ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ಜೆಡಿಎಸ್ ವಿಕಾಸಯಾತ್ರೆ: ಎಚ್.ಡಿ.ದೇವೇಗೌಡ ಕುಟುಂಬದಿಂದ ವಿಶೇಷ ಪೂಜೆ

Last Updated 6 ನವೆಂಬರ್ 2017, 5:11 IST
ಅಕ್ಷರ ಗಾತ್ರ

ಹಾಸನ: ನಾಳೆಯಿಂದ ಜೆಡಿಎಸ್ ವಿಕಾಸಯಾತ್ರೆ ಕೈಗೊಳ್ಳುವುದರಿಂದ, ಹುಟ್ಟೂರು ಹರದನಹಳ್ಳಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬ ಸೋಮವಾರ ವಿಶೇಷ ಪೂಜೆ ಸಲ್ಲಿಸಿತು.

ಬೆಳಗ್ಗೆ 7.30ರಿಂದಲೇ ಶತರುದ್ರಯಾಗದಲ್ಲಿ ಮಾಜಿ ಪ್ರಧಾನಿ, ಧರ್ಮಪತ್ನಿ ಚನ್ನಮ್ಮ, ಶಾಸಕ ರೇವಣ್ಣ, ಭವಾನಿ, ಮೊಮ್ಮಗ ಡಾ.ಸೂರಜ್ ಸಾಥ್ ನಿರತರಾಗಿದ್ದರು.

ಕೆಲವೇ ಸಮಯದ ಬಳಿಕ ಜೆಡಿಎಸ್‌ ರಾಜ್ಯ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ಪೂಜೆಯಲ್ಲಿ ಭಾಗಿಯಾಗಲಿದ್ದಾರೆ.

‘ಪ್ರಜ್ವಲ್ ಸ್ಪರ್ಧೆ ಖಚಿತ‘
ಮುಂದಿನ‌ ವಿಧಾನಸಭೆ ಚುನಾವಣೆಯಲ್ಲಿ ‌ಪುತ್ರ ಪ್ರಜ್ವಲ್ ಸ್ಪರ್ಧೆ ಖಚಿತ. ಇದಕ್ಕೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಕ್ಷೇತ್ರ ಯಾವುದು ಎಂಬುದನ್ನು ಗೌಡರೇ ನಿರ್ಧಾರ ಮಾಡಲಿದ್ದಾರೆ. ಹಾಸನ ಜಿಲ್ಲೆ ಬೇಲೂರು ಮತ್ತು ಬೆಂಗಳೂರಿನ ರಾಜರಾಜೇಶ್ವರಿ ನಗರ ಎರಡೂ ಕಡೆ ವಾತಾವರಣ ಚೆನ್ನಾಗಿದೆ ಎಂದು ಭವಾನಿ ರೇವಣ್ಣ ಹೇಳಿದರು.

ಈ ಹಿಂದೆ ನಮ್ಮ ಕುಟುಂಬದಿಂದ ರೇವಣ್ಣ, ಕುಮಾರಸ್ವಾಮಿ ಇಬ್ಬರೇ ಸ್ಪರ್ಧೆ ಮಾಡಲಿದ್ದಾರೆ ಎಂದು ಗೌಡರು ಹೇಳಿದ್ದರು ಎಂದರು.

ವಿಕಾಸ ಯಾತ್ರೆ ಅಂಗವಾಗಿ ಮನೆ ದೇವರು ಶಿವನಿಗೆ ಪೂಜೆ ಸಲ್ಲಿಸಲಾಯಿತು. ಸಂಜೆ ನಂಜನಗೂಡು ಶ್ರೀಕಂಠೇಶ್ವರನಿಗೆ ಪೂಜೆ ಸಲ್ಲಿಸಲಾಗುವುದು. ನಾಳೆ ಚಾಮುಂಡಿಗೆ ಪೂಜೆ ಸಲ್ಲಿಸಿ ಯಾತ್ರೆಗೆ ಚಾಲನೆ ನೀಡಲಾಗುವುದು. ನಾನು ಯಾತ್ರೆಯಲ್ಲಿ ಭಾಗವಹಿಸುತ್ತಿಲ್ಲ. ಅನಿತಾ ಸ್ಪರ್ಧೆ ವಿಚಾರ ಗೊತ್ತಿಲ್ಲ. ಅದನ್ನು ಗೌಡರು ನಿರ್ಧರಿಸುತ್ತಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT