ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗದು ರಹಿತ ವ್ಯವಹಾರದ ಮಾಹಿತಿ ಪಡೆದುಕೊಳ್ಳಿ

Last Updated 6 ನವೆಂಬರ್ 2017, 8:27 IST
ಅಕ್ಷರ ಗಾತ್ರ

ಹನುಮಸಾಗರ: ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುತ್ತಿರುವ ವಿವಿಧ ಬ್ಯಾಂಕ್‌ಗಳಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಿಗುವ ನೆರವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಹಿರೇಗೊಣ್ಣಾಗರ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ರವಿ ಸಲಹೆ ನೀಡಿದರು.

ಶನಿವಾರ ಸಮೀಪದ ಹಿರೇಗೊಣ್ಣಾಗರ ಪ್ರೌಢ ಶಾಲೆಯಲ್ಲಿ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನಿಂದ ಹಮ್ಮಿಕೊಂಡಿದ್ದ ಬ್ಯಾಂಕ್ ವ್ಯವಹಾರ ಮಾಹಿತಿ ಕಾರ್ಯಾಗಾರದ ನಿಮಿತ್ತ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರ, ಮೊಬೈಲ್ ಬ್ಯಾಂಕಿಂಗ್ ಮಾಹಿತಿ ಪಡೆದುಕೊಂಡು ವ್ಯವಹರಿಸಿದರೆ ಸಮಯದ ಉಳಿತಾಯದ ಜೊತೆಗೆ ಭ್ರಷ್ಟಾಚಾರ ನಿಯಂತ್ರಿಸಬಹುದಾಗಿದೆ ಎಂದು ಹೇಳಿದರು.

ಮುಖ್ಯಶಿಕ್ಷಕ ಅಶೋಕ್‌ಕುಮಾರ್ ತಾಸೀನ ಮಾತನಾಡಿದರು. ಬಸಪ್ಪ ವಾಲಿಕಾರ, ಪ್ರಶಾಂತ್ ನೆಲ್ಲೂರು, ಗೀತಾ ಇದ್ದಲಿಗಿ, ದೊಡ್ಡನಗೌಡ ಪಾಟೀಲ, ಶಹನಾಜ್‌ಬೇಗಂ, ಶ್ರೀಕಾಂತ ಕರಡಿ, ಸಂಗಮೇಶ ದಿಂಡೂರು, ರಮ್ಯಾ ವಾಲಿಕಾರ. ಶ್ರೀದೇವಿ ಅಬ್ಬಿಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT