ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಇಂಡಿಯಾದ ಕೊಡುಗೆ: ಆಟಗಾರ್ತಿಯರಿಗೆ ಬಹುಮಾನ

ಏಷ್ಯಾಕಪ್ ಪ್ರಶಸ್ತಿ
Last Updated 6 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಏಷ್ಯಾಕಪ್ ಗೆದ್ದುಕೊಂಡ ಭಾರತ ತಂಡದ ಆಟಗಾರ್ತಿಯರಿಗೆ ಹಾಕಿ ಇಂಡಿಯಾ ತಲಾ ₹1 ಲಕ್ಷ ಬಹುಮಾನ ಘೋಷಿಸಿದೆ.

ತಂಡದಲ್ಲಿ 18 ಆಟಗಾರ್ತಿಯರು ಇದ್ದಾರೆ. ಮುಖ್ಯ ಕೋಚ್‌ ಹಾಗೂ ಸಹಾಯಕ ಕೋಚ್‌ಗೆ ₹50 ಸಾವಿರ ಬಹುಮಾನ ಮೊತ್ತ ಸಿಗಲಿದೆ.

ರಾಣಿ ರಾಂಪಾಲ್ ಬಳಗ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ  5–4 ಗೋಲುಗಳಲ್ಲಿ ಚೀನಾ ತಂಡವನ್ನು ಮಣಿಸಿ 13 ವರ್ಷಗಳ ಬಳಿಕ ಪ್ರಶಸ್ತಿ ಗೆದ್ದುಕೊಂಡಿತ್ತು.

ಗೋಲ್‌ಕೀಪರ್ ಸವಿತಾ ಅತ್ಯುತ್ತಮ ಆಟದ ಮೂಲಕ ಗಮನಸೆಳೆದಿದ್ದರು. ಪೆನಾಲ್ಟಿ ಶೂಟೌಟ್‌ನಲ್ಲಿ ತಂಡ 4–4ರಲ್ಲಿ ಸಮಬಲ ಮಾಡಿಕೊಂಡಿತ್ತು. ಸಡನ್‌ ಡೆತ್‌ನಲ್ಲಿ ರಾಣಿ ಗೋಲು ದಾಖಲಿಸಿದ್ದರು.

2018ರ ವಿಶ್ವಕಪ್‌ಗೆ ಭಾರತ ತಂಡ ಅರ್ಹತೆ ಪಡೆದುಕೊಂಡಿದೆ. ‘ಆಟಗಾರ್ತಿಯರು ಅಭೂತಪೂರ್ವ ಸಾಧನೆ ಮಾಡಿದ್ದಾರೆ.

ಪ್ರಶಸ್ತಿ ಗೆದ್ದುಕೊಳ್ಳಲು ಅವರು ಸಾಕಷ್ಟು ಶ್ರಮ ಹಾಕಿದ್ದಾರೆ’ ಎಂದು ಹಾಕಿ ಇಂಡಿಯಾ ಕಾರ್ಯದರ್ಶಿ ಮುಷ್ತಾಕ್ ಅಹಮದ್ ಹೇಳಿದ್ದಾರೆ.

ಏಷ್ಯಾ ಕಪ್‌ ಕೇವಲ ಆರಂಭ ಅಷ್ಟೇ: ಹರೇಂದ್ರ

ಮಹಿಳೆಯರ ತಂಡ ಏಷ್ಯಾ ಕಪ್ ಗೆದ್ದುಕೊಂಡಿರುವುದು ಕೇವಲ ಆರಂಭ ಅಷ್ಟೇ. ಮುಂದಿನ ದಿನಗಳಲ್ಲಿ ಈ ತಂಡ ಹೆಚ್ಚಿನ ಸಾಧನೆ ಮಾಡಲಿದೆ ಎಂದು ಭಾರತ ಮಹಿಳೆಯರ ತಂಡದ ಮುಖ್ಯ ಕೋಚ್‌ ಹರೇಂದ್ರ ಸಿಂಗ್ ಅವರು ಹೇಳಿದ್ದಾರೆ.

‘2018ರಲ್ಲಿ ಭಾರತ ತಂಡ ಕಠಿಣ ಸವಾಲುಗಳನ್ನು ಎದುರಿಸಲಿದೆ. ವಿಶ್ವಕಪ್‌ನಲ್ಲಿ ಉತ್ತಮ ಸಾಧನೆ ಮಾಡುವುದು ನಮ್ಮ ಗುರಿ. ಆಸ್ಟ್ರೇಲಿಯಾದಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ಹಾಗೂ ಇಂಡೊನೇಷ್ಯಾದಲ್ಲಿ ಏಷ್ಯನ್ ಕ್ರೀಡಾಕೂಟ ಕೂಡ ಇದೆ’ ಎಂದು ಅವರು ಹೇಳಿದ್ದಾರೆ.

‘2018ರ ಮೂರು ಪ್ರಮುಖ ಟೂರ್ನಿಗಳಲ್ಲಿ ಎರಡು ಪದಕಗಳನ್ನು ಗೆಲ್ಲುವ ಗುರಿ ಹೊಂದಿದ್ದೇವೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT