ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾತಿ, ಮತ, ಪಂಥ ಮೀರಿದ ದಾರ್ಶನಿಕ’

Last Updated 8 ನವೆಂಬರ್ 2017, 7:21 IST
ಅಕ್ಷರ ಗಾತ್ರ

ಹಾನಗಲ್‌: ‘ಕನಕದಾಸರು ಜಾತಿ, ಮತ, ಪಂಥಗಳನ್ನು ಮೀರಿ ಬೆಳೆದ ದಾರ್ಶನಿಕರು. ಜೀವಪರ ನಿಲುವನ್ನು ಹೊಂದಿದ್ದ ಅವರು ವಿಶ್ವದ ಒಳಿತನ್ನು ಬಯಸಿದವರು’ ಎಂದು ಶಾಸಕ ಮನೋಹರ ತಹಸೀಲ್ದಾರ್‌ ಬಣ್ಣಿಸಿದರು. ತಾಲ್ಲೂಕು ಆಡಳಿತ ಮತ್ತು ಪ್ರದೇಶ ಕುರುಬ ಸಮಿತಿ ತಾಲ್ಲೂಕು ಘಟಕದಿಂದ ಸೋಮವಾರ ಇಲ್ಲಿನ ಕನಕದಾಸ ಉದ್ಯಾನದಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘21 ಶತಮಾನದ ಆಧುನಿಕ ಯುಗದಲ್ಲೂ ಜಾತಿಯ ವ್ಯಾಮೋಹ ಹೊಂದಿದವರು, ಕನಕದಾಸರ ಕೀರ್ತನೆಗಳನ್ನೂ ಒಮ್ಮೆ ಸಮಚಿತ್ತದಿಂದ ಆಲಿಸಿದರೆ ಅಂಥವರ ಮನಪರಿವರ್ತನೆ ಆಗಲು ಸಾಧ್ಯವಿದೆ’ ಎಂದು ಅಭಿಪ್ರಾಯಪಟ್ಟರು. ಕುರುಬ ಸಮಾಜದ ಮುಖಂಡ ದಾನಪ್ಪ ಗಂಟೇರ ಪ್ರಾಸ್ತಾವಿಕ ಮಾತನಾಡಿದರು. ‘ಪಟ್ಟಣದಲ್ಲಿ ಕುರುಬ ಸಮಾಜದ ಆರಾಧ್ಯ ದೈವ ಬೀರಲಿಂಗೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ಇದೇ ವೇಳೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ತಾಲ್ಲೂಕಿನ ಗೆಜ್ಜೆಹಳ್ಳಿ ಗ್ರಾಮದ ವಿಷ್ಣಪ್ಪ ಪುರದವರ ಮತ್ತು ಉಪನ್ಯಾಸ ನೀಡಿದ ಶಿಕ್ಷಕಿ ಸಮಿತ್ರಾ ಅನಕನಹಳ್ಳಿ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಉದ್ಯಾನದಲ್ಲಿನ ಕನಕದಾಸರ ಪುತ್ಥಳಿಗೆ ಶಾಸಕ ತಹಸೀಲ್ದಾರ್ ಮಾಲಾರ್ಪಣೆ ಮಾಡಿದರು.

ಪ್ರದೇಶ ಕುರುಬರ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಎಚ್.ದೊಡ್ಡಕುರುಬರ, ಉಪಾಧ್ಯಕ್ಷ ಡಾ.ಚನ್ನಪ್ಪ ದೊಡ್ಡಚಿಕ್ಕಣ್ಣನವರ, ಮುಖಂಡರಾದ ಭೋಜರಾಜ ಕರೂದಿ, ಬಿ.ಶಿವಪ್ಪ, ಪ್ರಕಾಶಗೌಡ ಪಾಟೀಲ, ಏಳುಕೋಟೆಪ್ಪ ಹಾವಳೇರ, ಆರ್‌.ಎಸ್‌.ಪಾಟೀಲ, ರುದ್ರಪ್ಪ ಕಮ್ಮಾರ, ಎ.ಎಂ.ಪಠಾಣ, ಚಂದ್ರಪ್ಪ ಜಾಲಗಾರ, ಮಾಲತೇಶ ಬ್ಯಾಗವಾದಿ ಮತ್ತು ತಹಸೀಲ್ದಾರ್‌ ಶಕುಂತಲಾ ಚೌಗಲಾ ಹಾಜರಿದ್ದರು.

ಸರ್ಕಾರಿ ಪಿ.ಯು ಕಾಲೇಜು: ಹಾನಗಲ್‌ನ ಸರ್ಕಾರಿ ಪಿ.ಯು ಕಾಲೇಜಿನಲ್ಲಿ ಸಂತ ಕವಿ ಕನಕದಾಸರ ಜಯಂತಿ ನಡೆಯಿತು. ಈ ವೇಳೆ, ಜೀವನ–ಸಾಧನೆ ಕುರಿತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಾಚಾರ್ಯ ಎಸ್‌.ಸಿ.ಪೀರಜಾದೆ ಮಾತನಾಡಿದರು. ಉಪನ್ಯಾಸಕರಾದ ಮಾರುತಿ ಶಿಡ್ಲಾಪೂರ, ಎಚ್.ಎಸ್.ಬಾರ್ಕಿ, ಎಸ್.ಎಸ್.ನಿಸ್ಸೀಮಗೌಡರ, ಎನ್.ವಿ.ಪಾಟೀಲ, ರೂಪಾ ಹಿರೇಮಠ, ಗೌರಿ ಕೊಂಡೋಜಿ ಹಾಜರಿದ್ದರು. ಭಾಗ್ಯಲಕ್ಷ್ಮೀ ಹರಿಜನ ಭಕ್ತಿ ಗೀತೆಗಳನ್ನು ಹಾಡಿದರು.

ಕುಮಾರೇಶ್ವರ ಕಾಲೇಜು: ಹಾನಗಲ್‌ನ ಕುಮಾರೇಶ್ವರ ಕಲಾ–ವಾಣಿಜ್ಯ ಕಾಲೇಜಿನಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ಪ್ರೊ. ಎಸ್.ವಿ. ಸೋಮನಾಥ, ಪ್ರಾಧ್ಯಾಪಕರಾದ ಡಾ. ಎಂ.ಎಚ್.ಹೊಳಿಯಣ್ಣನವರ, ಡಾ. ಪ್ರಕಾಶ ಹೊಳೇರ, ಅಧೀಕ್ಷಕ ಅರುಣ ತಿರುಮಲೆ, ವಸಂತ ಗುಡಗುಡಿ, ಎಂ.ಡಿ.ಕಲಾಲ, ಕಮಲಾಕ್ಷಿ ದೇಸಾಯಿ, ಹನುಂತಪ್ಪ.ಸಿ, ದುರುಗಮ್ಮ ಹೊಸಮನಿ, ನಾಗರಾಜ ಪುರೋಹಿತ, ಹನುಮಂತಪ್ಪ ದಳವಾಯಿ, ಶೇಖಪ್ಪ ತಗಡಿನಮನಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT