ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ರೈತ ವಿರೋಧಿ ನಿಲುವು: ತಂಗಡಗಿ

Last Updated 5 ನವೆಂಬರ್ 2017, 8:31 IST
ಅಕ್ಷರ ಗಾತ್ರ

ಕಾರಟಗಿ: ‘ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಿ ಅವರ ಸಂಕಷ್ಟಕ್ಕೆ ನೆರವಾಗದೇ ಬಿಜೆಪಿ ಬರೀ ಕೋಮುವಾದಿ ತಂತ್ರಗಳನ್ನು ಹೆಣೆದು ಬೆಂಕಿ ಹಚ್ಚುವ ಕೆಲಸದಲ್ಲಿ ತೊಡಗಿದ್ದಾರೆ. ಜಿಲ್ಲೆಯ ಸಂಸದರು ಸಂಸತ್ತಿನಲ್ಲಿ ರೈತರ ಅಥವಾ ಕ್ಷೇತ್ರದ ಅಭಿವೃದ್ಧಿಯ ಪರವಾಗಿ ಧ್ವನಿ ಎತ್ತಿಲ್ಲ’ ಎಂದು ಶಾಸಕ ಶಿವರಾಜ ತಂಗಡಗಿ ಆರೋಪಿಸಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ಕಾರಟಗಿ ಬ್ಲಾಕ್ ಕಾಂಗ್ರೆಸ್‌ನ ವಿವಿಧ ಘಟಕಗಳ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದರು. ಕಾರಟಗಿ ಬ್ಲಾಕ್‌ನ ಎಲ್ಲಾ ಪದಾಧಿಕಾರಿಗಳು ‘ಮನೆ, ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ನೋಟು ರದ್ದು ಹಾಗೂ ಜಿಎಸ್‌ಟಿ ಎಡವಟ್ಟುಗಳ ಕುರಿತು ಜಾಗೃತಿ ಮೂಡಿಸಬೇಕು’ ಎಂದರು.

ಕಾರಟಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಂಬಣ್ಣ ನಾಯಕ ಮಾತನಾಡಿದರು. ಕಾಂಗ್ರೆಸ್ ಕಾರಟಗಿ ನಗರ ಘಟಕಕ್ಕೆ ಬಸವರಾಜ ಶೆಟ್ಟರ್, ಹಿಂದುಳಿದ ವರ್ಗಗಳ ಘಟಕಕ್ಕೆ ವೀರೇಶ ಬೇವಿನಾಳ , ಪರಿಶಿಷ್ಟ ಜಾತಿ ಘಟಕಕ್ಕೆ ಗಾಳೇಶ ಮ್ಯಾಗಳಮನಿ ಹಾಗೂ ಅಲ್ಪಸಂಖ್ಯಾತರ ಘಟಕಕ್ಕೆ ಮುಸ್ತಾಫಾ ಬೇವಿನಗಿಡ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಶಾಸಕರು ಪ್ರಕಟಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಶಿವರೆಡ್ಡಿ ನಾಯಕ, ಪಿಕಾರ್ಡ್‌ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ, ಪುರಸಭೆ ಸದಸ್ಯ ಜಿ, ತಿಮ್ಮನಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್‌. ಈಶಪ್ಪ, ಕಾರ್ಮಿಕ ಮುಖಂಡ ಗಿರಿಯಪ್ಪ ಬೂದಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ. ಶರಣಯ್ಯಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯ ಮಹ್ಮದ್ ರಫೀ, ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಶರಣಬಸವರಾಜ ರೆಡ್ಡಿ, ಕನಕಗಿರಿ ಘಟಕದ ಅಧ್ಯಕ್ಷ ರವಿಗೌಡ ನಂದಿಹಳ್ಳಿ, ಕಾರಟಗಿ ಬ್ಲಾಕ್ ಒಬಿಸಿ ಘಟಕದ ಅಧ್ಯಕ್ಷ ಉಮೇಶ ಭಂಗಿ, ಶರಣಪ್ಪ ಕರಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT