ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತರಿಗೆ ಸಿರಿಧಾನ್ಯ ಬೆಳೆ ವರದಾನ‘

Last Updated 9 ನವೆಂಬರ್ 2017, 8:53 IST
ಅಕ್ಷರ ಗಾತ್ರ

ಮಳವಳ್ಳಿ: ಸರಿಯಾದ ಮಳೆ ಇಲ್ಲದೆ ಹವಾಮಾನ ವೈಪರೀತ್ಯ ಅನುಭವಿಸುತ್ತಿರುವ ರೈತರಿಗೆ ಸಿರಿಧಾನ್ಯ ಬೆಳೆ ವರದಾನವಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಪರಮೇಶ್ ಹೇಳಿದರು. ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದ ರಾಚಯ್ಯ ಎಂಬುವರ ಜಮೀನಿನಲ್ಲಿ ಮಂಗಳವಾರ ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ವತಿಯಿಂದ ಸಾಮಾಜಿಕ ಅರಣ್ಯ ಉತ್ತೇಜನಾ ಯೋಜನೆಯಡಿ ನಡೆದ ಸಿರಿಧಾನ್ಯ ಬೆಳೆಗಳ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭೂಮಿ ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಬಂಜರು ಆಗುತ್ತಿದೆ. ಪರಿಸರ ನಾಶದಿಂದ ಮಳೆ ಕಡಿಮೆಯಾಗಿ ರೈತರನ್ನು ಕಾಡುತ್ತಿದೆ. ಮಳೆ ಇಲ್ಲದ ಸಂದರ್ಭದಲ್ಲಿ ರೈತರಿಗೆ ಅನುಕೂಲವಾಗುವ ರೀತಿ ಸರ್ಕಾರವೆ ಸಿರಿಧಾನ್ಯ ಅಭಿವೃದ್ಧಿ ಪಡಿಸಲು ಮುಂದಾಗಿದೆ. ನೀರು ಮತ್ತು ಮಣ್ಣಿನ ಫಲವತ್ತತೆ ಸಂರಕ್ಷಣೆ ಮಾಡುವತ್ತ ಎಲ್ಲರೂ ಗಮನ ನೀಡಬೇಕಿದ್ದು ಸಾವಯವ ಗೊಬ್ಬರ ಹಾಗೂ ನೀರಿನ ರಕ್ಷಣೆಗೆ ಹನಿ, ತುಂತುರು ನೀರಾವರಿ ಯೋಜನೆ ಸೇರಿ ಹಲವು ಯೋಜನೆಗಳನ್ನು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಮುಂದಿನ ಜ.19 ರಿಂದ 21 ರವರಗೆ ಸರ್ಕಾರವೇ ರಾಷ್ಟ್ರಮಟ್ಟದ ಸಿರಿಧಾನ್ಯ ಹಾಗೂ ಸಾವಯವ ಮೇಳ ಹಮ್ಮಿಕೊಂಡಿದ್ದು ರೈತರು ಭಾಗವಹಿಸುವ ಮೂಲಕ ಪ್ರಯೋಜನ ಪಡೆದುಕೊಳ್ಳಬೇಕು. ಸರ್ಕಾರದ ವತಿಯಿಂದ ಯಂತ್ರೋಪಕರಣವನ್ನು ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತಿದ್ದು ಅದನ್ನು ಉಪಯೋಗಿಸಿಕೊಳ್ಳಬೇಕು ಸಲಹೆ ನೀಡಿದರು.

ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ದಿ ಸಂಸ್ಥೆಯ ಅಧಿಕಾರಿ ಕೆಂಪಯ್ಯ ಮಾತನಾಡಿ ಮಳೆ ಕಡಿಮೆ ಬಂದರೂ ಸಿರಿಧಾನ್ಯವನ್ನು ಬೆಳೆಯಬಹುದು. ಕಡಿಮೆ ಖರ್ಚಿನಲ್ಲಿ ಉತ್ತಮ ಆರೋಗ್ಯದೊಂದಿಗೆ ಉತ್ತಮ ಲಾಭವನ್ನು ಪಡೆದುಕೊಳ್ಳಲು ಸಹಕಾರಿ ಆಗಿದೆ. ಇದರ ಪ್ರಯೋಜನ ಪಡದುಕೊಂಡು ರೈತರು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಮೇಶ್, ಕೃಷಿ ಅಧಿಕಾರಿ ರಮೇಶ್, ಲತಾ, ಸುಚಿತ್ರಾ, ವಂದಿತಾ, ಸಿದ್ದಾರ್ಥ, ಪ್ರದೀಪ್‌, ವರದರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT