ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 7–11–1967

Last Updated 6 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಇಂದು ರಷ್ಯನ್ ಕ್ರಾಂತಿಯ ಐವತ್ತನೇ ವಾರ್ಷಿಕೋತ್ಸವ
ಮಾಸ್ಕೊ, ನ. 6–
ರಷ್ಯದ ಜನತೆ ಅಕ್ಟೋಬರ್ ಕ್ರಾಂತಿಯ ಐವತ್ತನೇ ವಾರ್ಷಿಕೋತ್ಸವವನ್ನು ನಾಳೆ ಹಿತಕರ ಹವೆಯಲ್ಲಿ ಆಚರಿಸಲಿದೆ. ಕಳೆದ ನೂರು ವರ್ಷಗಳಲ್ಲಿ ಪ್ರಥಮ ಬಾರಿಗೆ ಈ ವರ್ಷ ನವಂಬರ್‌ನಲ್ಲಿ ಹವೆ ಹಿತಕರವಾಗಿದೆ ಎಂದು ಹೇಳಲಾಗಿದೆ.

ಕೆಂಪುಚೌಕದಲ್ಲಿ ಮಿಲಿಟರಿ  ಪೆರೇಡ್ ನಡೆದ ನಂತರ ನಡೆಯುವ ಮಾರ್ಚ್‌ಪಾಸ್ಟ್‌ನಲ್ಲಿ ಅಸಂಖ್ಯಾತ ನಾಗರಿಕರು ಭಾಗವಹಿಸುವರು. ರಷ್ಯದ ರಕ್ಷಣಾ ಸಾಮರ್ಥ್ಯವನ್ನು ಪ್ರದರ್ಶಿಸುವ ಹೊಸ ಶಸ್ತ್ರಾಸ್ತ್ರಗಳನ್ನು ಮಿಲಿಟರಿ ಪೆರೇಡ್ ಕಾಲದಲ್ಲಿ ತೋರಿಸುವ ನಿರೀಕ್ಷೆ ಇದೆ.

ಕ್ರಾಂತಿಯ ಐವತ್ತನೇ ವಾರ್ಷಿಕೋತ್ಸವದಲ್ಲಿ ಸ್ಪಷ್ಟವಾಗಿರುವ ಅಂಶವೆಂದರೆ ವಿಶ್ವ ಕಮ್ಯುನಿಸ್ಟ್ ಚಳವಳಿಯಿಂದ ಚೀನವು ಬೇರ್ಪಟ್ಟಿರುವುದೇ ಆಗಿದೆ.

ಕ್ರಾಂತಿ ಪುರುಷನಿಗೆ ಕ್ರೆಮ್ಲಿನ್ ನಾಯಕರ ಗೌರವ
ಮಾಸ್ಕೊ, ನ. 6–
ಕ್ರಾಂತಿ ಪುರುಷ ಲೆನಿನ್‌ಗೆ ಕ್ರೆಮ್ಲಿನ್‌ನ ಮೂವರು ಪ್ರಮುಖರು ಇಂದು ಗೌರವಾರ್ಪಣೆ ಮಾಡಿದರು. ಕೆಂಪು ಚೌಕದಲ್ಲಿ ಲೆನಿನ್ ಸಮಾಧಿಯ ಮೇಲೆ ಪುಷ್ಪಗುಚ್ಛವನ್ನು ಇರಿಸಿದ ಲಿಯೋನಿಡ್ ಬ್ರೆಜ್ನೇವ್, ಕೊಸಿಗಿನ್ ಮತ್ತು ಅಧ್ಯಕ್ಷ ಪೊಡ್ಗೋರ್ನಿ ಅವರು ಸಮಾಧಿಯ ಬಳಿ ಗೌರವ ಭಾವದಿಂದ ನಿಂತರು.

ಕ್ರೆಮ್ಲಿನ್ ನಾಯಕರ ನಂತರ, ಇತರ ಕಮ್ಯುನಿಸ್ಟ್ ರಾಷ್ಟ್ರಗಳ ನಾಯಕರು ಸಮಾಧಿಗೆ ಹೋಗಿ ಗೌರವಾರ್ಪಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT