ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನದನಿಗೆ ಮಿಡಿಯುವ ‘ಆರಮ್’

Last Updated 6 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನೀರಿಗಾಗಿ ಹಾಹಾಕಾರ, ಖಾಲಿ ಕೊಡ ಹಿಡಿದು ಹೋರಾಡುವ ಜನ, ಮಳೆ ಕಾಣದೆ ಬೆಳೆ ಬರದೆ ಬೀದಿಗೆ ಬಿದ್ದ ರೈತರು... ಇವರ ಸಮಸ್ಯೆಗೆ ಸ್ಪಂದಿಸಲು ಬರುವ ಜಿಲ್ಲಾಧಿಕಾರಿ, ರೈತರಿಗಾಗಿ ಸರ್ಕಾರದ ವಿರುದ್ಧವೇ ಹೋರಾಟಕ್ಕೆ ಇಳಿಯುತ್ತಾರೆ. ಇದು ತಮಿಳು ‘ಆರಮ್’ ಸಿನಿಮಾದ ಟ್ರೇಲರ್. ದಿಟ್ಟ ಜಿಲ್ಲಾಧಿಕಾರಿ ಪಾತ್ರದಲ್ಲಿ ನಯನಾ ತಾರಾ ಕಾಣಿಸಿಕೊಂಡಿದ್ದಾರೆ.

ನ.1 ರಂದು ಯುಟ್ಯೂಬ್‌ನಲ್ಲಿ ಬಿಡುಗಡೆಯಾದ ಸಿನಿಮಾ ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 8 ಲಕ್ಷ ಬಾರಿ ಟ್ರೇಲರ್ ವಿಡಿಯೊ ವೀಕ್ಷಣೆಯಾಗಿದೆ. 920 ಮಂದಿ ಪ್ರತಿಕ್ರಿಯಿಸಿದ್ದಾರೆ.

ಕಾಟನ್ ಸೀರೆ ತೊಟ್ಟು ಬಿರುಸಿನಿಂದ ಹೆಜ್ಜೆ ಹಾಕುತ್ತಾ ನ್ಯಾಯಕ್ಕಾಗಿ ಹೋರಾಡುವ ಛಲಗಾರ್ತಿಯಾಗಿ ನಯನಾತಾರಾ ಉತ್ತಮ ಅಭಿನಯ ತೋರಿದ್ದಾರೆ. ದೃಶ್ಯಗಳು ಭಾವಗಳಿಂದ ತುಂಬಿದ್ದು, ನೋಡುಗರ ಮನ ಮಿಡಿಸುತ್ತದೆ. ಓಂ ಪ್ರಕಾಶ್‌ ಅವರ ಛಾಯಾಗ್ರಹಣ ಸಿನಿಮಾಕ್ಕಿದೆ.

ಸಿನಿಮಾವನ್ನು ಗೋಪಿ ನೈನಾರ್ ನಿರ್ದೇಶಿಸಿದ್ದಾರೆ. ‘ಕಾಕಮುಟೈ’ ಸಿನಿಮಾ ಖ್ಯಾತಿಯ ರಮೇಶ್ ಮತ್ತು ವಿಘ್ನೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನ. 10ರಂದು ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT