ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

#MeToo ಅಭಿಯಾನ: ಹೆಸರು ಹೇಳಿ ಅವಮಾನಿಸಿ

Last Updated 7 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಹಾಲಿವುಡ್ ಸಿನಿಮಾ ನಿರ್ಮಾಪಕ ಹಾರ್ವೆ ವೈನ್‌ಸ್ಟೈನ್‌ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಆರಂಭಿಸಿದ್ದ #MeToo ಅಭಿಯಾನಕ್ಕೆ ಈಗ ಹೊಸ ತಿರುವು ಸಿಕ್ಕಿದೆ.

#MeToo ಅಭಿಯಾನ ಭಾರತದಲ್ಲಿ #NameAndShame ಅಭಿಯಾನವಾಗಿ ಆರಂಭವಾಗಿದೆ. ಲೈಂಗಿಕ ಶೋಷಣೆ ಮಾಡಿದವರ ಹೆಸರನ್ನು ಉಲ್ಲೇಖಿಸುವುದೇ ಈ #NameAndShame ಅಭಿಯಾನ. ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ಹಲವಾರು ಕಡೆ ಯುವತಿಯರು ತಮಗಾದ ಶೋಷಣೆಯ ಬಗ್ಗೆ ಬರೆದುಕೊಂಡು ಶೋಷಣೆ ನೀಡಿದ ವ್ಯಕ್ತಿಯ ಹೆಸರನ್ನು ಬರೆಯುತ್ತಿದ್ದಾರೆ. ಆ ಆರೋಪಿಗಳ ಪಟ್ಟಿಯಲ್ಲಿ ಗಣ್ಯರ ಹೆಸರಿರುವ ಕಾರಣ ಹಲವರ ವಿರೋಧವೂ ವ್ಯಕ್ತವಾಗುತ್ತಿದೆ.

ಈ ಹಿಂದೆ ನಟಿ ಅಲಿಸ್ಸಾ ಮಿಲಾನೊ ನಿಮಗಾದ ಲೈಂಗಿಕ ಶೋಷಣೆಯನ್ನು #MeToo ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಬರೆಯಿರಿ ಎಂದು ಮಾಡಿದ್ದ ಟ್ವೀಟ್‌ಗೆ ಲಕ್ಷಾಂತರ ಪ್ರತಿಕ್ರಿಯೆಗಳು ಬಂದಿದ್ದವು. ಕನ್ನಡದ ನಟಿ ನೀತು ಶೆಟ್ಟಿ ಕೂಡ ಈ ಕುರಿತು ತಮ್ಮ ದನಿ ಎತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT