ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಅಧಿವೇಶನ: ಸಿ.ಎಂ.ಭೇಟಿಗೆ ಅವಕಾಶ ನೀಡಿ

Last Updated 8 ನವೆಂಬರ್ 2017, 5:39 IST
ಅಕ್ಷರ ಗಾತ್ರ

ಮೂಡಲಗಿ: ರಾಜ್ಯದ ರೈತರ ಸಮಸ್ಯೆಗಳಾದ ಸಾಲಮನ್ನಾ, ಕಬ್ಬಿನ ಬೆಲೆ ನಿಗದಿ, ಬೆಳೆಹಾನಿಗೆ ಪರಿಹಾರ, ಬೆಳೆ ವಿಮೆ ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ಮಾಡಲು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿಗಳನ್ನು ಹಾಗೂ ಕೃಷಿ ಸಚಿವರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಪಿಎಸ್‌ಐ ಅವರಿಗೆ ಮನವಿ ಅರ್ಪಿಸಿದರು.

ಜಿಲ್ಲಾ ಸಂಚಾಲಕ ಶ್ರೀಶೈಲ ಅಂಗಡಿ ಮಾತನಾಡಿ, ‘ಕಳೆದ ವರ್ಷದ ಅಧಿವೇಶನದಲ್ಲಿ ಪೊಲೀಸರು ರೈತರ ಹೋರಾಟವನ್ನು ಹತ್ತಿಕ್ಕಿದ್ದರಿಂದ ಗಲಾಟೆ ಸಂಭವಿಸಿತು. ಈ ಬಾರಿ ರೈತರಿಗೆ ಅವಕಾಶ ಮಾಡಿಕೊಡಬೇಕು. ಈ ಕುರಿತು ಭೇಟಿಯ ದಿನಾಂಕ ಸಮಯವನ್ನು ರೈತ ಮುಖಂಡರಿಗೆ ಮುಂಚಿತವಾಗಿ ತಿಳಿಸಬೇಕು’ ಎಂದರು.

ರೈತರ ಬೇಡಿಕೆ ಈಡೇರಿಸದಿದ್ದರೆ ಮುಂದೆ ಆಗುವ ಸಮಸ್ಯೆಗಳಿಗೆ ಜಿಲ್ಲಾಡಳಿತವು ಹೊಣೆಯಾಗುತ್ತದೆ ಎಂದರು. ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಎಂ.ಮಳ್ಳಿಮಠ, ಉಪಾಧ್ಯಕ್ಷ ಗುರುನಾಥ ಹುಕ್ಕೇರಿ, ಜಿಲ್ಲಾ ಕಾರ್ಯದರ್ಶಿ ಭೀಮಶಿ ಗದಾಡಿ, ಈರಣ್ಣ ಸಸಾಲಟ್ಟಿ, ನಾಗಪ್ಪ ಹೊಸಟ್ಟಿ, ರವಿ ಮುಚ್ಚಂಡಿ, ಗುರುನಾಥ ಕಮತಿ, ಪ್ರಕಾಶ ತೇರದಾಳ, ಮಂಜು ಗದಾಡಿ, ಪದ್ಮಾಕರ ಉಂದ್ರಿ, ಹನಮಂತ ಸಿದ್ದಾಪುರ, ವಾಸು ಪಂಡ್ರೋಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT