ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಕ್ಕಾಗಿ ಕಾಂಗ್ರೆಸ್‌ನಿಂದ ಅಹಿಂದ ಜಪ

Last Updated 6 ನವೆಂಬರ್ 2017, 7:01 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಭೃಷ್ಟಾಚಾರದಲ್ಲಿ ಮುಳುಗಿದೆ. ಜನಹಿತ ಕಡೆಗಣಿಸಿರುವ ಸಿದ್ದರಾಮಯ್ಯ ಸರ್ಕಾರವನ್ನು ಜನರೇ ತಿರಸ್ಕರಿಸಲಿದ್ದು, ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಬಿ.ಶಾಣಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿನ ಆಶೀರ್ವಾದ ಕಲ್ಯಾಣಮಂಟದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆಳಂದ ನಿವಾಸಿಗಳ ಚಿಂತನ–ಮಂಥನ ಸಭೆಯಲ್ಲಿ ಮಾತನಾಡಿದ ಅವರು, ಜನರಿಗೆ ಈ ಸರ್ಕಾರದ ಮೇಲಿನ ವಿಶ್ವಾಸ ಇಲ್ಲ. ‘ಮಿಷನ್ 150’ಯಂತೆ ಜಿಲ್ಲೆಯಲ್ಲಿಯೂ ‘ಮಿಷನ್ 7+2’ ರೂಪಿಸಲಾಗಿದೆ. ಈ ಗುರಿ ತಲುಪಲು ಕಾರ್ಯಕರ್ತರು ಶ್ರಮಿಸಬೇಕಾಗಿದೆ’ ಎಂದು ಅವರು ತಿಳಿಸಿದರು.

‘ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಈ ಮೂಲಕ ಮತಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಯಾಗಲಿದೆ. ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ’ ಎಂದು ಅವರು ಭವಿಷ್ಯ ನುಡಿದರು.

‘ಹಿಂದುಳಿದ ವರ್ಗದವರ ಬಗ್ಗೆ ನೈಜ ಕಾಳಜಿ ಇರುವುದು ಬಿಜೆಪಿಗೆ ಮಾತ್ರ. ಇತರ ಪಕ್ಷಗಳು ಹಿಂದುಳಿದವವರನ್ನು ಮತಕ್ಕಾಗಿ ಬಳಸಿಕೊಳ್ಳುತ್ತಿವೆ. ಅಹಿಂದವನ್ನು ಕಾಂಗ್ರೆಸ್‌ ಕೇವಲ ಮತ ಬ್ಯಾಂಕ್‌ ಮಾಡಿಕೊಂಡಿದೆ. ಅವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸುಧಾರಣೆಯನ್ನು ತರುವಲ್ಲಿ ವಿಫಲವಾಗಿದೆ’ ಎಂದು ಅವರು ದೂರಿದರು.

‘ಆಳಂದ ಶಾಸಕ ಬಿ.ಆರ್. ಪಾಟೀಲ ಅವರು ರಾಜಕೀಯ ಸ್ವಾರ್ಥಕ್ಕಾಗಿ ಹಲವು ವೇಷಗಳನ್ನು ಧರಿಸಿದ್ದಾರೆ. ಕಾಲಕ್ಕೆ ತಕ್ಕಂತೆ ವೇಷ ಬದಲಾಯಿಸುವಲ್ಲಿ ಅವರು ನಿಸ್ಸೀಮರು. ಅವರೊಬ್ಬ ಅವಕಾಶವಾದಿ ರಾಜಕಾರಣಿ’ ಎಂದು ಅವರು ಟೀಕಿಸಿದರು.

ಗ್ರಾಮಾಂತರ ಘಟಕದ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿ, ‘ಜಿಲ್ಲೆಯಲ್ಲಿ ಬಿಜೆಪಿಯ ಜಯಭೇರಿ ಆಳಂದ ಕ್ಷೇತ್ರದಿಂದಲೇ ಆರಂಭವಾಗಲಿದೆ. ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಕಾರ್ಯಕರ್ತರು ಟೊಂಕ ಕಟ್ಟಿ ನಿಂತಿದ್ದಾರೆ’ ಎಂದು ಹೇಳಿದರು.

ಮಾಜಿ ಶಾಸಕ ಸುಭಾಷ್ ಗುತ್ತೇದಾರ ಮಾತನಾಡಿ, ‘ಆಳಂದ ಕ್ಷೇತ್ರದಲ್ಲಿ ಬಿಜೆಪಿ ‍ಪರ ಜನರ ಒಲವು ಹೆಚ್ಚಾಗಿದೆ. ಬಿ.ಆರ್‌. ಪಾಟೀಲ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ‘ ಎಂದು ಹೇಳಿದರು.

ವಿವಿಧ ಪಕ್ಷಗಳ ಮುಖಂಡರಾದ ಸರಸಂಬಾದ ಯಶವಂತರಾವ ಗುಬ್ಯಾಡ್, ಬಸಯ್ಯಸ್ವಾಮಿ, ಶರಣಬಸಪ್ಪ ಪೊಲೀಸ್‌ಪಾಟೀಲ, ಪ್ರಭುಲಿಂಗ ಪೊಲೀಸ್‌ಪಾಟೀಲ, ಘನಲಿಂಗಪ್ಪ ಪಾಟೀಲ, ಚಿದಂಬರರಾಯ ಪಾಟೀಲ, ಚಂದ್ರಶೇಖರ ಬಿರಾದಾರ, ಸಾಯಬಣ್ಣಾ ಸಂಗೋಳಗಿ, ಸಂತೋಷ್ ರಾಠೋಡ ಅವರು ಬಿಜೆಪಿಗೆ ಸೇರ್ಪಡೆಯಾದರು.
ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಮುಖಂಡರಾದ ವಿದ್ಯಾಸಾಗರ ಕುಲಕರ್ಣಿ, ವೀರಣ್ಣ ಮಂಗಾಣೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT