ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ. 8ರಿಂದ ಮಾಹಿತಿಪೂರ್ಣ ಕೃಷಿ ಮೇಳ

Last Updated 8 ನವೆಂಬರ್ 2017, 9:33 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ಕೃಷಿ ವಿಶ್ವವಿದ್ಯಾಲಯವು ಡಿಸೆಂಬರ್‌ 8 ರಿಂದ 11ರವರೆಗೆ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಕೃಷಿ ಮೇಳ ಹಮ್ಮಿಕೊಂಡಿದೆ. ಕೃಷಿಗೆ ಸಂಬಂಧಿಸಿದ ಹೊಸ ತಂತ್ರಜ್ಞಾನಗಳ ಬಗ್ಗೆ ರೈತರಿಗೆ ಮಾಹಿತಿ ಒದಗಿಸುವುದು ಮತ್ತು ಕೃಷಿಯಲ್ಲಿ ಅವುಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುವುದು ಮೇಳದ ಉದ್ದೇಶ. ‘ಜಲ-ನೆಲ ಸಿರಿ, ಧಾನ್ಯ ಸಿರಿ, ಜೀವನ ಸಿರಿ’ ಶೀರ್ಷಿಕೆಯಡಿ ಮೇಳ ನಡೆಯಲಿದೆ.

ಸಿರಿ ಧಾನ್ಯಗಳ ಪ್ರಪಂಚ, ಉತ್ಪಾದನೆ ಮತ್ತು ಮೌಲ್ಯವರ್ಧನೆ; ನೀರು ಸಂರಕ್ಷಣೆ-ಮಳೆನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ; ಅಲಂಕಾರಿಕ ಮೀನು ಸಾಕಾಣಿಕೆ; ಬೀಜಗಳು; ನರ್ಸರಿ, ಔಷಧೀಯ ಮತ್ತು ಸುಗಂಧಿತ ಸಸ್ಯಗಳು; ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು, ಜೈವಿಕ ಗೊಬ್ಬರಗಳು; ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳು; ಪಶು,ಕೋಳಿ ಆಹಾರಗಳು; ಕೃಷಿಗೆ ಸಂಬಂಧಿಸಿದ ಪ್ರಕಟಣೆಗಳು; ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು, ಸ್ವ-ಸಹಾಯ ಗುಂಪುಗಳ ಸಬಲೀಕರಣ; ಉನ್ನತ ತೋಟಗಾರಿಕೆ ತಂತ್ರಜ್ಞಾನ; ಗುಡಿ ಕೈಗಾರಿಕೆಗಳು ಮತ್ತು ಹಣಕಾಸು ಸಂಸ್ಥೆಗಳ ಮಾಹಿತಿ; ಕೃಷಿ ಯಂತ್ರೋಪಕರಣಗಳು ಟ್ರ್ಯಾಕ್ಟರ್ ಗೆ ಸಂಬಂಧಪಟ್ಟ ಸಲಕರಣೆಗಳು; ಕೊಯ್ಲು ಮತ್ತು ಕೊಯ್ಲೊತ್ತರ ಯಂತ್ರಗಳು; ನೀರಾವರಿ ಪಂಪ್‌ಸೆಟ್‌ಗಳು ಮತ್ತು ಇತರೆ ಉಪಕರಣಗಳು-ಹನಿ ಮತ್ತು ತುಂತುರು ನೀರಾವರಿ,
ಸಿಂಪಡಣೆ ಮತ್ತು ಬೀಜ ಸಂಸ್ಕರಣ ಮತ್ತು ಆಹಾರ ಸಂಸ್ಕರಣ ಯಂತ್ರಗಳು; ಸಾಂಪ್ರದಾಯಿಕವಲ್ಲದ ಶಕ್ತಿ ಉಪಕರಣಗಳು; ನೈಜ ಬೆಳೆಗಳ ಪ್ರಾತ್ಯಕ್ಷಿಕೆ; ನರ್ಸರಿ ಉಪಕರಣಗಳು ಮುಂತಾದವು ಮೇಳದಲ್ಲಿ ಪ್ರದರ್ಶನಗೊಳ್ಳಲಿವೆ.

ಮೇಳದಲ್ಲಿ ರೈತರಿಗೆ, ರೈತಮಹಿಳೆಯರಿಗೆ, ಗ್ರಾಮೀಣ ಯುವಕ, ಯುವತಿಯರಿಗೆ ಹಾಗೂ ಆಸಕ್ತ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಲಾಗುವುದು.
ಮೇಳಕ್ಕೆ ಹೈದರಾಬಾದ್‌-ಕರ್ನಾಟಕ ಸೇರಿದಂತೆ ಇತರ ಭಾಗಗಳಿಂದ ಸುಮಾರು 3.5 ಲಕ್ಷಕ್ಕೂ ಹೆಚ್ಚು ರೈತರು ಭೇಟಿ ನೀಡುವ ನಿರೀಕ್ಷೆ ಇದೆ.

ಮೇಳದಲ್ಲಿ ರೈತರಿಂದ ರೈತರಿಗಾಗಿ ಕಾರ್ಯಕ್ರಮ, ಶ್ರೇಷ್ಠ ಕೃಷಿಕ/ ಕೃಷಿಮಹಿಳೆ ಮತ್ತು ಶ್ರೇಷ್ಠ ಯುವ ಕೃಷಿಕ,ಯುವ ಕೃಷಿ ಮಹಿಳೆ ಪ್ರಶಸ್ತಿ ಪುರಸ್ಕಾರ ನೀಡಲಾಗುವುದು.
ಸುಮಾರು 300 ಮಳಿಗೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಕೃಷಿಗೆ ಸಂಬಂಧಿಸಿದ ಖಾಸಗಿ, ಸರ್ಕಾರ, ಸರ್ಕಾರೇತರ ಹಾಗೂ ಸರ್ಕಾರ ಸಹಭಾಗಿತ್ವ ಮತ್ತು ಇತರೆ ಸಂಘ ಸಂಸ್ಥೆಗಳು ಭಾಗವಹಿಸಬಹುದು. ಮಳಿಗೆಗಳ ವಿವರ, ಕಾಯ್ದಿರಿಸುವ ಅರ್ಜಿ ಮತ್ತು ಸಂಪರ್ಕಿಸಲು www.uasraichur.edu.in ವೆಬ್‌ಸೈಟ್‌ ನೋಡಬಹುದು ಎಂದು ಕೃಷಿ ಮೇಳದ ಅಧ್ಯಕ್ಷ ಡಾ. ಎಸ್.ಕೆ. ಮೇಟಿ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ಡಾ. ಪ್ರಮೋದ್ ಕಟ್ಟಿ ತಿಳಿಸಿದ್ದಾರೆ. ಆಸಕ್ತರು ಮೇಳಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ08532-220440 ಸಂಪರ್ಕಿಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT