ಅಂದದ ಹೂತೋಟಕ್ಕೆ ಸುಲಭದ ಉಪಾಯ

ಮನೆಯ ಮುಂದೊಂದು ಪುಟ್ಟ ಹೂತೋಟ ಬೇಕೆಂಬ ಆಸೆ ಎಲ್ಲರಲ್ಲೂ ಇರುತ್ತದೆ. ಗೆಳೆಯರು, ನೆಂಟರು ಹೀಗೆ ಯಾರ ಮನೆಗೆ ಹೋದರೂ ಅಲ್ಲಿ ಕಂಡ ಚಂದದ ಗಿಡಗಳಿಂದ ಒಂದೊಂದು ತುಂಡು ಗಿಡವನ್ನು ಕೇಳಿ ಪಡೆದು ಖುಷಿಯಿಂದ ತಂದು ಮನೆಯ ಮುಂದಿನ ಹೂತೋಟದಲ್ಲಿ ನೆಡುತ್ತಾರೆ.

ಅಂದದ ಹೂತೋಟಕ್ಕೆ ಸುಲಭದ ಉಪಾಯ

-ಜೆಸ್ಸಿ ಪಿ.ವಿ.

**

ಮನೆಯ ಮುಂದೊಂದು ಪುಟ್ಟ ಹೂತೋಟ ಬೇಕೆಂಬ ಆಸೆ ಎಲ್ಲರಲ್ಲೂ ಇರುತ್ತದೆ. ಗೆಳೆಯರು, ನೆಂಟರು ಹೀಗೆ ಯಾರ ಮನೆಗೆ ಹೋದರೂ ಅಲ್ಲಿ ಕಂಡ ಚಂದದ ಗಿಡಗಳಿಂದ ಒಂದೊಂದು ತುಂಡು ಗಿಡವನ್ನು ಕೇಳಿ ಪಡೆದು ಖುಷಿಯಿಂದ ತಂದು ಮನೆಯ ಮುಂದಿನ ಹೂತೋಟದಲ್ಲಿ ನೆಡುತ್ತಾರೆ.

ತರಹೇವಾರಿ ಗಿಡಗಳಿದ್ದರೂ ಆ ತೋಟಕ್ಕೆ ಹೇಳತಕ್ಕ ಆಕರ್ಷಣೆ ಇಲ್ಲದ್ದನ್ನು ಕಂಡಾಗ ಅದನ್ನು ನೆಟ್ಟವರಿಗೆ ಬೇಸರವಾಗುವುದು ಸಹಜ. ಯೋಜಿತವಲ್ಲದ ಹೂತೋಟದ ಸಮಸ್ಯೆಯಿದು. ಹೂತೋಟ ದಲ್ಲಿ ಗಿಡಗಳನ್ನು ನೆಡುವುದಕ್ಕೂ ಸರಿಯಾದ ಪ್ಲಾನಿಂಗ್ ಬೇಕು. ಆಗ ಮಾತ್ರ ಆ ತೋಟಕ್ಕೊಂದು ಸೌಂದರ್ಯ ಬರುತ್ತದೆ. ನಿಮ್ಮ ಹೂತೋಟದ ಸೌಂದರ್ಯ ಹೆಚ್ಚಿಸಲು ಈ ಟಿಪ್ಸ್ ಅನುಸರಿಸಿ.

* ಸಣ್ಣ ಹಾಗೂ ದೊಡ್ಡ ಗಿಡಗಳನ್ನು ಒಟ್ಟಿಗೆ ನೆಡಬೇಡಿ. ಎತ್ತರದ ಗಿಡಗಳ ಮಧ್ಯೆ ಗಿಡ್ಡನೆಯ ಗಿಡಗಳು ಬೆಳೆಯುವುದೂ ಇಲ್ಲ, ಕಾಣಿಸುವುದೂ ಇಲ್ಲ.

* ಒಂದೇ ಬಗೆಯ ಹಲವು ಗಿಡಗಳನ್ನು ಒಂದು ಸಾಲಿನಲ್ಲಿ ಅಥವಾ ಗುಂಪಿನಲ್ಲಿ ನೆಡಿ. ಆಗ ಅವು ಹೂಬಿಟ್ಟಾಗ ಆಕರ್ಷಕವಾಗಿ ಕಾಣುತ್ತವೆ.

* ಹೊರ ಸುತ್ತಿನಲ್ಲಿ ದೊಡ್ಡ ಗಿಡಗಳು, ಅದರೊಳಗೆ ಸ್ವಲ್ಪ ಸಣ್ಣ ಗಿಡ ಗಳು ಮಧ್ಯದಲ್ಲಿ ಸಣ್ಣ ಗಿಡಗಳು ಅಥವಾ ಇದರ ವಿರುದ್ಧ ಕ್ರಮದಲ್ಲಿ ವೃತ್ತಾಕಾರವಾಗಿ ಗಿಡಗಳನ್ನು ನೆಟ್ಟರೆ ಹೂತೋಟ ಸುಂದರವಾಗಿ ಕಾಣುತ್ತದೆ.

* ಹೂತೋಟದ ಮಧ್ಯೆ ಮಣ್ಣು ಹಾಕಿ ಸಣ್ಣ ದಿಬ್ಬದಂತೆ ಮಾಡಿ ಗಿಡ ನೆಟ್ಟರೆ ಅದರ ಸೌಂದರ್ಯವೇ ಬೇರೆ.

* ಅಪರೂಪಕ್ಕೊಮ್ಮೆ ಹೂಬಿಡುವ ಗಿಡಗಳಿಗಿಂತ ಯಾವಾಗಲೂ ಹೂಬಿಡುವ ಗಿಡಗಳನ್ನು ನಿಮ್ಮ ತೋಟಕ್ಕಾಗಿ ಆಯ್ದುಕೊಳ್ಳಿ.

* ಸಾಧ್ಯವಿದ್ದರೆ ಬೆಳಿಗ್ಗೆ, ಸಂಜೆ ಎರಡು ಹೊತ್ತೂ ಗಿಡಗಳಿಗೆ ನೀರುಣಿಸಿ. ಗಿಡಗಳ ಮೇಲೂ ನೀರು ಚಿಮುಕಿಸಿ. ಇದರಿಂದ ಗಿಡಗಳು ತಾಜಾ ಆಗಿ ನಳನಳಿಸುತ್ತವೆ.

* ಕಾಲಕಾಲಕ್ಕೆ ಹೂತೋಟದ ಕಳೆ ಕೀಳುತ್ತಿರಿ. ಗೊಬ್ಬರ ಹಾಕಿ. ಗಿಡಗ ಳನ್ನು ಟ್ರಿಮ್ ಮಾಡುತ್ತಿರಿ.

* ಕೀಟ ಅಥವಾ ಹುಳಗಳ ಕಾಟ ಕಂಡುಬಂದರೆ ಸಾವಯವ ಕೀಟನಾ ಶಕ ಬಳಸಿ.

* ದಾಸವಾಳದಂತಹ ಗಿಡಗಳಿಂದ ಹೂತೋಟಕ್ಕೆ ಸಾವಯವ ಬೇಲಿ ನಿರ್ಮಿಸಿ. ಇದರ ಹೂಗಳು ಚಿಟ್ಟೆಗಳನ್ನು ಆಕರ್ಷಿಸುತ್ತವೆ.

* ಹುಲ್ಲುಹಾಸಿನ ಮಧ್ಯೆ ನದಿ ತೀರದಲ್ಲಿ ಸಿಗುವ ದುಂಡನೆ ಕಲ್ಲುಗಳನ್ನು ಹರಡಿ ಪುಟ್ಟದೊಂದು ಕಾಲ್ದಾರಿ ನಿರ್ಮಿಸಿ. ಅದರಿಂದ ನಿಮ್ಮ ಹೂತೋಟಕ್ಕೆ ವಿಶೇಷ ಲುಕ್ ಸಿಗುತ್ತದೆ.

* ಹೂತೋಟದಲ್ಲಿ ಕೆಲವು ಗಿಡಗಳ ಸುತ್ತ ಈ ತರ ಕಲ್ಲುಗಳನ್ನು ಹರಡಬಹುದು.

* ಒಂದೇ ರೀತಿಯ ಪ್ಲಾಸ್ಟಿಕ್ ಬಾಟಲ್‌ಗಳನ್ನು ಅಡ್ಡವಾಗಿಟ್ಟು ಮಧ್ಯೆ ಸ್ವಲ್ಪ ಭಾಗ ಕತ್ತರಿಸಿ ಮಣ್ಣು ತುಂಬಿಸಿ ಗಿಡ ನೆಟ್ಟು ತೂಗು ಹಾಕಿ.

* ಮನೆಯಲ್ಲಿ ವಿವಿಧ ವಸ್ತುಗಳನ್ನು ತಂದು ಖಾಲಿ ಪ್ಲಾಸ್ಟಿಕ್ ಜಾಡಿಗ ಳಲ್ಲಿ ಕಳ್ಳಿಗಿಡಗಳಂತಹ ಗಿಡಗಳನ್ನು ಬೆಳೆಸಬಹುದು.

* ಬಳ್ಳಿ ಗಿಡಗಳನ್ನು ಎತ್ತರದಲ್ಲಿ ಕಟ್ಟಿದ ಹಗ್ಗಗಳಲ್ಲಿ ಹಬ್ಬಿಸಿದರೆ ಅಥವಾ ಹಳೆಯ ದೊಡ್ಡ ಕೊಡೆ ಅಥವಾ ಹಳೆಯ ಟೀವಿ ಡಿಶ್ ಮೇಲೆ ಹಬ್ಬಿಸಿದರೆ ಬಹಳ ಸುಂದರವಾಗಿ ಕಾಣುತ್ತದೆ.

ಮನೆಯ ಮುಂದಿನ ಹೂತೋಟದಿಂದ ಮನೆಯ ಸೌಂದರ್ಯ ಇಮ್ಮಡಿಸುವುದಷ್ಟೇ ಅಲ್ಲ, ಮನಸ್ಸಿನ ಒತ್ತಡಗಳೂ ದೂರವಾಗುತ್ತವೆ. ಬಿಡುವಿನ ವೇಳೆಯ ಸದುಪಯೋಗವಾಗುತ್ತದೆ.

Comments
ಈ ವಿಭಾಗದಿಂದ ಇನ್ನಷ್ಟು
ಹೀಗಿರಲಿ ಬಾಗಿಲಿನ ಅಲಂಕಾರ...

ಒಳಾಂಗಣ
ಹೀಗಿರಲಿ ಬಾಗಿಲಿನ ಅಲಂಕಾರ...

19 Jan, 2018
ಹೀರೇಕಾಯಿ ಬೆಳೆಯುವುದು ಬಲು ಸರಳ

ಕೈತೋಟ
ಹೀರೇಕಾಯಿ ಬೆಳೆಯುವುದು ಬಲು ಸರಳ

19 Jan, 2018
ರೇಸ್‌ನ ಬೇಡಿಕೆ ಕುದುರೆ ಕೋರಮಂಗಲ...

ಹೂಡಿಕೆ
ರೇಸ್‌ನ ಬೇಡಿಕೆ ಕುದುರೆ ಕೋರಮಂಗಲ...

19 Jan, 2018
ನೆಮ್ಮದಿಗೆ ಇವುಗಳಿಂದ ದೂರವಿರಿ

ವಾಸ್ತು ಪ್ರಕಾರ
ನೆಮ್ಮದಿಗೆ ಇವುಗಳಿಂದ ದೂರವಿರಿ

19 Jan, 2018
ಮೆಟ್ರೊ ವಿಸ್ತರಣೆ: ಹೂಡಿಕೆದಾರರ ಆಕರ್ಷಣೆ

ಹೂಡಿಕೆ
ಮೆಟ್ರೊ ವಿಸ್ತರಣೆ: ಹೂಡಿಕೆದಾರರ ಆಕರ್ಷಣೆ

12 Jan, 2018