ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವತಂತ್ರ ಧರ್ಮ: ಹೋರಾಟ ಅನಿವಾರ್ಯ’

Last Updated 9 ನವೆಂಬರ್ 2017, 8:47 IST
ಅಕ್ಷರ ಗಾತ್ರ

ಕನಕಗಿರಿ: ‘ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವುದು ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಹೋರಾಟದ ದಾರಿ ಹಿಡಿಯುವುದು ಅನಿವಾರ್ಯ’ ಎಂದು ಲಿಂಗಾಯತ ಸ್ವತಂತ್ರ ಧರ್ಮ ವೇದಿಕೆ ಜಿಲ್ಲಾ ಸಂಚಾಲಕ ಬಸವರಾಜ ಬಳ್ಳೊಳ್ಳಿ ಹೇಳಿದರು. ಇಲ್ಲಿನ ಎಪಿಎಂಸಿ ಶ್ರಮಿಕರ ಭವನದಲ್ಲಿ ಈಚೆಗೆ ನಡೆದ ಜಿಲ್ಲಾ ಮಟ್ಟದ ಲಿಂಗಾಯತ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಸ್ವತಂತ್ರ ಧರ್ಮ ಘೋಷಣೆಗಾಗಿ ಕೊಪ್ಪಳದಲ್ಲಿ ನವೆಂಬರ್‌ 11ರಂದು ಲಿಂಗಾಯತ ಧರ್ಮದ ಮಹಾ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಭಾಗವಹಿಸಿ ಸಮಾಜದವರು ಬೆಂಬಲ ವ್ಯಕ್ತಪಡಿಸಬೇಕು’ ಎಂದು ಮನವಿ ಮಾಡಿದರು.

ಪ್ರಮುಖರಾದ ಎಸ್‌.ಬಿ.ರಡ್ಡಿ ವಕೀಲರು, ಸಿದ್ದಪ್ಪ ಜಕ್ಕಲಿ, ಪಂಪಣ್ಣ ಕಿನ್ನಾಳ, ರುದ್ರಮ್ಮ ಹಾಸಿನಾಳ, ದೊಡ್ಡಬಸಪ್ಪ ಭತ್ತದ ಮಾತನಾಡಿದರು. ಮಲಕೇಶಿ ಕೋಟಿ, ರವಿಶಂಕರ ಪಾಟೀಲ, ಶರಣಪ್ಪ ಭಾವಿಕಟ್ಟಿ, ಬಸವರಾಜ ಕೋರಿ, ಶಿವಯ್ಯ ದೇವಲಾಪುರ, ಮಲ್ಲಿಕಾರ್ಜುನ ಹಡಪದ, ವೀರೇಶ ಹಾದಿಮನಿ, ಪರಪ್ಪ ಚನ್ನಂಗಿ, ಕಂಠೆಪ್ಪ ಮ್ಯಾಗಡೆ, ಹನುಮೇಶ ವಾಲೇಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT