುದು ಗೊತ್ತಾಗುತ್ತೆ ಎಂಬುದೇ ಆಶ್ಚರ್ಯ ಕಣ್ರೀ.

‘ಯತ್ನಾಳರೇ ನಿತ್ಯ ಎಂ.ಬಿ.ಪಾಟೀಲರ ಮನೆಗೆ ಹೋಗ್ತಿರಬೇಕು. ಇಲ್ಲಾ ಅಂದ್ರೇ ಜಲಸಂಪನ್ಮೂಲ ಸಚಿವರೇ ನನ್ನ ಮನೆಗೆ ಯಾರ್ಯಾರು ಬರ್ತಾರೆ, ಅವರ ಜತೆ ಏನೇನು ಮಾತುಕತೆ ನಡೆಸ್ತ್ವೀನಿ ಅಂತಾ ಬಸನಗೌಡರಿಗೆ ಹೇಳಬೌದು ಅನ್ಸುತ್ತೆ’ ಎಂಬ ರಾಜಕೀಯ ವಿಶ್ಲೇಷಣೆಯನ್ನು ಮಾಜಿ ಸಚಿವರು ವ್ಯಕ್ತಪಡಿಸುತ್ತಿದ್ದಂತೆ ಗೋಷ್ಠಿಯಲ್ಲಿ ನಗೆಬುಗ್ಗೆ ಚಿಮ್ಮಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT