ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಡಿಗೆಗೆ ತಕ್ಕಷ್ಟು ವ್ಯಾಪಾರವೇ ಇಲ್ಲ’

Last Updated 9 ನವೆಂಬರ್ 2017, 6:38 IST
ಅಕ್ಷರ ಗಾತ್ರ

ಹಿರೇಕೆರೂರ: ಪಟ್ಟಣದ ಬಸ್ ನಿಲ್ದಾಣದ ಎದುರು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ಮಿಸಿರುವ 20 ವಾಣಿಜ್ಯ ಮಳಿಗೆಗಳ ಬಾಡಿಗೆಯ ಪೈಪೋಟಿ ಹೆಚ್ಚುತ್ತಿರುವುದರಿಂದ ಸಣ್ಣ ವ್ಯಾಪಾರಸ್ಥರಿಗಳಿಗೆ ತೊಂದರೆ ತಾಗುತ್ತಿದೆ.

ಪತ್ರಿ ಐದು ವರ್ಷಗಳಿಗೆ ಒಮ್ಮೆ ನಡೆಯುವ ಬಹಿರಂಗ ಹರಾಜಿನಲ್ಲಿ ವ್ಯಾಪಾರಿಗಳು ಪತ್ರಿ ತಿಂಗಳಿಗೆ ₹ 10 ಸಾವಿರ ರಿಂದ 18 ಸಾವಿರ ವರೆಗೆ ಪತ್ರಿ ತಿಂಗಳಿಗೆ ₹ 10 ಸಾವಿರ ರಿಂದ 18 ಸಾವಿರ ವರೆಗೆ ನೀಡುವಾಗುವುದಾಗಿ ಬಾಡಿಗೆ ಪಡೆದಿದ್ದಾರೆ. ಬಾಡಿಗೆಗೆ ತಕ್ಕಷ್ಟು ವ್ಯಾಪಾರವಾಗದೇ ಅನೇಕರು ನಷ್ಟ ಅನುಭವಿಸುತ್ತಿದ್ದರೆ, ಅನೇಕರು ಬಾಡಿಗೆ ಕಟ್ಟಲು ಆಗದೇ ಮಳಿಗೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ.

ಹರಾಜು ಆದ ಮೊತ್ತಕ್ಕೆ ವಾರ್ಷಿಕ ಶೇ.10ರಷ್ಟು ಬಾಡಿಗೆ ಹೆಚ್ಚುತ್ತಾ ಹೋಗುತ್ತದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬಂದ ಮೇಲೆ ಬಾಡಿಗೆ ದರ ಇನ್ನಷ್ಟು ಹೆಚ್ಚಿದೆ. ಹೀಗಾಗಿ 3 ವರ್ಷಗಳ ಅವಧಿಯಲ್ಲಿ ಸುಮಾರು 20 ವರ್ತಕರು ಮಳಿಗೆಗಳನ್ನು ಬಿಟ್ಟು ಹೋಗಿದ್ದಾರೆ.

‘ಕಳೆದ ವರ್ಷ ಮೊದಲ ಮಳಿಗೆ ₹16 ಸಾವಿರಕ್ಕೆ ಹರಾಜಾಗಿತ್ತು. ಈ ವರ್ಷ ಅದರ ಬಾಡಿಗೆ ₹18 ಸಾವಿರವಾಗುತ್ತದೆ. ವ್ಯಾಪಾರವಿಲ್ಲದೆ ಒಮ್ಮೊಮ್ಮೆ ಬಾಡಿಗೆ ಕಟ್ಟುವಷ್ಟು ಸಹ ವ್ಯಾಪಾರವಾಗುವುದಿಲ್ಲ. ಬೇರೆ ಉದ್ಯೋಗ ತಿಳಿಯದೇ ಅನಿವಾರ್ಯ ವಾಗಿ ವ್ಯಾಪಾರವನ್ನು ಮಾಡುತ್ತಿದ್ದೇವೆ’ ಎಂದು ಮೊಟ್ಟೆ ವ್ಯಾಪಾರಿ ಹಜರತ್‌ ಅಲಿ ಕೋಡ ಅವರು ಹೇಳುತ್ತಾರೆ.

‘2 ಮಳಿಗೆಗಳನ್ನು ಬಾಡಿಗೆ ಪಡೆದಿದ್ದೇನೆ. ಹೋಟೆಲ್‌ ನಡೆಸುತ್ತಿದ್ದು, ಹಗಲಿರುಳು ದುಡಿದ ಹಣವೆಲ್ಲ ಬಾಡಿಗೆ ಕಟ್ಟುವುದಕ್ಕೆ ಹೋಗುತ್ತಿದೆ. ಉಳಿತಾಯ ಸಾಧ್ಯವಾಗುತ್ತಿಲ್ಲ, ಲಕ್ಷಾಂತರ ರೂಪಾಯಿ ಸಾಲವಾಗಿದೆ’ ಎಂದು ಹೋಟೆಲ್‌ ಮಾಲೀಕ ದಾದಾಫೀರ್ ಜಂಗ್ಲೆಣ್ಣನವರ ಹೇಳಿದರು.

‘ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಳಿಗೆ ಹಾಗೂ ಸಮೀಪದಲ್ಲಿಯೇ ಇರುವ ಖಾಸಗಿ ಮಳಿಗೆಗಳ ಬಾಡಿಗೆ ದರದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಈ ಮಳಿಗೆಗಳಿಗಿಂತ ಎರಡರಷ್ಟು ವಿಸ್ತೀರ್ಣ ಹೊಂದಿರುವ ಮಳಿಗೆಗಳು ಸಹ ಇದಕ್ಕಿಂತ ಸಾಕಷ್ಟು ಕಡಿಮೆ ಮೊತ್ತಕ್ಕೆ ಬಾಡಿಗೆ ನೀಡಿದ್ದಾರೆ. ಅಂಜುಮನ್ ಕಾಂಪ್ಲೆಕ್ಸ್‌ ಮಳಿಗೆಗೆ ಪತ್ರಿ ತಿಂಗಳಿಗೆ ₹ 5 ಸಾವಿರ ಹಾಗೂ ಶೆಟ್ಟರ್ ಕಾಂಪ್ಲೆಕ್ಸ್‌ನ ಮಳಿಗೆಗೆ ₹ 7 ಸಾವಿರದಿಂದ ₹ 8 ಸಾವಿರಕ್ಕೆ ಸಿಗುತ್ತವೆ’ ಎಂದು ವಿವರಿಸುತ್ತಾರೆ.

‘ಕೆಲವರು ವೈಯಕ್ತಿಕ ದ್ವೇಷ ದಿಂದಲೋ, ದುರುದ್ದೇಶದಿಂದಲೋ ಹರಾಜು ಪ್ರಕ್ರಿಯೆಯಲ್ಲಿ ಕೆಲವರು ಪಾಲ್ಗೊಳ್ಳುತ್ತಾರೆ. ಹೆಚ್ಚು ಮೊತ್ತಕ್ಕೆ ಹರಾಜು ಕೂಗಿ ಕೆಲವು ತಿಂಗಳು ಅಂಗಡಿ ನಡೆಸಿ ನಂತರ ಬೀಗ ಹಾಕಿಕೊಂಡು ಹೋಗುತ್ತಾರೆ. ಇದರಿಂದ ಕಾಯಂ ವರ್ತಕರಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಪ್ರತಿ 5 ವರ್ಷಕ್ಕೊಮ್ಮೆ ಹರಾಜು ಪ್ರಕ್ರಿಯೆ ನಡೆಸುವುದನ್ನು ಬಿಟ್ಟು, ಪ್ರತಿ ವರ್ಷ ಶೇ.10ರಷ್ಟು ಹೆಚ್ಚಿಸುವ ಒಪ್ಪಂದ ಮಾಡಿಕೊಂಡು ಇಲ್ಲಿ ಕಾಯಂ ವ್ಯಾಪಾರಿಗೆ ಬಾಡಿಗೆ ನೀಡಬೇಕು’ ಎಂದು ಬೇಕರಿ ವ್ಯಾಪಾರಿ ಶಂಕರ ಶೆಟ್ಟಿ ಅವರು ಹೇಳುತ್ತಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ವಾಯುವ್ಯ ಸಾರಿಗೆ ಸ್ಥಳೀಯ ಘಟಕ ವ್ಯವಸ್ಥಾಪಕ ಶಿವಮೂರ್ತಿ ಎಸ್ ಅವರು, ‘5 ವರ್ಷಗಳ ಅವಧಿಗೆ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ವಿಭಾಗೀಯ ಕಚೇರಿಯಿಂದ ನಡೆಸುತ್ತಾರೆ. ಬಹಿರಂಗ ಹರಾಜಿನಲ್ಲಿ ನಡೆದ ಬಾಡಿಗೆ ಮೊತ್ತವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಬಾಡಿಗೆದಾರರು ಬಿಟ್ಟು ಹೋಗುವ ಮಳಿಗೆಗಳನ್ನು ಮತ್ತೆ ಹರಾಜು ಮಾಡಲಾಗುತ್ತದೆ’ ಎಂದು ತಿಳಿಸಿದರು.

ಎಚ್‌.ವಿ.ನಾಯ್ಕ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT