ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರಕೋಡು: ₹43 ಲಕ್ಷ ವೆಚ್ಚದಲ್ಲಿ ರಾಯಗೋಪುರ ನಿರ್ಮಾಣ

Last Updated 7 ನವೆಂಬರ್ 2017, 9:04 IST
ಅಕ್ಷರ ಗಾತ್ರ

ವರುಣಾ: ಸಮೀಪದ ಐತಿಹಾಸಿಕ ದೇವಸ್ಥಾನ ವರದರಾಜೇಶ್ವರ ದೇವಾಲಯದ ರಾಯಗೋಪುರ ನಿರ್ಮಾಣಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಗ್ರಾಮದ ಮುಖಂಡ ಬಾಲರಾಜು ಮಾತನಾಡಿ, ಮುಖ್ಯಮಂತ್ರಿ ಅನುದಾನ ಹಾಗೂ ಪುರಾತತ್ವ ಇಲಾಖೆಯ ಸಹಯೋಗದೊಂದಿಗೆ ₹43 ಲಕ್ಷ ವೆಚ್ಚದಲ್ಲಿ ಗೋಪುರ ಹಾಗೂ ಗರುಡಗಂಬ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಗೋಪುರ ಸುಮಾರು 27 ಅಡಿ ಎತ್ತರವಿರಲಿದ್ದು, ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಕಾಂಗ್ರೆಸ್ ಮುಖಂಡ ಉಮೇಶ್ ತಿಳಿಸಿದರು. ಈಗಾಗಲೇ ₹1 ಕೋಟಿ ವೆಚ್ಚದಲ್ಲಿ ಈ ದೇವಸ್ಥಾನ ಪುನರ್ ನಿರ್ಮಾಣ ಕಾರ್ಯ ಮುಗಿದಿದ್ದು, ದೇವರ ವಿಗ್ರಹ ತಯಾರಾಗುತ್ತಿದೆ ಎಂದು ಸಣ್ಣೆಗೌಡ ಹೇಳಿದರು.

ಕೆಂಪೇಗೌಡ, ಗ್ರಾ.ಪಂ.ಸದಸ್ಯ ಮಹೇಶ್, ಅಧಿಕಾರಿಗಳಾದ ದೇವರಾಜು, ಪುರಾತತ್ವ ಇಲಾಖೆ ಎಇಇ ದೇವರಾಜು, ಗ್ರಾಮದ ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT