ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಹಣಕ್ಕೆ ಕಡಿವಾಣ: ಬೆಳಮಗಿ

Last Updated 9 ನವೆಂಬರ್ 2017, 7:34 IST
ಅಕ್ಷರ ಗಾತ್ರ

ಕಮಲಾಪುರ: ಪ್ರಧಾನಿ ನರೇಂದ್ರ ಮೋದಿ ಅವರು ₹ 500 ಮತ್ತು ₹ 1000 ಮುಖ ಬೆಲೆಯ ನೋಟು ಅಮಾನ್ಯಗೊಳಿಸಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಕಲಬುರ್ಗಿ ಗ್ರಾಮೀಣ ಮಂಡಲ ಬಿಜೆಪಿ ಕಾರ್ಯಕರ್ತರು ಬುಧವಾರ ಸಂಭ್ರಮ ಆಚರಿಸಿದರು. ನಂತರ ಕಪ್ಪು ಹಣದ ಪ್ರತಿಕೃತಿ ದಹಸಿದರು.

ಮಾಜಿ ಸಚಿವ ರೇವು ನಾಯಕ ಬೆಳಮಗಿ ಮಾತನಾಡಿ, ‘ಪ್ರಧಾನಿ ಮರೇಂದ್ರ ಮೋದಿಯವರ ಈ ಐತಿಹಾಸಿಕ ನಿರ್ಣಯದಿಂದ ದೇಶದಲ್ಲಿನ ಕಪ್ಪು ಹಣಕ್ಕೆ ಕಡಿವಾಣ ಬಿದ್ದಿದೆ. ನಕಲಿ ನೋಟುಗಳ ಚಲಾವಣೆ ಸ್ಥಗಿತಗೊಂಡಿದೆ. ತೆರಿಗೆಗಳ್ಳರು ಸಾವಿರಾರು ಕೋಟಿ ರೂಪಾಯಿ ಅಡಗಿಸಿಟ್ಟಿದ್ದು, ಎಲ್ಲವೂ ಬಹಿರಂಗವಾಗಿದೆ’ ಎಂದರು.

ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುಭಾಷ ಬಿರಾದಾರ ಮಾತನಾಡಿ, ‘ನೋಟು ಅಮಾನ್ಯೀಕರಣ ವಿರೋಧ ಸರಿಯಲ್ಲ. ತೆರಿಗೆಗಳ್ಳ ಕಾಳಧನಿಕರಿಗೆ ತೊಂದರೆಯಾಗಿದೆ’ ಎಂದರು.

ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ, ಬಿಜೆಪಿ ಮುಖಂಡ ನಾಮದೇವ ರಾಠೋಡ್‌, ಗ್ರಾಮೀಣ ಮಂಡಲ ಅಧ್ಯಕ್ಷ ಶರಣು ಸಲಗರ, ಉಪಾಧ್ಯಕ್ಷ ಸುಜೀತ ಬಿರಾದಾರ, ಪ್ರಧಾನ ಕಾರ್ಯದರ್ಶಿ ರಾಜು ಕೋಟಿ, ಗುರು ಮಾಟೂರ, ಯುವ ಮೋರ್ಚಾ ಅಧ್ಯಕ್ಷ ಶಶಿಧರ ಮಾಕಾ, ಕಾರ್ಯದರ್ಶಿ ಆನಂದ ಕಣಸೂರ, ಶಿವಕುಮಾರ ದೋಶೆಟ್ಟಿ, ಸುರೇಶ ರಾಠೋಡ್‌, ಶಿವಶರಣ ದೋಶಟ್ಟಿ, ಸಾಗರ ಗುತ್ತೇದಾರ, ಚನ್ನು ಮುನ್ನಳ್ಳಿ, ಸಚೀನ ರಾಂಪೂರೆ, ಭಾಗ್ಯವಂತ ಕೌನಳ್ಳಿ, ನಾಗರಾಜ ಜನಕಟ್ಟಿ, ಶರಣು ಕಲ್ಯಾಣ, ಶಶಿಕಾಂತ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT