ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ರದ್ದತಿ ಮರಣ ಶಾಸನ

Last Updated 9 ನವೆಂಬರ್ 2017, 5:09 IST
ಅಕ್ಷರ ಗಾತ್ರ

ದೇವನಹಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು 2016ರ ನವೆಂಬರ್‌ 8ರಂದು ಮಾಡಿದ ಗರಿಷ್ಠ ಮುಖಬೆಲೆಯ ನೋಟು ರದ್ದತಿಯು ಜನಸಾಮಾನ್ಯರಿಗೆ ಮರಣ ಶಾಸನವಾಗಿದೆ ಎಂದು ಮುಖಂಡ ಮುನಿನರಸಿಂಹಯ್ಯ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿನ ತಾಲ್ಲೂಕು ಆಡಳಿತ ಸಂಕೀರ್ಣ ಆವರಣದಲ್ಲಿ ಕಾಂಗ್ರೆಸ್‌ ವತಿಯಿಂದ ನಡೆದ ಕರಾಳ ದಿನಾಚರಣೆ ಅಂಗವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬೃಹತ್‌ ಪ್ರಮಾಣದ ಗರಿಷ್ಠ ಮುಖಬೆಲೆಯ ನೋಟನ್ನು ರದ್ದುಮಾಡಿದ ಮೋದಿ ಕ್ರಮ ಬೆಟ್ಟ ಅಗೆದು ಇಲಿ ಹಿಡಿದಂತಾಗಿದೆ. ಬಂಡವಾಳಶಾಹಿಗಳಿಗೆ ಅನುಕೂಲ ಕಲ್ಪಿಸುವ ಏಕೈಕ ಉದ್ದೇಶದಿಂದ ನೋಟು ರದ್ದತಿ ಮಾಡಲಾಗಿದೆ. ಇದರಿಂದ ಜನಸಾಮಾನ್ಯರ ಸ್ಥಿತಿ ಇನ್ನೂ ಶೋಚನೀಯ ಸ್ಥಿತಿಯಲ್ಲಿದೆ ಎಂದು ದೂರಿದರು.

ನೋಟು ರದ್ದತಿಯಿಂದ ದೇಶದಲ್ಲಿ 200ಕ್ಕೂ ಹೆಚ್ಚು ಅಮಾಯಕರು ಸಾವನ್ನಪ್ಪಿದ್ದಾರೆ. ಸಣ್ಣ ಉದ್ದಿಮೆ, ಕಿರು ಬಂಡವಾಳ ಹೂಡಿಕೆದಾರರು ನೆಲ ಕಚ್ಚಿದ್ದು ಇನ್ನೂ ಚೇತರಿಕೆ ಕಂಡಿಲ್ಲ. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ. ಇದೇನಾ ಮೋದಿಜಿ ಸಾಧನೆ ಎಂದರು. ಉಪಗ್ರಹ ಉಡಾವಣೆವರೆಗೆ ಕಾಂಗ್ರೆಸ್ ಸರ್ಕಾರ ಸಾಧನೆ ಮಾಡಿತ್ತು. ಅಲ್ಲದೆ ಜನಪರ ಯೋಜನೆಗಳಿಗೆ ಚಾಲನೆ ನೀಡುತ್ತು ಎಂಬುದನ್ನು ಕೇಂದ್ರ ಸರ್ಕಾರ ಅರ್ಥಮಾಡಿಕೊಳ್ಳಬೇಕು ಎಂದರು.

ಮುಖಂಡ ಕೆ. ವೆಂಕಟಸ್ವಾಮಿ ಮಾತನಾಡಿ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರತಿಯೊಬ್ಬ ಬಡವರ ಖಾತೆಗೆ ನೂರು ದಿನದಲ್ಲಿ ಕಪ್ಪು ಹಣ ತಂದು ತಲಾ ₹ 15 ಲಕ್ಷ ಜಮಾ ಮಾಡುತ್ತೇನೆ ಎಂದು ಬಿಜೆಪಿ ಹೇಳಿತ್ತು. ಜನ್ ಧನ್ ಖಾತೆಗೂ ನಯಾ ಪೈಸೆ ಈ ವರೆಗೂ ಬಂದಿಲ್ಲ. ನೋಟು ರದ್ದತಿಯಿಂದ ಅನೇಕ ಮದುವೆಗಳು ಮುರಿದು ಬಿದ್ದಿವೆ. ದೇಶದ ಹಣಕಾಸು ವ್ಯವಸ್ಥೆ ಬುಡಮೇಲಾಗಿದೆ. ಕಾರ್ಮಿಕರ ಮತ್ತು ರೈತರ ಸ್ಥಿತಿ ಚಿಂತಾಜನಕವಾಗಿದೆ. ದೇಶದ ಜನತೆಗೆ ಅಚ್ಛೇ ದಿನ್ ಬರಲೇ ಇಲ್ಲ. ಮನ್ ಕೀ ಬಾತ್ ನಡೆಯಲಿಲ್ಲ ಎಂದು ಲೇವಡಿ ಮಾಡಿದರು.

ಜಿಲ್ಲಾ ಪಂಚಾಯತಿ ಸದಸ್ಯರಾದ ಲಕ್ಷ್ಮಿನಾರಾಯಣ, ಕೆ.ಸಿ.ಮಂಜುನಾಥ್, ರಾಧಮ್ಮ ಮುನಿರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರುತಿ, ಪ್ರಧಾನ ಕಾರ್ಯದರ್ಶಿ ಎಸ್.ಪಿ.ಮುನಿರಾಜು, ಕಾಂಗ್ರೆಸ್ ಯುವ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಆರ್.ನಾಗೇಶ್, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಯುವಕಾಂಗ್ರೆಸ್ ಘಟಕ ಅಧ್ಯಕ್ಷ ಮಾರುತಿ, ಕೃಷಿ ಸಮಾಜ ಜಿಲ್ಲಾ ಘಟಕ ಅಧ್ಯಕ್ಷ ಆರ್.ರವಿಕುಮಾರ್, ಕಾಂಗ್ರೆಸ್ ಕಾರ್ಮಿಕ ಘಟಕ ತಾಲ್ಲೂಕು ಅಧ್ಯಕ್ಷ ಆವತಿ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಘಟಕ ಉಪಾಧ್ಯಕ್ಷರಾದ ಎಸ್.ಜಿ.ಮಂಜುನಾಥ್, ಪುರುಷೋತ್ತಮ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್, ಉಪಾಧ್ಯಕ್ಷ ರಾಮಾನಾಯ್ಕ, ಮುಖಂಡ ಚೇತನ್ ಗೌಡ, ಚಿನ್ನಪ್ಪ, ಸಿ.ಜಗನ್ನಾಥ್, ಜಿ.ಸುರೇಶ್,ಕೆ.ವಿ.ಸ್ವಾಮಿ, ಪ್ರಸನ್ನ, ವಿ.ನಾರಾಯಣಸ್ವಾಮಿ, ರಾಜಣ್ಣ, ಗೊಡ್ಲುಮುದ್ದೇನಹಳ್ಳಿ ಮುನಿರಾಜು, ಭೂವನಹಳ್ಳಿ ಮುನಿರಾಜು, ಕೃಷಿಕ ಸಮಾಜ ತಾಲ್ಲೂಕು ಘಟಕ ಉಪಾಧ್ಯಕ್ಷ ದೇವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT