ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದೂ ಉಗ್ರವಾದ’ ವಿರುದ್ಧ ಕಮಲ್‌ ಕಿಡಿ

Last Updated 2 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಚೆನ್ನೈ: ಬಲಪಂಥೀಯ ಸಂಘಟನೆಗಳ ವಿರುದ್ಧ ಖ್ಯಾತ ನಟ ಕಮಲ್‌ ಹಾಸನ್‌ ಕಿಡಿಕಾರಿದ್ದಾರೆ.

‘ಬಲಪಂಥೀಯ ಸಂಘಟನೆಗಳ ಹಳೆಯ ಕಾರ್ಯತಂತ್ರಗಳು ವಿಫಲವಾಗಿರುವುದರಿಂದ ಈಗ ಹಿಂಸಾಚಾರಕ್ಕಿಳಿದಿವೆ’ ಎಂದು ತಮಿಳು ವಾರಪತ್ರಿಕೆ ‘ಆನಂದ ವಿಕಟನ್’ಗೆ ಬರೆದಿರುವ ಅಂಕಣದಲ್ಲಿ ಅವರು ಉಲ್ಲೇಖಿಸಿದ್ದಾರೆ.

ಯಾವುದೇ ಸಂಘಟನೆ ಅಥವಾ ಮುಖಂಡರ ಹೆಸರನ್ನು ಪ್ರಸ್ತಾಪಿಸದೆ ಬಲಪಂಥೀಯ ಸಂಘಟನೆಗಳ ಧೋರಣೆಗಳ ಬಗ್ಗೆ ಅವರು ಆಕ್ರೋಶ
ವ್ಯಕ್ತಪಡಿಸಿದ್ದಾರೆ.

‘ಬಲಪಂಥೀಯ ಸಂಘಟನೆಗಳು ಈಗ ತಮ್ಮ ಕಾರ್ಯಶೈಲಿಯನ್ನು ಬದಲಾಯಿಸಿವೆ. ಮೊದಲು ಇತರ ಧರ್ಮದವರ ಜತೆ ನೇರವಾಗಿ ಹಿಂಸಾಚಾರ ನಡೆಸಲು ಮುಂದಾಗುತ್ತಿರಲಿಲ್ಲ. ಆದರೆ, ವಾದ ಮತ್ತು ಪ್ರತಿವಾದಗಳ ಮೂಲಕ ಇತರ ಧರ್ಮೀಯರು ಹಿಂಸಾಚಾರದಲ್ಲಿ ತೊಡಗುವಂತೆ ಪ್ರಚೋದಿಸುತ್ತಿದ್ದರು’ ಎಂದು ತಿಳಿಸಿದ್ದಾರೆ.

’ಹಿಂದೂ ಉಗ್ರವಾದ ಯಶಸ್ವಿಯಾಗಿಲ್ಲ ಅಥವಾ ಬೆಳವಣಿಗೆ ಸಾಧಿಸಿಲ್ಲ. ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವವರಿಂದ ಇದು ಸಾಧ್ಯವೂ ಆಗಿಲ್ಲ’ ಎಂದು ಹೇಳಿದ್ದಾರೆ.

‘ಕೋಮುವಾದದ ಕಾರ್ಯಸೂಚಿಯನ್ನು ಹೇರಲು ಬಲಪಂಥೀಯ ಸಂಘಟನೆಗಳು ಈಗ ಭಯೋತ್ಪಾದನೆಗೆ ಮೊರೆ ಹೋಗಿವೆ. ಮೊದಲಿನಂತೆ ಹಿಂದೂ ಭಯೋತ್ಪಾದಕನನ್ನು ತೋರಿಸಿ ಎಂದು ಹೇಳುವ ಧೈರ್ಯ ಈ ಸಂಘಟನೆಗಳಿಗೆ ಇಲ್ಲ’ ಎಂದು ಉಲ್ಲೇಖಿಸಿದ್ದಾರೆ.

ತಮಿಳುನಾಡಿನಲ್ಲಿ ಹಿಂದೂತ್ವ ಸಂಘಟನೆಗಳು ಪ್ರವೇಶಿಸುತ್ತಿರುವ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕೇಳಿರುವ ಪ್ರಶ್ನೆಯನ್ನು ಪ್ರಸ್ತಾಪಿಸಿರುವ ಅವರು, ‘ಬದಲಾವಣೆಯೊಂದೇ ಶಾಶ್ವತ. ಮುಂದಿನ ದಿನಗಳಲ್ಲಿ ಸಾಮಾಜಿಕ ಸುಧಾರಣೆಯಲ್ಲಿ ತಮಿಳುನಾಡು ಮುಂಚೂಣಿಯಲ್ಲಿರುತ್ತದೆ. ಈ ವಿಷಯದಲ್ಲಿ ಇಂದು ಕೇರಳ ಪ್ರಗತಿ ಸಾಧಿಸಿರುವುದಕ್ಕೆ ಉದಾಹರಣೆಯಾಗಿದೆ. ಇದಕ್ಕಾಗಿ ಅಭಿನಂದನೆಗಳು’ ಎಂದು ಬರೆದಿದ್ದಾರೆ.

ಬಿಜೆಪಿ ಆಕ್ರೋಶ

ಕಮಲ್‌ ಹಾಸನ್‌ ಅವರ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ‘ಭಯೋತ್ಪಾದನೆ ಸಂಘಟನೆ ಲಷ್ಕರ್‌–ಎ–ತಯಬಾ ಮುಖಂಡ ಹಫೀಜ್‌ ಸಯೀದ್‌ ಮತ್ತು ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ರೀತಿಯಲ್ಲಿ ಕಮಲ್‌ ಹಾಸನ್‌ ಹೇಳಿಕೆ ನೀಡಿದ್ದಾರೆ’ ಎಂದು ಬಿಜೆಪಿ ವಕ್ತಾರ ಜಿವಿಎಲ್‌ ನರಸಿಂಹ ರಾವ್‌ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT