ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಸಾಹಿತಿಗಳಿಂದ ಸಲಹೆ, ಸೂಚನೆ

Last Updated 5 ನವೆಂಬರ್ 2017, 8:54 IST
ಅಕ್ಷರ ಗಾತ್ರ

ಮೈಸೂರು: ಊಟ, ವಸತಿಗೆ ಯಾವುದೇ ಸಮಸ್ಯೆ ಉಂಟಾಗಬಾರದು. ಶಾಲು ಬದಲು ಪುಸ್ತಕ ನೀಡಿ, ಹೂವಿನ ಹಾರ ಬದಲು ಏಲಕ್ಕಿ ಹಾರ ಬಳಸಿ, ವೇದಿಕೆ ಕಾರ್ಯಕ್ರಮಗಳಲ್ಲಿ ಶಿಸ್ತು ಕಾಪಾಡಿ. ಸಾಹಿತಿಗಳ ಮನಸ್ಸು ನೋಯಿಸದಂತೆ ನೋಡಿಕೊಳ್ಳಿ…

ನ. 24ರಿಂದ 26ರವರೆಗೆ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಶಾಸಕ ವಾಸು ಅವರ ನಿವಾಸದಲ್ಲಿ ಶನಿವಾರ ಆಯೋಜಿಸಿದ್ದ ಸಾಹಿತಿಗಳ ಸಭೆಯಲ್ಲಿ ಮೂಡಿಬಂದ ಸಲಹೆ, ಸೂಚನೆಗಳಿವು. ಸಮ್ಮೇಳನದ ವೇದಿಕೆಗಳಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌, ಸರ್‌.ಎಂ.ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್‌ ಹೆಸರಿಡಿ, ಮೈಸೂರಿನ ಬೆಳವಣಿಗೆಗೆ ದುಡಿದವರನ್ನು ಸ್ಮರಿಸಿ ಎಂದು ಮನವಿ ಮಾಡಿದರು.

‘ಸಾಹಿತಿಗಳು, ಅಧಿಕಾರಿಗಳಿಗೆ ಅತಿಥಿಗೃಹಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಇಲ್ಲಿರುವಷ್ಟು ಅತಿಥಿಗೃಹಗಳು ಬೇರೆಲ್ಲೂ ಇಲ್ಲ. ಅಲ್ಲದೆ, ಛತ್ರಗಳು, ಡಾರ್ಮಿಟರಿ, ಕೆಎಸ್‌ಒಯು ಹಾಗೂ ಇನ್ಫೊಸಿಸ್‌ನಲ್ಲಿ ವಸತಿ ವ್ಯವಸ್ಥೆ ಇರಲಿದೆ’ ಎಂದು ವಾಸು ಹೇಳಿದರು.

‘ಪ್ರಮುಖವಾಗಿ ಹಿರಿಯ ಸಾಹಿತಿಗಳನ್ನು ಕಾಳಜಿಯಿಂದ ನೋಡಿಕೊಳ್ಳಿ. ಸ್ವಯಂಸೇವಕರನ್ನು ನೇಮಿಸಿ. ವೈದ್ಯಕೀಯ ಹಾಗೂ ವಾಹನ ವ್ಯವಸ್ಥೆ ಮಾಡಿ’ ಎಂದು ಸಲಹೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ‘ಮೆರವಣಿಗೆ ಸಾಗುವ ಹಾದಿಯಲ್ಲಿ ರಾತ್ರಿ ವೇಳೆ ವಿದ್ಯುತ್‌ ದೀಪಾಲಂಕಾರ ಮಾಡಲಾಗುವುದು. ಮೆರವಣಿಗೆ ಬೆಳಿಗ್ಗೆ 9 ಗಂಟೆಗೆ ಕೋಟೆ ಆಂಜನೇಯ ದೇಗುಲದಿಂದ ಆರಂಭವಾಗಿ ಅಶೋಕ ರಸ್ತೆ, ಇರ್ವಿನ್‌ ರಸ್ತೆ, ವಿಶ್ವೇಶ್ವರಯ್ಯ ರಸ್ತೆ, ಸಯ್ಯಾಜಿರಾವ್‌ ರಸ್ತೆ, ಕೆ.ಆರ್‌.ಆಸ್ಪತ್ರೆ ವೃತ್ತ, ಕೆ.ಆರ್‌.ವೃತ್ತ, ಬಸವೇಶ್ವರ ವೃತ್ತ, ರಾಮಸ್ವಾಮಿ ವೃತ್ತದ ಮೂಲಕ ಮಹಾರಾಜ ಕಾಲೇಜು ಮೈದಾನ ತಲುಪಲಿದೆ. 4 ಕಿ.ಮೀ ಹಾದಿಯಲ್ಲಿ ಸಾಗಲಿದೆ’ ಎಂದರು.

‘ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಯಲ್ಲಿ 20 ಟಾಂಗಾ ಗಾಡಿಗಳು ಭಾಗವಹಿಸಲಿವೆ. 20 ಸ್ತಬ್ಧಚಿತ್ರಗಳು ಇರಲಿವೆ. 30 ಜಿಲ್ಲೆಗಳ ಕಸಾಪ ಅಧ್ಯಕ್ಷರು ಸಮ್ಮೇಳನದ ಅಧ್ಯಕ್ಷರನ್ನು ಕರೆತರುತ್ತಾರೆ. ಶಾಲಾ ಮಕ್ಕಳು, ಸ್ಕೌಟ್ಸ್‌ ಅಂಡ್‌ ಗೈಡ್‌ ವಿದ್ಯಾರ್ಥಿಗಳು ಇರುತ್ತಾರೆ. ರಥವನ್ನು ಮೈಸೂರು ಮಲ್ಲಿಗೆಯಿಂದ ಅಲಂಕರಿಸಲಾಗುವುದು. ಸುಮಾರು ಎರಡು ಗಂಟೆ ಮೆರವಣಿಗೆ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

‘11 ಗಂಟೆಗೆ ಮಹಾರಾಜ ಕಾಲೇಜು ಮೈದಾನದಲ್ಲಿನ ಪ್ರಧಾನ ವೇದಿಕೆಯಲ್ಲಿ ಸಮ್ಮೇಳನದ ಉದ್ಘಾಟನೆ ನಡೆಯಲಿದೆ. ಪ್ರಧಾನ ವೇದಿಕೆ ಅಲ್ಲದೆ ಕಲಾಮಂದಿರ, ಶತಮಾನೋತ್ಸವ ಭವನಗಳಲ್ಲೂ ಗೋಷ್ಠಿಗಳು ಜರುಗಲಿವೆ. ಆರು ಕಡೆ ಸಂಜೆ 6ರಿಂದ 9 ಗಂಟೆವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 10 ಕಲಾಸಂಸ್ಥೆಗಳು ಚಿತ್ರಕಲಾ ಪ್ರದರ್ಶನ ಆಯೋಜಿಸಲಿವೆ’ ಎಂದು ಹೇಳಿದರು.

ಸಾಹಿತಿಗಳಾದ ಪ್ರೊ.ಸಿ.ಪಿ.ಕೃಷ್ಣಕುಮಾರ್‌ ಮಾತನಾಡಿ, ‘ಸಮ್ಮೇಳನ ವಿರೋಧಿಸುವವರೆಲ್ಲ ಸೇರಿ ಅಪಪ್ರಚಾರ ಸಮಿತಿ ಮಾಡಿಕೊಂಡಿದ್ದಾರೆ’ ಎಂದರು. ಸಾಹಿತಿಗಳಾದ ಕಬ್ಬಿನಾಲೆ ಭಾರದ್ವಾಜ್‌, ಪ್ರಧಾನ ಗುರುದತ್‌, ಟಿ.ವಿ.ವೆಂಕಟಾಚಲ ಶಾಸ್ತ್ರಿ, ಸುಂದರೇಶನ್‌, ಛಾಯಾಪತಿ, ಎ.ವಿ.ನರಸಿಂಹಮೂರ್ತಿ, ಮಳಲಿ ವಸಂತಕುಮಾರ್‌, ಮಡ್ಡೀಕೆರೆ ಗೋಪಾಲ್‌, ನಾಗರಾಜ್‌, ಬಿ.ಎಸ್‌.ಶಂಕರ್‌, ವಾಸುದೇವಮೂರ್ತಿ, ಪ್ರೊ.ಸಿ.ನಾಗಣ್ಣ, ತಿಮ್ಮಪ್ಪ, ಪ್ರಭಾಮಣಿ, ರಾಜಶೇಖರ ಕದಂಬ, ಪಾಲಿಕೆ ಆಯುಕ್ತ ಜಗದೀಶ್‌, ಸೆಸ್ಕ್‌ ಪ್ರಧಾನ ವ್ಯವಸ್ಥಾಪಕ ಸತೀಶಕುಮಾರ್‌, ಚಾಮುಂಡಿಬೆಟ್ಟದ ಸಿಇಒ ಪ್ರಸಾದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT