ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹದಾಯಿಗಾಗಿ ರೈತ ಕುಲ ಒಂದಾಗಬೇಕು’

Last Updated 9 ನವೆಂಬರ್ 2017, 6:19 IST
ಅಕ್ಷರ ಗಾತ್ರ

ನರಗುಂದ: ‘ಮಹದಾಯಿ ಯೋಜನೆ ವಿಳಂಬವಾಗಲು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೇ ಪ್ರಮುಖ ಕಾರಣ. ಜೀವ ಜಲಕ್ಕಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ರೈತ ಕುಲ ಒಂದಾಗಬೇಕು’ ಎಂದು ಹೋರಾಟ ಸಮಿತಿ ಸದಸ್ಯೆ ರತ್ನವ್ವ ಸವಳಭಾವಿ ಅಭಿಪ್ರಾಯಪಟ್ಟರು. ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 847ನೇ ದಿನ ಬುಧವಾರ ಅವರು ಮಾತನಾಡಿದರು.

‘ಮಹದಾಯಿಗೆ ರಾಜಕೀಯ ಇಚ್ಛಾಶಕ್ತಿ ಕೊರತೆ ಹೆಚ್ಚಾಗಿದೆ.ಬದುಕೇ ಹೋರಾಟ ಎನ್ನುವ ಹಾಗೆ ರೈತರು ನಿರಂತರ ಧರಣಿ ಮುಂದುವರಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಇದನ್ನು ಮೋಜಿನಾಟದಂತೆ ನೋಡುತ್ತಿದೆ. ರೈತರ ಯಾವುದೇ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಬೇಕು. ಮಹಿಳೆಯರು ಹೆಚ್ಚು ಜಾಗೃತರಾಗಬೇಕು’ ಎಂದು ಅವರು ಹೇಳಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಆಸಕ್ತಿ ವಹಿಸಿ ಮಹದಾಯಿ ಜಾರಿಗೆ ಪ್ರಧಾನಿಗಳ ಮೇಲೆ ಒತ್ತಡ ಹೇರಬೇಕು’ ಎಂದು ಸೋಮಲಿಂಗಪ್ಪ ಆಯಟ್ಟಿ ಆಗ್ರಹಿಸಿದರು. ‘ಈ ಭಾಗದ ಶಾಸಕರು, ಸಂಸದರು ಗೋವಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಮನವೊಲಿಸಲು ಮುಂದಾಗಬೇಕು.

ನೀರಿನ ವಿಷಯದಲ್ಲಿ ರಾಜಕೀಯ ಸಲ್ಲದು. ಆದಷ್ಟು ಬೇಗ ಸಂಧಾನ ಸಭೆ ನಡೆಯಬೇಕು’ ಎಂದು ಅರ್ಜುನ ಮಾನೆ ಒತ್ತಾಯಿಸಿದರು. ವೆಂಕಪ್ಪ ಹುಜರತ್ತಿ, ಹನಮಂತ ಪಡೆಸೂರು, ಕಾಡಪ್ಪ ಕಾಕನೂರ, ಸಿದ್ದಪ್ಪ ಹುಲಜೋಗಿ, ಚನ್ನಬಸವ್ವ ಆಯಟ್ಟಿ, ಎಸ್‌.ಬಿ.ಜೋಗಣ್ಣವರ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT