ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುಡ್‌ ಮಹಾರಾಜ’ ಸಂಜಯ್‌ ದತ್‌

Last Updated 9 ನವೆಂಬರ್ 2017, 19:30 IST
ಅಕ್ಷರ ಗಾತ್ರ

‘ಭೂಮಿ’ ಸಿನಿಮಾದ ಯಶಸ್ಸಿನ ನಂತರ ಸಂಜಯ್‌ ದತ್‌ ಹೊಸ ಲುಕ್‌ನೊಂದಿಗೆ ಬಂದಿದ್ದಾರೆ. ಈವರೆಗೂ ದತ್‌ ಅವರ ಹಾಸ್ಯ ಪ್ರಧಾನ ಪಾತ್ರ, ಪೊಲೀಸ್‌, ರೊಮ್ಯಾಂಟಿಕ್‌ ಹೀರೊ ಮುಂತಾದ ವಿಭಿನ್ನ ಪಾತ್ರಗಳನ್ನು ಆನಂದಿಸಿದ್ದೇವೆ. ಇದೇ ಮೊದಲ ಬಾರಿಗೆ ಸಂಜಯ್‌ ದತ್‌ ನಮ್ಮ ಮುಂದೆ ‘ಒಳ್ಳೆಯ ಮಹಾರಾಜ’ ಆಗಿ ಬರಲಿದ್ದಾರೆ. ಅವರ ಮುಂದಿನ ಚಿತ್ರದ ಹೆಸರು ‘ದಿ ಗುಡ್‌ ಮಹಾರಾಜ’. ಚಿತ್ರದ ಪೋಸ್ಟರ್‌ ಬಿಡುಗಡೆಯಾಗಿದ್ದು, ಸಂಜಯ್‌ ಅವರ ಹೊಸ ಲುಕ್‌ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

‘ಭೂಮಿ’ಯಲ್ಲಿ ಜೋಡಿಯಾಗಿದ್ದ ಸಂಜಯ್‌ ಹಾಗೂ ಉಮಂಗ್‌ ಕುಮಾರ್‌ ಈ ಚಿತ್ರದಲ್ಲೂ ಒಟ್ಟಿಗೆ ಕೆಲಸ ಮಾಡಲಿದ್ದಾರೆ. ಬ್ರಿಟಿಷರ ಅಧೀನ ಸಂಸ್ಥಾನವಾಗಿದ್ದ ನವನಗರದ ದಿಗ್ವಿಜಯ ಸಿಂಗ್‌ಜಿ ರಂಜಿತ್‌ಸಿಂಗ್‌ ಹೆಸರಿನ ಪಾತ್ರವನ್ನು ದತ್‌ ನಿರ್ವಹಿಸಲಿದ್ದಾರೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ನಿರಾಶ್ರಿತರಾದ ಪೋಲೆಂಡ್‌ ಜನರಿಗಾಗಿ ರಂಜಿತ್ ಸಿಂಗ್ ಶಿಬಿರಗಳನ್ನು ನಿರ್ಮಿಸಿರುತ್ತಾರೆ. ಪೋಲೆಂಡ್‌ ಮಕ್ಕಳನ್ನು ನಾಜಿಗಳಿಂದ ಕಾಪಾಡಲು ಶ್ರಮಿಸುತ್ತಾನೆ. ಇಂಥ ಹಲವು ಕಥೆಗಳನ್ನು ‘ದಿ ಗುಡ್‌ ಮಹಾರಾಜ’ ಸಿನಿಮಾ ಹೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT