ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಿತ್ರೆಯ ತೇರಿಗೆ ಹೊಸ ತಿರುವು

ರಷ್ಯನ್ ನವೆಂಬರ್ ಕ್ರಾಂತಿಗೆ ನೂರರ ನೆನಪು
Last Updated 4 ನವೆಂಬರ್ 2017, 19:30 IST
ಅಕ್ಷರ ಗಾತ್ರ

‘ಧಮನಿಯಲಿ ಬಿಸಿನೆತ್ತರುಕ್ಕದೆ ನೆನೆಯಲಾರೆ ನಿನ್ನಂ ಲೆನಿನ್’

-ಕುವೆಂಪು

ಮತ್ತೊಂದು ದೀಪಾವಳಿ ಬಂದು ಹೋಗಿದೆ. ಆಧಾರ್ ನಂಬರನ್ನು ಲಿಂಕ್ ಮಾಡಲಿಲ್ಲವೆಂಬ ಕಾರಣಕ್ಕೆ ಪಡಿತರವನ್ನು ನಿಲ್ಲಿಸಿದ್ದಕ್ಕಾಗಿ ಜಾರ್ಖಂಡ್‍ನ ಕೊಯ್ಲಿದೇವಿಯ ಮಗಳು, ಹನ್ನೊಂದು ವರ್ಷದ ಬಾಲೆ ಸಂತೋಷಿಕುಮಾರಿ ಹಸಿವಿನಿಂದ ಅಸುನೀಗಿದ್ದಾಳೆ. ಒಂದು ಜೋಪಡಿಯ ಹಣತೆ ತಣ್ಣಗೆ ಕಣ್ಣು ಮುಚ್ಚಿದೆ. ಇನ್ನೊಂದೆಡೆ ವಿಶ್ವದ ಭಾರೀ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯರು ಸ್ಥಾನ ಪಡೆಯುತ್ತಲೇ ಇದ್ದಾರೆ. ಅಂತಹವರ ಬಂಗಲೆಗಳಲ್ಲಿ ಸುರು ಸುರು ಬತ್ತಿ, ಪಟಾಕಿಯ ಜೋರು ಸದ್ದು.

ಇಂತಹ ವೈರುಧ್ಯಗಳನ್ನು ತೊಡೆದು ಎಲ್ಲರಿಗೂ ಸಮಾನ ಘನತೆಯ ಬದುಕನ್ನು ಒದಗಿಸುವ ಪವಾಡವೊಂದು ಶತಮಾನದ ಹಿಂದೆ ಸೋವಿಯತ್ ರಷ್ಯಾದಲ್ಲಿ ನಡೆಯಿತು. ಸಾಮಾನ್ಯ ಜನತೆಯ ಬದುಕಿಗೆ ಕಂಟಕಪ್ರಾಯನಾಗಿದ್ದ ಝಾರ್ ದೊರೆಯನ್ನು ಕಿತ್ತುಹಾಕಿ ರೈತ-ಕಾರ್ಮಿಕರ ಪರಮಾಧಿಕಾರವನ್ನು ಸ್ಥಾಪಿಸಿದ ನವೆಂಬರ್ ಕ್ರಾಂತಿ ಅದು.

ಜಗತ್ತಿನ ಎಲ್ಲಾ ದೇಶಗಳ ಜನ ತಾವು ಅನುಭವಿಸುತ್ತಿರುವ ಯಾತನೆಗಳಿಗೆ ವಿದಾಯ ಹೇಳಲು ಈ ಕ್ರಾಂತಿಯ ನೆನಪು ಪ್ರೇರೇಪಿಸುತ್ತದೆ. ಸದ್ಯದ ಬಂಡವಾಳಶಾಹಿ ವ್ಯವಸ್ಥೆಯ ಅಧಃಪತನದಿಂದ ಹೊರಬರಲು ನಡೆಸಿದ ಹುಡುಕಾಟದ ದಶದಿಕ್ಕುಗಳ ಪರ್ಯಟನೆಯ ನಂತರವೂ ಸ್ತಬ್ಧವಾಗಿ ನಿಂತ ಅವರಿಗೆ ಇದೇ ನವೆಂಬರ್ ಕ್ರಾಂತಿ ಮತ್ತೆ ಅಪ್ಪುಗೆಯ ಆಹ್ವಾನ ನೀಡುತ್ತದೆ. ಸತ್ತಮೇಲೆ ಸ್ವರ್ಗದ ಆಸೆಯನ್ನು ಹುಟ್ಟಿಸಿ ಬದುಕಿದ್ದವರನ್ನು ನರಕಕ್ಕೆ ತಳ್ಳಿದ ಆ ಹಿಂದಿನ ವ್ಯವಸ್ಥೆಗಳಿಗೆ ಪ್ರತಿಯಾಗಿ ಸಂಪತ್ತು ಸೃಷ್ಟಿಸುವ ಶ್ರಮಜೀವಿಗಳಿಗೆ ಭೂಮಿಯ ಮೇಲೆಯೇ ಸ್ವರ್ಗ ನಿರ್ಮಿಸಿದ ಮಹಾನ್ ಕಥನವದು. ಕಾರ್ಲ್‍ಮಾಕ್ರ್ಸ್ “ಈ ಹಿಂದಿನ ಎಲ್ಲಾ ಕ್ರಾಂತಿಗಳು ಸಮಾಜದ ಅಲ್ಪಸಂಖ್ಯಾತ(ಬಂಡವಾಳಶಾಹಿ ವರ್ಗ) ಜನರಿಗೆ ಸಂಪತ್ತನ್ನು, ಅಧಿಕಾರವನ್ನು ವರ್ಗಾಯಿಸಿದರೆ ಸಮಾಜವಾದಿ ಕ್ರಾಂತಿಯು ಮೊಟ್ಟಮೊದಲ ಬಾರಿಗೆ ಇತಿಹಾಸದಲ್ಲಿ ಅಲ್ಪಸಂಖ್ಯಾತರಿಂದ ಬಹುಸಂಖ್ಯಾತರಿಗೆ (ದುಡಿಯುವ ವರ್ಗಕ್ಕೆ) ಸಂಪತ್ತನ್ನು ವರ್ಗಾಯಿಸುತ್ತದೆ” ಎಂದು ನುಡಿದದ್ದನ್ನು ರಷ್ಯನ್ ಕ್ರಾಂತಿಯು ಋಜುವಾತು ಪಡಿಸಿತು.

ದುಡಿದು ಬೇಸತ್ತಾಗ, ದುಡಿದುಡಿದು ಸತ್ತಾಗ ಜನಕ ಹಿಗ್ಗಿನ ಹಾಡು...
ಒಂದು ಕಾಲಕ್ಕೆ ಯುರೋಪಿನ ರೋಗಿಷ್ಟ ದೇಶವೆಂದು ಹೆಸರಾಗಿದ್ದ ರಷ್ಯಾ, ಕ್ರಾಂತಿಯ ನಂತರ ಸಮರ್ಥ ನಾಯಕರಾದ ಲೆನಿನ್ ಮತ್ತು ಜೋಸೆಫ್ ಸ್ಟಾಲಿನ್‍ರ ನೇತೃತ್ವದಲ್ಲಿ ಹೊಸ ಬದಲಾವಣೆಗಳಿಗೆ ತೆರೆದುಕೊಂಡಿತು. ಕೇವಲ ಇಪ್ಪತ್ತು ವರ್ಷಗಳಲ್ಲಿ ಅಂದರೆ 1936ರ ಹೊತ್ತಿಗೆ ಸೋವಿಯತ್ ಒಕ್ಕೂಟವು ಉದ್ಯೋಗ, ಶಿಕ್ಷಣ, ಆರೋಗ್ಯ ಮುಂತಾದ ಬದುಕುವ ಹಕ್ಕುಗಳನ್ನು ಮೂಲಭೂತ ಹಕ್ಕುಗಳನ್ನಾಗಿ ಸಂವಿಧಾನದಲ್ಲಿ ಘೋಷಿಸಿತ್ತು. 1936 ನವೆಂಬರ್ 5ರಂದು ಸೋವಿಯತ್ ಸಂವಿಧಾನದ ಕರಡು ಪ್ರತಿಯ ಬಗ್ಗೆ ಮಾತನಾಡುತ್ತ ಸ್ಟಾಲಿನ್ ಹೇಳುತ್ತಾರೆ: ‘. . . ಸೋವಿಯತ್ ಶಕ್ತಿಯು ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಿದೆ, ಉದ್ಯೋಗದ ಹಕ್ಕನ್ನು, ವಿಶ್ರಾಂತಿ ಮತ್ತು ವಿರಾಮಗಳ ಹಕ್ಕನ್ನು, ಶಿಕ್ಷಣ ಪಡೆಯುವ ಹಕ್ಕನ್ನು ಜಾರಿಗೊಳಿಸಿದೆ; ಕಾರ್ಮಿಕರಿಗೆ, ರೈತರಿಗೆ ಮತ್ತು ಬುದ್ದಿಜೀವಿವರ್ಗಕ್ಕೆ ಉತ್ತಮ ಭೌತಿಕ ಮತ್ತು ಸಾಂಸ್ಕøತಿಕ ವಾತಾವರಣವನ್ನು ಒದಗಿಸಿದೆ ಮತ್ತು ಎಲ್ಲ ನಾಗರಿಕರಿಗೂ ರಹಸ್ಯ ಮತದಾನದೊಂದಿಗೆ ಸಾರ್ವತ್ರಿಕ, ನೇರ ಮತ್ತು ಸಮಾನ ಮತದಾನವನ್ನು ಜಾರಿಗೆ ತಂದಿದೆ. ಇವೆಲ್ಲವೂ ನಿಜ ಸಂಗತಿಗಳು, ಬರೀ ಭರವಸೆಗಳಲ್ಲ...’

ಕ್ರಾಂತಿಪೂರ್ವದಲ್ಲಿ ರಷ್ಯಾದ ಕೃಷಿಭೂಮಿಯು ಜಮೀನ್ದಾರರು ಮತ್ತು ಮಧ್ಯಮ ರೈತರಲ್ಲಿ ಹಂಚಿಹೋಗಿತ್ತು. ಉತ್ಪಾದಕತೆಯು ಅತ್ಯಂತ ಕೆಳಮಟ್ಟದಲ್ಲಿತ್ತು. ಹೀಗಾಗಿ ಭೂಮಿಯ ಖಾಸಗಿ ನಿಯಂತ್ರಣವನ್ನು ನಿರ್ಮೂಲನೆ ಮಾಡಿ, ಕೃಷಿಯ ಸಾಮುದಾಯೀಕರಣವನ್ನು ಚಳುವಳಿಯಂತೆ ಬೆಳೆಸಲಾಯಿತು. ಸಮಾಜವಾದಿ ವಿಧಾನವನ್ನು ಅಳವಡಿಸಿದ ಪರಿಣಾಮ ಕೆಲವೇ ವರ್ಷಗಳಲ್ಲಿ ಗೋಚರಿಸಿತು. 1927ರಲ್ಲಿ ಸುಮಾರು ಇಪ್ಪತ್ತು ಸಾವಿರ ಸಾಮುದಾಯಿಕ ಫಾರ್ಮ್‍ಗಳಿದ್ದರೆ, 1931ರ ಹೊತ್ತಿಗೆ 2ಲಕ್ಷ ಸಾಮುದಾಯಿಕ ಫಾರ್ಮ್‍ಗಳಾಗಿ ಮೂರನೇ ಎರಡು ಭಾಗ ಕೃಷಿಭೂಮಿ ಈ ವ್ಯವಸ್ಥೆಗೆ ಒಳಪಟ್ಟಿತು.

ಆಧುನಿಕ ಬಹುಬೆಳೆ ಕೃಷಿ ಪದ್ಧತಿ, ಯಂತ್ರೋಪಕರಣಗಳ ಬಳಕೆ, ರೈತರಿಗೆ ನೀಡಿದ ಶಿಕ್ಷಣದಿಂದಾಗಿ ಸೋವಿಯತ್ ರಷ್ಯಾವು ಜಗತ್ತಿನ ಅತಿದೊಡ್ಡ ಗೋಧಿ ಉತ್ಪಾದನಾ ದೇಶವಾಗಿ ಹೊರಹೊಮ್ಮಿತು. ಮಹಿಳೆಯರೂ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಫಾರ್ಮ್‍ಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ತೆರೆಯಲಾಯಿತು. ಅಲ್ಲದೇ ಶಾಲೆ, ಆಸ್ಪತ್ರೆ, ರಂಗಮಂದಿರ, ಸಿನಿಮಾ ಹಾಲ್ ಮತ್ತು ಕೃಷಿ ಪ್ರಯೋಗಾಲಯಗಳನ್ನೂ ಅಲ್ಲಿ ನಿರ್ಮಿಸಲಾಯಿತು.

ಹೆಣ್ಣುಮಕ್ಕಳು ನಮಗೆ ಪುಣ್ಯದ ಫಲ ತಾಯಿ...
ಹೆಣ್ಣುಮಕ್ಕಳು ಅಲ್ಲಿ ಪುಣ್ಯದ ಫಲಗಳೇ ಆದರು. ಪುರುಷರ ಸರಿಸಮಾನ ಅವಕಾಶಗಳನ್ನು ಅವರಿಗೆ ಒದಗಿಸಲಾಯಿತು. ನಿರ್ಧಾರಗಳನ್ನು ತೆಗೆದುಕೊಳ್ಳುವ ಎಲ್ಲ ಹಂತಗಳಲ್ಲಿಯೂ ಮಹಿಳಾ ಪ್ರಾತಿನಿಧ್ಯ ಶೇ.37ರಷ್ಟು ಇತ್ತು. ಲಕ್ಷಾಂತರ ಮಹಿಳೆಯರು ಸರ್ಕಾರದಲ್ಲಿ, ಸಾಮಾಜಿಕ ಸಂಘಟನೆಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ಅಧಿಕಾರವನ್ನು ನಿರ್ವಹಿಸಿದ್ದರು. ವೇಶ್ಯಾವಾಟಿಕೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿತ್ತು.

ಸೋವಿಯತ್ ಜನರ ಕಲೆ, ಸಾಹಿತ್ಯದ ಪ್ರೀತಿಯಂತೂ ಅಪಾರವಾದುದು. ಅದರ ಬಗ್ಗೆ ಒಂದು ವರ್ಷ ರಷ್ಯಾದಲ್ಲೇ ವಾಸವಿದ್ದ ಕನ್ನಡಿಗ ಪ್ರೊ.ಹೆಚ್.ಎಸ್ ಹರಿಶಂಕರ್ ವಿವರಿಸಿದ್ದಾರೆ., ಒಮ್ಮೆ ಅವರು ತಮ್ಮ ಸ್ನೇಹಿತನೊಡನೆ ಸಕೋಲ್‍ನಿಕಿ ಪಾರ್ಕಿಗೆ ಹೋದಾಗ ದೊಡ್ಡ ಕ್ಯೂ ಕಂಡರು. ಅದೇನೆಂದು ವಿಚಾರಿಸಿದಾಗ ಅದು ಪ್ರಸಿದ್ಧ ಕವಿಯ ಕವನ ವಾಚನ ಕೇಳಲು ಟಿಕೇಟ್‍ಗಾಗಿ ಸರತಿಸಾಲು! ಬಹಳ ದೂರದಿಂದಲೂ ಜನ ಬಂದಿದ್ದರು. ಟಿಕೇಟ್ ಸಿಗುವುದೋ, ಇಲ್ಲವೋ ಆತಂಕದಿಂದ ಇದ್ದರು. ಇವರು ಕುತೂಹಲದಿಂದ ಅಲ್ಲಿಯ ಪೊಲೀಸರಿಗೆ ವಿನಂತಿ ಮಾಡಿಕೊಂಡು ಒಳಹೋದಾಗ ಅಲ್ಲಿ ಸುಮಾರು ನಾಲ್ಕು ಸಾವಿರ ಜನ ಒಂದು ಗಂಟೆಯ ಕಾಲ ಉತ್ಕಟಿತರಾಗಿ ಕವನ ವಾಚನ ಆಲಿಸಿದರಂತೆ.

ಸಮಾಜವಾದಿ ವ್ಯವಸ್ಥೆಯ ಫಲಗಳು ಒಂದೆರಡಲ್ಲ. ವಿಶ್ವದ ಮೊದಲ ಗಗನಯಾತ್ರಿ ಯೂರಿ ಗಗಾರಿನ್ ಮತ್ತು ಮಹಿಳಾ ಗಗನಯಾತ್ರಿ ವ್ಯಾಲೆಂಟೈನಾ ಟೆರೆಸ್ಕೋವಾ ಈ ದೇಶದವರೇ ಎಂಬುದು ಕಾಕತಾಳೀಯವಲ್ಲ. ಎರಡನೇ ಮಹಾಯುದ್ಧದಲ್ಲಿ ಮೈತ್ರಿಕೂಟದ ದೇಶಗಳೆಲ್ಲ ವಿಶ್ವಾಸದ್ರೋಹ ಎಸಗಿದರೂ ಅಂಜದೇ ಅಳುಕದೇ ಫ್ಯಾಸಿಸ್ಟ್ ಹಿಟ್ಲರ್‍ನ ಸೈನ್ಯವನ್ನು ಏಕಾಂಗಿಯಾಗಿ ಎದುರಿಸಿ ಸೋಲಿಸಿದ ದೇಶ. ಎರಡುಕೋಟಿಗೂ ಅಧಿಕ ಜನರು ಹೋರಾಡುತ್ತ ಹುತಾತ್ಮರಾದರು. ಸಾವಿರಾರು ಊರು, ನಗರಗಳು ನಾಶವಾದವು. ಆದರೂ ಬರೀ ಮೂರೇ ವರ್ಷಗಳಲ್ಲಿ ಆರ್ಥಿಕತೆಗೆ ಚೈತನ್ಯ ನೀಡಿ ಸಮಾಜವನ್ನು ಕಟ್ಟಿ ನಿಲ್ಲಿಸಲಾಯಿತು. ಕ್ರೀಡಾಪಟುಗಳು ಒಲಿಂಪಿಕ್ಸ್‍ನಲ್ಲಿ ಪದಕಗಳ ಕೊಳ್ಳೆ ಹೊಡೆದರು.

ದಶದಿಕ್ಕುಗಳಿಗೆ ಮಾರ್ದನಿಸಿದ ಕ್ರಾಂತಿ ಕಹಳೆ
ಸಮಾಜವಾದಿ ಕ್ರಾಂತಿ ಕೇವಲ ಸೋವಿಯತ್ ದೇಶಕ್ಕಷ್ಟೇ ಸೀಮಿತವಾಗಲಿಲ್ಲ. ಮಾರ್ಕ್ಸ್‌ವಾದ ಒಂದು ಭ್ರಮಾತ್ಮಕ ಸಿದ್ಧಾಂತವೆಂದು ಮೂಗು ಮುರಿಯುತ್ತಿದ್ದವರಿಗೆ ಅದು ವಾಸ್ತವವೆಂದು ತೋರಿಸಿ ಮಾನವತೆಯ ಸಮಾಜಕ್ಕೆ ರೂಪು ಕೊಟ್ಟವರು ಲೆನಿನ್ ಮತ್ತು ಸ್ಟಾಲಿನ್. ಅದು ನಿಜವಾದ ಪ್ರಜಾತಾಂತ್ರಿಕ ಮೌಲ್ಯಗಳನ್ನು ಜಗತ್ತಿಗೆ ಸಾರಿ ಹೇಳಿತು. ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳಿಲ್ಲದ ಪ್ರಜಾಪ್ರಭುತ್ವ ನಿರರ್ಥಕವೆಂದು ಜನ ಗುರುತಿಸತೊಡಗಿದರು.

ಸೋವಿಯತ್ ರಷ್ಯಾವು ಸಾಮ್ರಾಜ್ಯಶಾಹಿ ಆಕ್ರಮಣದ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಭಾರತದಂತಹ ಹಲವಾರು ದೇಶಗಳಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿತು. ಇದರ ಸ್ಫೂರ್ತಿಯಿಂದಾಗಿಯೇ ಕ್ಯೂಬಾ, ಚೀನಾ, ಉತ್ತರ ಕೋರಿಯಾ, ವಿಯೆಟ್ನಾಮ್, ಲಾವೋಸ್ ಮುಂತಾದ ದೇಶಗಳಲ್ಲಿ ಕ್ರಾಂತಿಯಾಗಿ ಸಮಾಜವಾದಿ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿತು. ಅದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳಾದ ಭಗತ್‍ಸಿಂಗ್, ನೇತಾಜಿ ಮುಂತಾದವರ ಮೇಲೆ ಅಪಾರ ಪ್ರಭಾವ ಬೀರಿತು.

ಭಗತ್‍ಸಿಂಗ್ “ನಾವು ಕ್ರಾಂತಿಕಾರಿಗಳು, ಅಧಿಕಾರವನ್ನು ಹಿಡಿಯಲು ಮತ್ತು ಕ್ರಾಂತಿಕಾರಿ ಸರ್ಕಾರವನ್ನು ಸ್ಥಾಪಿಸಲು ಯತ್ನಿಸುತ್ತಿದ್ದೇವೆ. ಅಂತಹ ಸರ್ಕಾರವು, ರಷ್ಯಾದಂತೆ ತನ್ನೆಲ್ಲ ಸಂಪನ್ಮೂಲಗಳನ್ನು ಜನಸಮೂಹದ ಶಿಕ್ಷಣಕ್ಕಾಗಿ ಬಳಸಬೇಕು” ಎಂದಿದ್ದಾರೆ. ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರಂತೂ “ಕೇವಲ ಹತ್ತು ವರ್ಷಗಳಲ್ಲಿ ಲಕ್ಷಾಂತರ ಜನರನ್ನು ಅಜ್ಞಾನ ಮತ್ತು ಅಧಃಪತನಗಳ ಕತ್ತಲೆಯಿಂದ ಘನತೆ-ಗೌರವಗಳ ಬೆಳಕಿನೆಡೆಗೆ ಸೋವಿಯತ್ ಒಕ್ಕೂಟ ಮುನ್ನಡೆಸಿದ್ದನ್ನು ನಾನು ಕಣ್ಣಾರೆ ನೋಡಿರದಿದ್ದರೆ, ನಂಬುವುದೇ ಅಸಾಧ್ಯವಾಗುತ್ತಿತ್ತು. ರಷ್ಯಾಗೆ ಭೇಟಿ ನೀಡಿರದಿದ್ದರೆ, ನನ್ನ ಜೀವನದ ತೀರ್ಥಯಾತ್ರೆ ಅಪೂರ್ಣವಾಗುತ್ತಿತ್ತು” ಎಂದು ಉದ್ಗರಿಸಿದ್ದಾರೆ. ‘ವಿಶ್ವದ ಕಾರ್ಮಿಕರೇ ಒಂದಾಗಿ’ ಎಂಬ ಕರೆಯ ಮೂಲಕ ದುಡಿಯುವ ಜನರಲ್ಲಿ ಹೊಸ ಉತ್ಸಾಹ, ತಿಳಿವಳಿಕೆ ತುಂಬಿದ್ದು ಸೋವಿಯತ್ ಸಮಾಜದ ಮಹಾನ್ ಸಾಧನೆ.

ಸ್ವರ್ಗದ ಹೂ ಜಾರಿ ಮತ್ತೆ ಬಂಡವಾಳಶಾಹಿ ನರಕಕ್ಕೆ
“ಮೈಮರೆತರೆ ಬಂಡವಾಳಶಾಹಿ ವ್ಯವಸ್ಥೆ ಆಕ್ರಮಣಕ್ಕೆ ಸದಾ ಸಜ್ಜಾಗಿರುತ್ತದೆ” ಎಂಬುದು ಕಾರ್ಲ್‍ಮಾರ್ಕ್ಸ್‌ರ ಎಚ್ಚರಿಕೆಯ ಮಾತು. ಇಡೀ ವಿಶ್ವಕ್ಕೆ ಸಮಸಮಾಜದ ಕನಸನ್ನು ನನಸು ಮಾಡಿಕೊಳ್ಳುವ ದಾರಿ ತೋರಿಸಿದ್ದ ರಷ್ಯಾ ತಾನೇ ಆ ದಾರಿಯಲ್ಲಿ ಮುಳ್ಳುಕಂಟಿಗಳು ಬೆಳೆಯಲು ಅವಕಾಶ ಮಾಡಿಕೊಟ್ಟಿತು. ಅಂದರೆ ಸಮಾಜವಾದ ಜಾರಿಗೆ ಬಂದ ನಂತರ ನಿರಂತರವಾಗಿ ಜನರ ಪ್ರಜ್ಞಾಮಟ್ಟ, ಸಾಂಸ್ಕೃತಿಕ ತಿಳಿವಳಿಕೆ ಹೆಚ್ಚಿಸುವ ಕೆಲಸವನ್ನು ನಿರಂತರವಾಗಿ ಮಾಡಬೇಕು. ಆದರೆ ವಾಸ್ತವವೆಂದರೆ ಸೋವಿಯತ್ ಒಕ್ಕೂಟ ಎಲ್ಲಿಯವರೆಗೆ ಮಾಕ್ರ್ಸ್‍ವಾದದ ಚಿಂತನೆಗಳಿಗೆ ಬದ್ಧವಾಗಿತ್ತೋ ಅಲ್ಲಿಯವರೆಗೆ ಅದು ಅಮೋಘ ಸಾಧನೆಗಳನ್ನು ಮಾಡಿತು. ಆದರೆ 1953ರಲ್ಲಿ ನಾಯಕತ್ವ ವಹಿಸಿದ ಕ್ರುಶ್ಚೆವ್ ಮಾಕ್ರ್ಸ್‍ವಾದ-ಲೆನಿನ್‍ವಾದದ ಮೂಲ ತತ್ವಗಳನ್ನು ತಿರುಚಿದರು.

ದೇಶದೊಳಗೆ ಮತ್ತು ಅಂತರರಾಷ್ಟ್ರೀಯವಾಗಿ ಬಂಡವಾಳಶಾಹಿ-ಸಾಮ್ರಾಜ್ಯಶಾಹಿಗಳ ಅಪಾಯವನ್ನು ಅಲ್ಲಗಳೆದರು. ಕಾರ್ಮಿಕರಲ್ಲಿ ಸಮಾಜಕ್ಕಾಗಿ ದುಡಿಯಬೇಕು ಎಂಬ ಭಾವನೆಯ ಬದಲಾಗಿ ಹೆಚ್ಚು ಹಣಕ್ಕಾಗಿ ದುಡಿಯಬೇಕು ಎಂಬ ಸ್ವಾರ್ಥದ ಬೆಳವಣಿಗೆಗೆ ಅವಕಾಶ ನೀಡಿದರು. ಯಾವ ಪ್ರಮಾಣದಲ್ಲಿ ಜೀವನದ ಗುಣಮಟ್ಟವನ್ನು ಉತ್ತಮಪಡಿಸುವ ಭೌತಿಕ ಉತ್ಪಾದನೆಯು ಬೆಳವಣಿಗೆ ಹೊಂದಿತೋ ಅದೇ ಪ್ರಮಾಣದಲ್ಲಿ ಕಾರ್ಮಿಕರ ಸೈದ್ಧಾಂತಿಕ, ಸಾಂಸ್ಕೃತಿಕ ಮಟ್ಟವನ್ನು ಬೆಳೆಸಲು ಸೂಕ್ತ ಕ್ರಮವನ್ನು ಕೈಗೊಳ್ಳಲಿಲ್ಲ. ಇದರಿಂದ ಸಹಜವಾಗಿ ಕಾರ್ಮಿಕ ವರ್ಗದಲ್ಲೂ ವರ್ಗಪ್ರಜ್ಞೆಯ ಕುಸಿತ, ವ್ಯಕ್ತಿವಾದಗಳು ಬೆಳೆಯಲು ಕಾರಣವಾಯಿತು. ನಂತರ ಬ್ರೆಜ್ನೆವ್ ಮತ್ತು ಗೊರ್ಬಚೆವ್ ಅವಧಿಗಳಲ್ಲೂ ಇವೇ ನೀತಿಗಳು ಮುಂದುವರಿದಿದ್ದರಿಂದ 1991ರಲ್ಲಿ ಸುಲಭವಾಗಿ ಪ್ರತಿಕ್ರಾಂತಿ ಸಾಧ್ಯವಾಯಿತು.

ನವೆಂಬರ್ ಕ್ರಾಂತಿ ಬಿಟ್ಟುಹೋದ ಪಾಠಗಳು
ಭಾರತದ ಕ್ರಾಂತಿಕಾರಿ ಹೋರಾಟಗಳಲ್ಲಿ ಹೊರಹೊಮ್ಮಿದ ನೇತಾಜಿ, ಭಗತ್‍ಸಿಂಗ್, ಆಜಾದ್ ಸಮಾಜವಾದಿ ಕ್ರಾಂತಿಗಾಗಿ ಹಂಬಲಿಸಿದ್ದರು. ರಷ್ಯನ್ ನವೆಂಬರ್ ಕ್ರಾಂತಿ ಅವರಿಗೆ ಆದರ್ಶವಾಗಿತ್ತು. ಭಾರತವು ಸೇರಿದಂತೆ ವಿಶ್ವದ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆ ಇಂದು ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ. 170 ವರ್ಷಗಳ ಹಿಂದೆ ಕಮ್ಯುನಿಸ್ಟ್ ಪ್ರಣಾಳಿಕೆಯಲ್ಲಿ ಕಾರ್ಲ್‍ಮಾರ್ಕ್ಸ್‌ ಅವರು ಪ್ರತಿಪಾದಿಸಿದ ಬಂಡವಾಳಶಾಹಿ ವ್ಯವಸ್ಥೆಯ ಚಲನೆ ರಹಿತ ಸಮಾಜದ ಹಂದರ ಹೀಗಿದೆ - ಬಂಡವಾಳಗಾರರು ಸಮಾಜದ ಪ್ರತಿಯೊಂದನ್ನು ಸರಕನ್ನಾಗಿ ಮಾರ್ಪಡಿಸಿದ್ದಾರೆ.

ಕೌಟುಂಬಿಕ ಸಂಬಂಧಗಳನ್ನೂ ನಗದು ಹಣಕ್ಕಾಗಿ ಕೊಳ್ಳುವ ವ್ಯಾಪಾರವನ್ನಾಗಿಸಿದ್ದಾರೆ. ವ್ಯಾಪಾರಿ ದೃಷ್ಟಿಯಿಂದ ನೋಡುವ ಈ ವ್ಯವಸ್ಥೆಯಲ್ಲಿ ಮೌಲ್ಯಗಳು, ಭಾವನೆಗಳು ಪ್ರತಿಯೊಂದು ಲಾಭ-ನಷ್ಟದ ಆಧಾರದ ಸರಕುಗಳೇ ಆಗಿವೆ ಎಂದು ಹೇಳಿದ್ದಾರೆ! ಇದು ಇಂದು ಇನ್ನಷ್ಟು ನಿಖರವಾಗಿ-ಪ್ರಖರವಾಗಿ ಗೋಚರಿಸುತ್ತಿದೆ. ಜಗತ್ತಿನ ಕೆಲವೇ ಕೆಲವು ಕಾರ್ಪೊರೇಟ್ ಕಂಪನಿಗಳು, ಬಂಡವಾಳಗಾರರ ಮನೆತನಗಳು ಇಡೀ ಸಂಪತ್ತನ್ನು ತಮ್ಮಲ್ಲಿ ಕೇಂದ್ರೀಕರಿಸಿಕೊಂಡಿವೆ. ಇದು ಈಗಲೂ ಶೇ.99 ದುಡಿಯುವ ಜನರ ಸಂಪತ್ತು ಶೇ.1 ರಷ್ಟು ಮಾಲೀಕರಲ್ಲಿ ಅಂತರ್ಗತವಾಗಿರುವುದು ಸಾಬೀತುಪಡಿಸುತ್ತದೆ. ಈ ಅಸಮಾನತೆಯ ವಿರುದ್ದ ಶೋಷಿತರ ಸಂಘಟಿತ ಹೋರಾಟವೊಂದೇ ಕ್ರಾಂತಿಗೆ ದಾರಿ ತೋರಿಸಬಲ್ಲದು.

ರಷ್ಯಾದಲ್ಲಿ ಹಲವು ವರ್ಷಗಳ ಕಾಲ ದುಡಿದ ಅಮೇರಿಕನ್ ಪತ್ರಕರ್ತೆ ಅನ್ನಾ ಲೂಯಿ ಸ್ಟ್ರಾಂಗ್ ತಮ್ಮ ‘ಸ್ಟಾಲಿನ್ ಎರಾ’ ಕೃತಿಯಲ್ಲಿ ಒಂದು ಘಟನೆಯನ್ನು ಹೀಗೆ ವಿವರಿಸಿದ್ದರೆ: ‘ಯುದ್ಧದ ನಂತರ 1947ರಲ್ಲಿ ನಾನು ಯುಎಸ್‍ಎಸ್‍ಆರ್ ಮೇಲೆ ವಿಮಾನಯಾನ ಮಾಡಿ, ವೋಲ್ಗಾದ ಕಜಾನ್‍ನಲ್ಲಿ ಇಳಿದೆ. ಅಲ್ಲಿ ಡಜನ್‍ಗಟ್ಟಲೇ ಸಣ್ಣ ವಿಮಾನಗಳಿದ್ದವು. ಅದೊಂದು ಮಿಲಿಟರಿ ಕೇಂದ್ರವಿರಬೇಕೆಂದು ಭಾವಿಸಿ ಅಲ್ಲಿ ಇಳಿಯಲು ನಮಗೆ ಅವಕಾಶ ನೀಡಿದ್ದಕ್ಕೆ ಆಶ್ಚರ್ಯವಾಯಿತು. ಅಲ್ಲಿ ವಿಚಾರಿಸಿದರೆ, “ಅಯ್ಯೋ ಇಲ್ಲ. ಇವೆಲ್ಲ ನಮ್ಮ ಸಾಮೂಹಿಕ ಕೃಷಿಕ್ಷೇತ್ರದ ರೈತರದ್ದು. ಏನೇನೋ ಕೆಲಸದ ಮೇಲೆ ನಗರಕ್ಕೆ ಬಂದಿದ್ದಾರೆ” ಎಂದು ಒಬ್ಬ ರಷ್ಯನ್ ಹೇಳಿದ.’ (ಸ್ಟಾಲಿನ್ ಎರಾ, ಪುಟ 46)

ಎರಡನೇ ಮಹಾಯುದ್ಧದಲ್ಲಿ ಜರ್ಮನಿಯ ನಾಜಿ ಸೈನ್ಯಕ್ಕೆ ಜೋಸೆಫ್ ಸ್ಟಾಲಿನ್‍ರ ಮಗ ಯಾಕೋವ್ ಸೆರೆಸಿಗುತ್ತಾನೆ. ಹಿಟ್ಲರ್ ಸೈನ್ಯವು ಸೋವಿಯತ್ ವಶದಲ್ಲಿದ್ದ ತಮ್ಮ ಫೀಲ್ಡ್ ಮಾರ್ಷಲ್ ಪೌಲಸ್‍ನನ್ನು ಬಿಡುಗಡೆ ಮಾಡಿದರೆ ನಾವು ನಿಮ್ಮ ಮಗನನ್ನು ಬಿಡುತ್ತೇವೆ ಎನ್ನುತ್ತದೆ. ಆಗ ಸ್ಟಾಲಿನ್ ‘ನನ್ನ ಮಗ ಒಬ್ಬ ಸಾಮಾನ್ಯ ಸೈನಿಕ. ಸೈನಿಕನ ಬದಲು ಒಬ್ಬ ಸೈನಿಕನನ್ನು ಬಿಡಬಹುದೇ ಹೊರತು ಫೀಲ್ಡ್ ಮಾರ್ಷಲ್‍ನನ್ನು ಅಲ್ಲ!’ ಎಂದು ಉತ್ತರಿಸುತ್ತಾರೆ. ಕಡೆಗೆ ಯಾಕೋವ್‍ನನ್ನು ಜರ್ಮನಿ ಸೈನ್ಯ ಗುಂಡಿಕ್ಕಿ ಸಾಯಿಸುತ್ತದೆ.

ಒಮ್ಮೆ ಅವರು ತಮ್ಮ ಸ್ನೇಹಿತನೊಡನೆ ಸಕೋಲ್‍ನಿಕಿ ಪಾರ್ಕಿಗೆ ಹೋದಾಗ ದೊಡ್ಡ ಕ್ಯೂ ಕಂಡರು. ಅದೇನೆಂದು ವಿಚಾರಿಸಿದಾಗ ಅದು ಪ್ರಸಿದ್ಧ ಕವಿಯ ಕವನ ವಾಚನ ಕೇಳಲು ಟಿಕೆಟ್‍ಗಾಗಿ ಸರತಿಸಾಲು! ಬಹಳ ದೂರದಿಂದಲೂ ಜನ ಬಂದಿದ್ದರು. ಟಿಕೆಟ್ ಸಿಗುವುದೋ, ಇಲ್ಲವೋ ಆತಂಕದಿಂದ ಇದ್ದರು. ಇವರು ಕುತೂಹಲದಿಂದ ಅಲ್ಲಿಯ ಪೊಲೀಸರಿಗೆ ವಿನಂತಿ ಮಾಡಿಕೊಂಡು ಒಳಹೋದಾಗ ಅಲ್ಲಿ ಸುಮಾರು ನಾಲ್ಕು ಸಾವಿರ ಜನ ಒಂದು ಗಂಟೆಯ ಕಾಲ ಉತ್ಕಟಿತರಾಗಿ ಕವನ ವಾಚನ ಆಲಿಸಿದರಂತೆ.

ಸಮಾಜವಾದಿ ವ್ಯವಸ್ಥೆಯ ಫಲಗಳು ಒಂದೆರಡಲ್ಲ. ವಿಶ್ವದ ಮೊದಲ ಗಗನಯಾತ್ರಿ ಯೂರಿ ಗಗಾರಿನ್ ಮತ್ತು ಮಹಿಳಾ ಗಗನಯಾತ್ರಿ ವ್ಯಾಲೆಂಟೈನಾ ಟೆರೆಸ್ಕೋವಾ ಈ ದೇಶದವರೇ ಎಂಬುದು ಕಾಕತಾಳೀಯವಲ್ಲ. ಎರಡನೇ ಮಹಾಯುದ್ಧದಲ್ಲಿ ಮೈತ್ರಿಕೂಟದ ದೇಶಗಳೆಲ್ಲ ವಿಶ್ವಾಸದ್ರೋಹ ಎಸಗಿದರೂ ಅಂಜದೇ ಅಳುಕದೇ ಫ್ಯಾಸಿಸ್ಟ್ ಹಿಟ್ಲರ್‌ನ ಸೈನ್ಯವನ್ನು ಏಕಾಂಗಿಯಾಗಿ ಎದುರಿಸಿ ಸೋಲಿಸಿದ ದೇಶ. ಎರಡು ಕೋಟಿಗೂ ಅಧಿಕ ಜನರು ಹೋರಾಡುತ್ತ ಹುತಾತ್ಮರಾದರು. ಸಾವಿರಾರು ಊರು, ನಗರಗಳು ನಾಶವಾದವು. ಆದರೂ, ಬರೀ ಮೂರೇ ವರ್ಷಗಳಲ್ಲಿ ಆರ್ಥಿಕತೆಗೆ ಚೈತನ್ಯ ನೀಡಿ ಸಮಾಜವನ್ನು ಕಟ್ಟಿ ನಿಲ್ಲಿಸಲಾಯಿತು. ಕ್ರೀಡಾಪಟುಗಳು ಒಲಿಂಪಿಕ್‌ನಲ್ಲಿ ಪದಕಗಳ ಕೊಳ್ಳೆ ಹೊಡೆದರು.

ದಶದಿಕ್ಕುಗಳಿಗೆ ಮಾರ್ದನಿಸಿದ ಕ್ರಾಂತಿ ಕಹಳೆ: ಸಮಾಜವಾದಿ ಕ್ರಾಂತಿ ಕೇವಲ ಸೋವಿಯತ್  ದೇಶಕ್ಕಷ್ಟೇ ಸೀಮಿತವಾಗಲಿಲ್ಲ. ಮಾರ್ಕ್ಸ್‌ವಾದ ಒಂದು ಭ್ರಮಾತ್ಮಕ ಸಿದ್ಧಾಂತವೆಂದು ಮೂಗು ಮುರಿಯುತ್ತಿದ್ದವರಿಗೆ ಅದು ವಾಸ್ತವವೆಂದು ತೋರಿಸಿ ಮಾನವತೆಯ ಸಮಾಜಕ್ಕೆ ರೂಪು ಕೊಟ್ಟವರು ಲೆನಿನ್ ಮತ್ತು ಸ್ಟಾಲಿನ್. ಅದು ನಿಜವಾದ ಪ್ರಜಾತಾಂತ್ರಿಕ ಮೌಲ್ಯಗಳನ್ನು ಜಗತ್ತಿಗೆ ಸಾರಿ ಹೇಳಿತು. ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳಿಲ್ಲದ ಪ್ರಜಾಪ್ರಭುತ್ವ ನಿರರ್ಥಕವೆಂದು ಜನ ಗುರುತಿಸತೊಡಗಿದರು.

ಸೋವಿಯತ್  ರಷ್ಯಾವು ಸಾಮ್ರಾಜ್ಯಶಾಹಿ ಆಕ್ರಮಣದ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಭಾರತದಂತಹ ಹಲವಾರು ದೇಶಗಳಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿತು. ಇದರ ಸ್ಫೂರ್ತಿಯಿಂದಾಗಿಯೇ ಕ್ಯೂಬಾ, ಚೀನಾ, ಉತ್ತರ ಕೋರಿಯಾ, ವಿಯೆಟ್ನಾಂ, ಲಾವೋಸ್ ಮುಂತಾದ ದೇಶಗಳಲ್ಲಿ ಕ್ರಾಂತಿಯಾಗಿ ಸಮಾಜವಾದಿ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿತು. ಅದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳಾದ ಭಗತ್‍ಸಿಂಗ್, ನೇತಾಜಿ ಮುಂತಾದವರ ಮೇಲೆ ಅಪಾರ ಪ್ರಭಾವ ಬೀರಿತು.

ಭಗತ್‍ಸಿಂಗ್ ‘ನಾವು ಕ್ರಾಂತಿಕಾರಿಗಳು, ಅಧಿಕಾರವನ್ನು ಹಿಡಿಯಲು ಮತ್ತು ಕ್ರಾಂತಿಕಾರಿ ಸರ್ಕಾರವನ್ನು ಸ್ಥಾಪಿಸಲು ಯತ್ನಿಸುತ್ತಿದ್ದೇವೆ. ಅಂತಹ ಸರ್ಕಾರವು, ರಷ್ಯಾದಂತೆ ತನ್ನೆಲ್ಲ ಸಂಪನ್ಮೂಲಗಳನ್ನು ಜನಸಮೂಹದ ಶಿಕ್ಷಣಕ್ಕಾಗಿ ಬಳಸಬೇಕು’ ಎಂದಿದ್ದಾರೆ. ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರಂತೂ ‘ಕೇವಲ ಹತ್ತು ವರ್ಷಗಳಲ್ಲಿ ಲಕ್ಷಾಂತರ ಜನರನ್ನು ಅಜ್ಞಾನ ಮತ್ತು ಅಧಃಪತನಗಳ ಕತ್ತಲೆಯಿಂದ ಘನತೆ- ಗೌರವಗಳ ಬೆಳಕಿನೆಡೆಗೆ ಸೋವಿಯತ್   ಒಕ್ಕೂಟ ಮುನ್ನಡೆಸಿದ್ದನ್ನು ನಾನು ಕಣ್ಣಾರೆ ನೋಡಿರದಿದ್ದರೆ, ನಂಬುವುದೇ ಅಸಾಧ್ಯವಾಗುತ್ತಿತ್ತು. ರಷ್ಯಾಗೆ ಭೇಟಿ ನೀಡಿರದಿದ್ದರೆ, ನನ್ನ ಜೀವನದ ತೀರ್ಥಯಾತ್ರೆ ಅಪೂರ್ಣವಾಗುತ್ತಿತ್ತು’ ಎಂದು ಉದ್ಗರಿಸಿದ್ದಾರೆ. ‘ವಿಶ್ವದ ಕಾರ್ಮಿಕರೇ ಒಂದಾಗಿ’ ಎಂಬ ಕರೆಯ ಮೂಲಕ ದುಡಿಯುವ ಜನರಲ್ಲಿ ಹೊಸ ಉತ್ಸಾಹ, ತಿಳಿವಳಿಕೆ ತುಂಬಿದ್ದು ಸೋವಿಯತ್  ಸಮಾಜದ ಮಹಾನ್ ಸಾಧನೆ.

ಸ್ವರ್ಗದ ಹೂ ಜಾರಿ ಮತ್ತೆ ಬಂಡವಾಳಶಾಹಿ ನರಕಕ್ಕೆ: ‘ಮೈಮರೆತರೆ ಬಂಡವಾಳಶಾಹಿ ವ್ಯವಸ್ಥೆ ಆಕ್ರಮಣಕ್ಕೆ ಸದಾ ಸಜ್ಜಾಗಿರುತ್ತದೆ’ ಎಂಬುದು ಕಾರ್ಲ್‌ಮಾರ್ಕ್ಸ್‌ರ  ಎಚ್ಚರಿಕೆಯ ಮಾತು. ಇಡೀ ವಿಶ್ವಕ್ಕೆ ಸಮಸಮಾಜದ ಕನಸನ್ನು ನನಸು ಮಾಡಿಕೊಳ್ಳುವ ದಾರಿ ತೋರಿಸಿದ್ದ ರಷ್ಯಾ ತಾನೇ ಆ ದಾರಿಯಲ್ಲಿ ಮುಳ್ಳುಕಂಟಿಗಳು ಬೆಳೆಯಲು ಅವಕಾಶ ಮಾಡಿಕೊಟ್ಟಿತು. ಅಂದರೆ ಸಮಾಜವಾದ ಜಾರಿಗೆ ಬಂದ ನಂತರ ನಿರಂತರವಾಗಿ ಜನರ ಪ್ರಜ್ಞಾಮಟ್ಟ, ಸಾಂಸ್ಕೃತಿಕ ತಿಳಿವಳಿಕೆ ಹೆಚ್ಚಿಸುವ ಕೆಲಸವನ್ನು ನಿರಂತರವಾಗಿ ಮಾಡಬೇಕು. ಆದರೆ, ವಾಸ್ತವವೆಂದರೆ ಸೋವಿಯತ್  ಒಕ್ಕೂಟ ಎಲ್ಲಿಯವರೆಗೆ ಮಾರ್ಕ್ಸ್‌ ವಾದದ ಚಿಂತನೆಗಳಿಗೆ ಬದ್ಧವಾಗಿತ್ತೋ ಅಲ್ಲಿಯವರೆಗೆ ಅದು ಅಮೋಘ ಸಾಧನೆಗಳನ್ನು ಮಾಡಿತು. ಆದರೆ 1953ರಲ್ಲಿ ನಾಯಕತ್ವ ವಹಿಸಿದ ಕ್ರುಶ್ಚೆವ್     ಮಾರ್ಕ್ಸ್‌ವಾದ-ಲೆನಿನ್‍ವಾದದ ಮೂಲ ತತ್ವಗಳನ್ನು ತಿರುಚಿದರು.

ದೇಶದೊಳಗೆ ಮತ್ತು ಅಂತರರಾಷ್ಟ್ರೀಯವಾಗಿ ಬಂಡವಾಳಶಾಹಿ-ಸಾಮ್ರಾಜ್ಯಶಾಹಿಗಳ ಅಪಾಯವನ್ನು ಅಲ್ಲಗಳೆದರು. ಕಾರ್ಮಿಕರಲ್ಲಿ ಸಮಾಜಕ್ಕಾಗಿ ದುಡಿಯಬೇಕು ಎಂಬ ಭಾವನೆಯ ಬದಲಾಗಿ ಹೆಚ್ಚು ಹಣಕ್ಕಾಗಿ ದುಡಿಯಬೇಕು ಎಂಬ ಸ್ವಾರ್ಥದ ಬೆಳವಣಿಗೆಗೆ ಅವಕಾಶ ನೀಡಿದರು. ಯಾವ ಪ್ರಮಾಣದಲ್ಲಿ ಜೀವನದ ಗುಣಮಟ್ಟವನ್ನು ಉತ್ತಮಪಡಿಸುವ ಭೌತಿಕ ಉತ್ಪಾದನೆಯು ಬೆಳವಣಿಗೆ ಹೊಂದಿತೋ ಅದೇ ಪ್ರಮಾಣದಲ್ಲಿ ಕಾರ್ಮಿಕರ ಸೈದ್ಧಾಂತಿಕ, ಸಾಂಸ್ಕೃತಿಕ ಮಟ್ಟವನ್ನು ಬೆಳೆಸಲು ಸೂಕ್ತ ಕ್ರಮವನ್ನು ಕೈಗೊಳ್ಳಲಿಲ್ಲ. ಇದರಿಂದ ಸಹಜವಾಗಿ ಕಾರ್ಮಿಕ ವರ್ಗದಲ್ಲೂ ವರ್ಗಪ್ರಜ್ಞೆಯ ಕುಸಿತ, ವ್ಯಕ್ತಿವಾದಗಳು ಬೆಳೆಯಲು ಕಾರಣವಾಯಿತು. ನಂತರ ಬ್ರೆಜ್ನೆವ್  ಮತ್ತು ಗೊರ್ಬಚೆವ್  ಅವಧಿಗಳಲ್ಲೂ ಇವೇ ನೀತಿಗಳು ಮುಂದುವರಿದಿದ್ದರಿಂದ 1991ರಲ್ಲಿ ಸುಲಭವಾಗಿ ಪ್ರತಿಕ್ರಾಂತಿ ಸಾಧ್ಯವಾಯಿತು.

ನವೆಂಬರ್‌ ಕ್ರಾಂತಿ ಬಿಟ್ಟುಹೋದ ಪಾಠಗಳು: ಭಾರತದ ಕ್ರಾಂತಿಕಾರಿ ಹೋರಾಟಗಳಲ್ಲಿ ಹೊರಹೊಮ್ಮಿದ ನೇತಾಜಿ, ಭಗತ್‍ಸಿಂಗ್,  ಆಜಾದ್ ಸಮಾಜವಾದಿ ಕ್ರಾಂತಿಗಾಗಿ ಹಂಬಲಿಸಿದ್ದರು. ನವೆಂಬರ್ ಕ್ರಾಂತಿ ಅವರಿಗೆ ಆದರ್ಶವಾಗಿತ್ತು. ಭಾರತವು ಸೇರಿದಂತೆ ವಿಶ್ವದ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆ ಇಂದು ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ. 170 ವರ್ಷಗಳ ಹಿಂದೆ ಕಮ್ಯುನಿಸ್ಟ್‌  ಪ್ರಣಾಳಿಕೆಯಲ್ಲಿ ಕಾರ್ಲ್‌ಮಾರ್ಕ್ಸ್‌ ಅವರು ಪ್ರತಿಪಾದಿಸಿದ ಬಂಡವಾಳಶಾಹಿ ವ್ಯವಸ್ಥೆಯ ಚಲನೆ ರಹಿತ ಸಮಾಜದ ಹಂದರ ಹೀಗಿದೆ- ಬಂಡವಾಳಗಾರರು ಸಮಾಜದ ಪ್ರತಿಯೊಂದನ್ನು ಸರಕನ್ನಾಗಿ ಮಾರ್ಪಡಿಸಿದ್ದಾರೆ.

ಕೌಟುಂಬಿಕ ಸಂಬಂಧಗಳನ್ನೂ ನಗದು ಹಣಕ್ಕಾಗಿ ಕೊಳ್ಳುವ ವ್ಯಾಪಾರವನ್ನಾಗಿಸಿದ್ದಾರೆ. ವ್ಯಾಪಾರಿ ದೃಷ್ಟಿಯಿಂದ ನೋಡುವ ಈ ವ್ಯವಸ್ಥೆಯಲ್ಲಿ ಮೌಲ್ಯಗಳು, ಭಾವನೆಗಳು ಪ್ರತಿಯೊಂದು ಲಾಭ-ನಷ್ಟದ ಆಧಾರದ ಸರಕುಗಳೇ ಆಗಿವೆ ಎಂದು ಹೇಳಿದ್ದಾರೆ!

ಇದು ಇಂದು ಇನ್ನಷ್ಟು ನಿಖರವಾಗಿ- ಪ್ರಖರವಾಗಿ ಗೋಚರಿಸುತ್ತಿದೆ. ಜಗತ್ತಿನ ಕೆಲವೇ ಕೆಲವು ಕಾರ್ಪೊರೇಟ್ ಕಂಪನಿಗಳು, ಬಂಡವಾಳಗಾರರ ಮನೆತನಗಳು ಇಡೀ ಸಂಪತ್ತನ್ನು ತಮ್ಮಲ್ಲಿ ಕೇಂದ್ರೀಕರಿಸಿಕೊಂಡಿವೆ. ಇದು ಈಗಲೂ ಶೇ 99ರಷ್ಟು ದುಡಿಯುವ ಜನರ ಸಂಪತ್ತು ಶೇ 1ರಷ್ಟು ಮಾಲೀಕರಲ್ಲಿ ಅಂತರ್ಗತವಾಗಿರುವುದು ಸಾಬೀತುಪಡಿಸುತ್ತದೆ. ಈ ಅಸಮಾನತೆಯ ವಿರುದ್ದ ಶೋಷಿತರ ಸಂಘಟಿತ ಹೋರಾಟವೊಂದೇ ಕ್ರಾಂತಿಗೆ ದಾರಿ ತೋರಿಸಬಲ್ಲದು.

ಸಾಹಿತ್ಯದ ಮೇಲೆ ಕ್ರಾಂತಿಯ ಪ್ರಭಾವ
ರಷ್ಯಾ ಕ್ರಾಂತಿ ವಿಶ್ವಸಾಹಿತ್ಯವನ್ನು ಪ್ರಭಾವಿಸಿದಂತೆಯೇ ಕನ್ನಡ ಸಾಹಿತ್ಯವಲಯದ ಮೇಲೆ ಬೀರಿದ ಪ್ರಭಾವವೇನೂ ಕಡಿಮೆಯಿಲ್ಲ. ಪ್ರಗತಿಶೀಲ ಲೇಖಕರಾದ ಬಸವರಾಜ ಕಟ್ಟೀಮನಿ, ರಾಷ್ಟ್ರಕವಿ ಡಾ.ಜಿ.ಎಸ್ ಶಿವರುದ್ರಪ್ಪ, ಹಿರಿಯ ಪತ್ರಕರ್ತರಾದ ಡಾ.ಪಾಟೀಲ ಪುಟ್ಟಪ್ಪ ಸೇರಿದಂತೆ ಅನೇಕರು ಸೋವಿಯೆತ್ ರಷ್ಯಾಗೆ ಭೇಟಿ ನೀಡಿ ಕ್ರಾಂತಿಯ ನಂತರ ಅದು ಸಾಧಿಸಿದ ಅಸಾಧಾರಣ ಪ್ರಗತಿ, ಸಂಸ್ಕøತಿಯನ್ನು ತಮ್ಮ ಪ್ರವಾಸ ಕಥನಗಳಲ್ಲಿ ಮನಸಾರೆ ಹೊಗಳಿದ್ದಾರೆ.

ಯಾವಾಗಲೂ ಭಾರತದ ನಂಬಿಗಸ್ಥ ಮಿತ್ರದೇಶವಾಗಿರುವ ರಷ್ಯಾ, ನಮ್ಮ ದೇಶದ ಪ್ರಗತಿಪರ ಲೇಖಕರನ್ನು ಪ್ರೋತ್ಸಾಹಿಸಲು ‘ಸೋವಿಯೆತ್ ಲ್ಯಾಂಡ್ ನೆಹರು ಪ್ರಶಸ್ತಿ’ಯನ್ನು ಸ್ಥಾಪಿಸಿತ್ತು. ಕನ್ನಡದಲ್ಲಿ ಬಸವರಾಜ ಕಟ್ಟೀಮನಿ, ಜಿ.ಎಸ್ ಶಿವರುದ್ರಪ್ಪ, ನಿರಂಜನ, ಅನುಪಮಾ ನಿರಂಜನ, ಸು.ರಂ.ಎಕ್ಕುಂಡಿ ಮೊದಲಾದವರು ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಇನ್ನು ರಷ್ಯನ್ ಸಾಹಿತ್ಯ ದಿಗ್ಗಜರಾದ ಲಿಯೋ ಟಾಲ್‍ಸ್ಟಾಯ್, ಮ್ಯಾಕ್ಸಿಂ ಗಾರ್ಕಿ, ಆಂಟನ್ ಚೆಕೊವ್, ದಾಸ್ತೋವಸ್ಕಿ ಮೊದಲಾದವರು ಭಾರತೀಯ ಭಾಷೆಗಳಿಗೆ ನಿರಂತರವಾಗಿ ಅನುವಾದಗೊಳ್ಳುವ ಮೂಲಕ ನಮ್ಮವರೇ ಆಗಿದ್ದಾರೆ.

– ವಿಠ್ಠಲ ದಳವಾಯಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT