ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ದಾಳಿ; ತೋಟದ ಬೆಳೆ ನಾಶ

Last Updated 8 ನವೆಂಬರ್ 2017, 7:11 IST
ಅಕ್ಷರ ಗಾತ್ರ

ಸಕಲೇಶಪುರ: ತಾಲ್ಲೂಕಿನ ಹಾನುಬಾಳು ಹೋಬಳಿಯ ಅಗನಿ ಹಾಗೂ ಸುತ್ತಮುತ್ತಲ ಗ್ರಾಮದಲ್ಲಿ ಕಾಡಾನೆಗಳು ನುಗ್ಗಿ ದಾಂದಲೆ ನಡೆಸಿದ್ದು, ಬೆಳೆಹಾನಿಯಾಗಿದೆ. ವೆಂಕಟೇಶ್‌ ಹಾಗೂ ಶಿವು ಅವರ ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ ಆನೆಗಳು 200ಕ್ಕೂ ಹೆಚ್ಚು, ಉತ್ತಮ ಫಸಲು ನೀಡುತ್ತಿದ್ದ ಕಾಫಿ ಗಿಡಗಳನ್ನು ನಾಶಪಡಿಸಿವೆ. ಮರಗಳನ್ನು ಉರುಳಿಸಿದ್ದು, ಕಾಳು ಮೆಣಸು ಬಳ್ಳಿಗಳೂ ನಾಶಗೊಂಡಿವೆ.

ಹತ್ತಕ್ಕೂ ಹೆಚ್ಚು ಬೈನೆ ಮರಗಳನ್ನು ಉರುಳಿಸಿದ್ದು, ಮರಗಳು ಉರುಳಿ ಕಾಫಿ ಗಿಡಗಳು ಹಾನಿಗೊಂಡಿವೆ ಎಂದು ವೆಂಕಟೇಶ್‌ ಅಳಲು ತೋಡಿಕೊಂಡರು. ‘ಕಾಡಾನೆಗಳಿಂದ ಪ್ರಾಣ ಭಯ, ಬೆಳೆ ಹಾನಿ ಉಂಟಾಗುತ್ತಿದ್ದು, ಈ ಆನೆಗಳನ್ನು ಕೂಡಲೆ ಸ್ಥಳಾಂತರ ಮಾಡಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT