ಗ್ಯಾಜೆಟ್‌

ಕುತೂಹಲ ಮೂಡಿಸದ ‘ಸ್ನ್ಯಾಪ್‌ಚಾಟ್‌ ಕನ್ನಡಕ’

ಕನ್ನಡಕ ಎಂದರೆ ಸಾಮಾನ್ಯವಾಗಿ ನೆನಪಾಗುವುದು ತಂಪು  ಕನ್ನಡಕ ಇಲ್ಲವೇ ದೃಷ್ಟಿದೋಷ ಉಳ್ಳವರು ಹಾಕುವ ಕನ್ನಡಕ. ಆದರೆ ಸಾಮಾಜಿಕ ಮಾಧ್ಯಮಗಳ ಅಕ್ಸೆಸರಿ ಎಂದೇ ಪ್ರಸಿದ್ಧಿ ಪಡೆದ ‘ಸ್ನ್ಯಾಪ್‌ಚಾಟ್‌ ಕನ್ನಡಕ’ದಲ್ಲಿ ವಿಡಿಯೊ ಮಾಡುವ ಅವಕಾಶವೂ ಇದೆ. ಇದು ಈಗ ಆನ್‌ಲೈನ್‌ ಮಾರಾಟ ತಾಣಗಳಲ್ಲಿ ಲಭ್ಯವಿದೆ.

ಕುತೂಹಲ ಮೂಡಿಸದ ‘ಸ್ನ್ಯಾಪ್‌ಚಾಟ್‌ ಕನ್ನಡಕ’

ಪ್ರತಿ ದಿನ ಮಾರುಕಟ್ಟೆಗೆ ಎಷ್ಟೊಂದು ಗ್ಯಾಜೆಟ್‌ಗಳು ಬರುತ್ತವೆ. ಅವುಗಳಲ್ಲಿ ಕೆಲವು ಗ್ರಾಹಕರ ಮೆಚ್ಚುಗೆ ಪಡೆಯುತ್ತವೆ. ಇನ್ನೂ ಕೆಲವು ಕೆಲವೇ ದಿನಗಳಲ್ಲಿ ಹೆಸರು ಉಳಿಸಿಕೊಳ್ಳಲಾಗದೆ ಹಾಗೇ ಉಳಿದು ಬಿಡುತ್ತವೆ. ಇಂದು ಗ್ಯಾಜೆಟ್‌ ಬಳಕೆದಾರರು ಹೆಚ್ಚು ಜಾಗರೂಕರಾಗಿರುತ್ತಾರೆ. ಪ್ರತಿಯೊಂದು ಉತ್ಪನ್ನಗಳ ಬಗ್ಗೆ ವಿವೇಚನೆ ಬಳಸುತ್ತಾರೆ. ಹೀಗೆ ಮಾರುಕಟ್ಟೆಗೆ ಬಂದ ಗ್ಯಾಜೆಟ್‌ ‘ಸ್ನ್ಯಾಪ್‌ಚಾಟ್‌ ಕನ್ನಡಕ’ (Snapchat Spectacles) ಬಳಕೆದಾರರಲ್ಲಿ ಕುತೂಹಲ ಮೂಡಿಸಿಲ್ಲ.

ಜಗತ್ತಿನಾದ್ಯಂತ ಅತಿವೇಗದಲ್ಲಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಮೊಬೈಲ್‌ ಮಾರುಕಟ್ಟೆಯೂ ಪ್ರಮುಖವಾದುದು. ಮೊಬೈಲ್‌ಗಳಲ್ಲಿ ಹಲವಾರು ಸೌಲಭ್ಯಗಳನ್ನು ಕಲ್ಪಿಸಿ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಇದರಲ್ಲಿನ ಫೋಟೊ ಮತ್ತು ವಿಡಿಯೊ ಅವಕಾಶವೇ ಇಂದು ಮೊಬೈಲ್‌ ಆಕರ್ಷಣೆಯನ್ನು ಹೆಚ್ಚಿಸಿದೆ. ಇಂತಹುದೇ ಒಂದು ಲಕ್ಷಣಗಳನ್ನು ಹೊಂದಿದ್ದ, ಕಡಿಮೆ ಪ್ರಚಾರದೊಂದಿಗೆ ಮಾರುಕಟ್ಟೆಗೆ ಬಂದಿದ್ದ ‘ಸ್ನ್ಯಾಪ್‌ಚಾಟ್‌ ಕನ್ನಡಕ’ ಗ್ರಾಹಕರನ್ನು ಸೆಳೆಯುವಲ್ಲಿ ಆರಂಭದಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿತ್ತು. ಆ್ಯಪ್‌ ಮೂಲಕ ಮೊಬೈಲ್‌ಗೆ ಸಂಪರ್ಕ ಸಾಧಿಸುವ ಸಾಧ್ಯತೆ ಇದಕ್ಕಿದ್ದ ಕಾರಣ ಸಾಮಾಜಿಕ ಮಾಧ್ಯಮಗಳಲ್ಲಿ ಬಹು ಬೇಡಿಕೆಯ ಸಾಧನವಾಗಿ ಹೊರಹೊಮ್ಮಿತು. ಅಲ್ಲದೆ ಕಡಿಮೆ ಬೆಲೆಯೂ ಇದಕ್ಕಿತ್ತು. ಹೀಗಾಗಿ ಗ್ರಾಹಕರ ಬೇಡಿಕೆ ಹೆಚ್ಚಲು ಕಾರಣವಾಗಿತ್ತು. ಆದರೆ ಅಲ್ಪಾವಧಿಯಲ್ಲಿಯೇ ಇದರ ಬಗೆಗಿದ್ದ ಕುತೂಹಲ ಕಡಿಮೆಯಾಯಿತು.

ಏನಿದು ‘ಸ್ನ್ಯಾಪ್‌ಚಾಟ್‌ ಕನ್ನಡಕ’

ಇದೊಂದು ಕನ್ನಡಕವಷ್ಟೇ ಅಲ್ಲ. ಇದರ ಒಂದು ಬದಿಯಲ್ಲಿ ವಿಡಿಯೊ ಕ್ಯಾಮೆರಾ ಇದೆ. ಇದರ ಗ್ಲಾಸ್‌ಗಳು ಕಪ್ಪು, ಕೊರಾಲ್‌ ಮತ್ತು  ನೀಲಿ ಬಣ್ಣಗಳಲ್ಲಿ ದೊರೆಯುತ್ತವೆ. ಇದರಲ್ಲಿನ ವಿಡಿಯೊ ಕ್ಯಾಮೆರಾದಲ್ಲಿ 10 ರಿಂದ 30 ಸೆಕೆಂಡ್‌ವರೆಗೆ ರೆಕಾರ್ಡ್‌ ಮಾಡಬಹುದು. ಈ ವಿಡಿಯೊವನ್ನು Snapchat app ನಲ್ಲಿ ಬ್ಲೂಟೂಥ್‌ ಮೂಲಕ ಮೊಬೈಲ್‌ಗೆ ರವಾನೆ ಮಾಡಬಹುದು. ಎಚ್‌ಡಿ ಗುಣಮಟ್ಟದ ವಿಡಿಯೊ ಸಹ ಮಾಡಬಹುದು. ಸದ್ಯ ಇದರಲ್ಲಿ ಫೋಟೊ ತೆಗೆದುಕೊಳ್ಳುವ ಅವಕಾಶ ಇಲ್ಲ. ಒಮ್ಮೆ ವಿಡಿಯೊ ಮಾಡಲು ಆರಂಭಿಸಿದರೆ ಅದರ ಅವಧಿ ಮುಗಿಯಲಾರಂಭಿಸಿದರೆ ಅದಕ್ಕೂ ಮೊದಲು ಸೂಚನೆ ಕೊಡುತ್ತದೆ. ಇದರ ಬ್ಯಾಟರಿಯನ್ನು ಮೊಬೈಲ್ ಚಾರ್ಜರ್‌ನಂತೆ ಜಾರ್ಜ್‌ ಮಾಡಬಹುದು.

ಸ್ನ್ಯಾಪ್‌ಚಾಟ್‌ ಕನ್ನಡಕಗಳನ್ನು ಮೊದಲ ಬಾರಿಗೆ ಅಮೆರಿಕದಲ್ಲಿ ಸ್ನ್ಯಾಪ್‌ಬೂಟ್‌ ವೆಂಡಿಂಗ್ ಮಷಿನ್‌ ಮೂಲಕ ಪಡೆಯುವ ಅವಕಾಶ ಇತ್ತು. ಅಮೆರಿಕದ ಹಲವು ಕಡೆಗಳಲ್ಲಿ ಈ ಮಷಿನ್‌ಗಳನ್ನು ಇರಿಸಲಾಗಿತ್ತು. ಈಗ ಇದು ಹಲವು ಆನ್‌ಲೈನ್‌ ಮಾರಾಟ ತಾಣಗಳಲ್ಲಿ ಲಭ್ಯವಿದೆ.

‘ಯಾವುದೇ ಹೊಸ ತಂತ್ರಜ್ಞಾನ ಬಳಕೆಗೆ ಬಂದರೆ ಅದು ಉಳಿಯುತ್ತದೊ ಇಲ್ಲವೋ ಎಂಬುದು ಅದರಲ್ಲಿನ ತಂತ್ರಜ್ಞಾನ ಹೇಗೆ ಬಳಕೆಗೆ ಬರಲಿದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಇದೇ ರೀತಿ ಸ್ನ್ಯಾಪ್‌ಚಾಟ್‌ ಕನ್ನಡಕವೂ ಅದರಲ್ಲಿನ ಮಿತ ತಂತ್ರಜ್ಞಾನದಿಂದ ಹೆಚ್ಚು ಆಕರ್ಷಣೆಯಾಗಿ ಉಳಿಯಲಿಲ್ಲ’ ಎನ್ನುತ್ತಾರೆ ಇದರ ಬಳಕೆದಾರರೊಬ್ಬರು.

ಕಡಿಮೆ ಅವಧಿಯ ವಿಡಿಯೊ

ಕೇವಲ 10 ರಿಂದ 30 ಸೆಕೆಂಡ್‌ವರೆಗೆ ವಿಡಿಯೊ ಮಾಡುವ ಅವಕಾಶ ಇದರಲ್ಲಿ ಇದೆ. ಇದರಿಂದ ಹೆಚ್ಚಿನ ಸಮಯದ ವಿಡಿಯೊ ಸಾಧ್ಯವಿಲ್ಲ. ಇದು ಈ ಕನ್ನಡಕದ ದೊಡ್ಡ ಸಮಸ್ಯೆಯಾಗಿದೆ. ಪ್ರತಿ 30 ಸೆಕೆಂಡ್‌ಗೆ ಒಮ್ಮೆ ವಿಡಿಯೊ ಮಾಡುವ ಬಟನ್‌ ಅನ್ನು ಒತ್ತುತ್ತಲೇ ಇರಬೇಕು. ಇದು ಬಳಕೆದಾರನಿಗೆ ಅನವಶ್ಯಕ ಕಿರಿಕಿರಿ ಮಾಡುತ್ತದೆ. ಆದ್ದರಿಂದಲೇ ಇದರಲ್ಲಿ ಫೋಟೊ ತೆಗೆಯುವ ಅವಕಾಶ ಇರಬೇಕಿತ್ತು ಎನ್ನುತ್ತಾರೆ ಮತ್ತೊಬ್ಬ ಬಳಕೆದಾರರು.

Comments
ಈ ವಿಭಾಗದಿಂದ ಇನ್ನಷ್ಟು
ಹೊಸ ಸಂಶೋಧನೆ: ಮಲಿನ ಜಲ ಶುದ್ಧೀಕರಿಸಲು ಸ್ಪಾಂಜ್ ಸಾಕು!

ಭಾರತೀಯ ಸಂಜಾತೆಯ ಸಂಶೋಧನೆ
ಹೊಸ ಸಂಶೋಧನೆ: ಮಲಿನ ಜಲ ಶುದ್ಧೀಕರಿಸಲು ಸ್ಪಾಂಜ್ ಸಾಕು!

18 Jun, 2018
ಕಾರಿನ ಈ ಹತ್ತು ಬಿಡಿಭಾಗಗಳು ಅಪಾಯ ಆಹ್ವಾನಿಸಬಲ್ಲವು

ತಂತ್ರಜ್ಞಾನ
ಕಾರಿನ ಈ ಹತ್ತು ಬಿಡಿಭಾಗಗಳು ಅಪಾಯ ಆಹ್ವಾನಿಸಬಲ್ಲವು

18 Jun, 2018
ಓದುವ ಕಾಲ ಓಡುತ್ತಿದೆ, ಕೇಳುವ ಕಾಲ ಬರುತ್ತಿದೆ

ಇದು ಕೇಳುಪುಸ್ತಕಗಳ ಕಾಲ
ಓದುವ ಕಾಲ ಓಡುತ್ತಿದೆ, ಕೇಳುವ ಕಾಲ ಬರುತ್ತಿದೆ

16 Jun, 2018
ಹೊಸ ರೂಪ ಪಡೆದಿದೆ IRCTC ವೆಬ್‌ಸೈಟ್

ತಂತ್ರೋಪನಿಷತ್ತು
ಹೊಸ ರೂಪ ಪಡೆದಿದೆ IRCTC ವೆಬ್‌ಸೈಟ್

14 Jun, 2018
ವಾಟ್ಸ್ಆ್ಯಪ್‌ನಲ್ಲಿ ಫಾರ್ವರ್ಡ್ ಸಂದೇಶಗಳಿಗೆ ಸಿಗಲಿದೆ ಮುಕ್ತಿ!

ಹೊಸ ವೈಶಿಷ್ಟ್ಯ
ವಾಟ್ಸ್ಆ್ಯಪ್‌ನಲ್ಲಿ ಫಾರ್ವರ್ಡ್ ಸಂದೇಶಗಳಿಗೆ ಸಿಗಲಿದೆ ಮುಕ್ತಿ!

14 Jun, 2018