ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಮಾತನಾಡುವ ವಾತಾವರಣ ನಿರ್ಮಿಸಿ

Last Updated 6 ನವೆಂಬರ್ 2017, 5:52 IST
ಅಕ್ಷರ ಗಾತ್ರ

ಗೌರಿಬಿದನೂರು: ‘ಕನ್ನಡ ಭಾಷೆಯನ್ನು ನಿತ್ಯ ಮಾತನಾಡುವ ಮೂಲಕ ಇತರರಲ್ಲೂ ಕನ್ನಡ ಭಾಷೆಯೇ ಮಾತನಾಡುವ ವಾತಾವರಣ ನಿರ್ಮಾಣ ಮಾಡಬೇಕು’ ಎಂದು ಆಚಾರ್ಯ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ನಾಗರತ್ನಮ್ಮ ಅಭಿಪ್ರಾಯಪಟ್ಟರು.

ಪಟ್ಟಣದ ಡಾ.ಎಚ್.ಎನ್. ವೃತ್ತದಲ್ಲಿ ಹೋಟೆಲ್‌ ರಮೇಶ್ ಸ್ನೇಹಿತರು ಹಾಗೂ ಆಟೊ ಚಾಲಕರು ಈಚೆಗೆ ಏರ್ಪಡಿಸಲಾಗಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಯಾವುದೇ ಭಾಷೆ ನಿತ್ಯ ಬಳಸಿದಾಗ ಮಾತ್ರ ಅದು ಜೀವಂತವಾಗಿರಲು ಸಾಧ್ಯ. ಬಳಸದೆ ಇದ್ದರೆ ಕಣ್ಮರೆಯಾಗುವ ಸಾಧ್ಯತೆ ಹೆಚ್ಚು’ ಎಂದರು.

‘ಬಹುತೇಕ ಮಂದಿ ಆಂಗ್ಲ ಭಾಷೆಯಲ್ಲಿ ಮಾತನಾಡುವುದು, ಲಗ್ನಪತ್ರಿಕೆ, ನಾಮಫಲಕಗಳು ಬರೆಸುವುದು, ಹೆಚ್ಚು ಘನತೆ ಗೌರವ ಎಂದು ತಿಳಿದಿದ್ದಾರೆ’ ಎಂದು ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಘಟಕದ ಅಧ್ಯಕ್ಷ ವಿ. ರವೀಂದ್ರನಾಥ್ ಮಾತನಾಡಿದರು. ಹೋಟಲ್ ರಮೇಶ್, ಪುಲಗೂರು ನಂಜುಂಡಪ್ಪ, ಜೂಲಪ್ಪ, ಅಶ್ವತ್ಥಪ್ಪ, ಪುರಸಭೆ ಸದಸ್ಯ ಮೋಹನ್, ಜಿ.ಕೆ.ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT