ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಜಯಂತಿಯಲ್ಲಿ ಭಾಗಿಯಾಗಲ್ಲ

Last Updated 10 ನವೆಂಬರ್ 2017, 6:29 IST
ಅಕ್ಷರ ಗಾತ್ರ

ಬಾಳೆಹೊನ್ನೂರು: ‘ರಾಜ್ಯ ಸರ್ಕಾರ ಶುಕ್ರವಾರ ಹಮ್ಮಿಕೊಳ್ಳುವ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುವುದಿಲ್ಲ’ ಎಂದು ಶಾಸಕ ಡಿ.ಎನ್.ಜೀವರಾಜ್ ತಿಳಿಸಿದರು. ಕೊಪ್ಪ ತಾಲ್ಲೂಕಿನ ಹೇರೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದೂಬಳ ಕೈಮರದಿಂದ ದೂಬಳ ಎಸ್ಟೇ ಟ್‌ಗೆ ತೆರಳುವ ಎರಡು ಕಿ.ಮೀ. ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುರು ವಾರ ಚಾಲನೆ ನೀಡಿ ಮಾತನಾಡಿದರು.

‘ರಾಜ್ಯದ ಪಕ್ಷದ ಹಿರಿಯರ ನಿಲುವಿಗೆ ನಾನು ಬದ್ಧನಿದ್ದೇನೆ. ಯಾರೂ ಕೂಡ ಟಿಪ್ಪು ಜಯಂತಿಯನ್ನು ಅಚರಿಸಿ ಎಂದು ಸರ್ಕಾರವನ್ನು ಕೇಳಿರಲಿಲ್ಲ. ಜಯಂತಿ ಆಚರಣೆ ಎಂದರೆ ಹಬ್ಬದ ವಾತಾ ವರಣ ಇರಬೇಕು. ಆದರೆ, ಪೊಲೀ ಸರ ಸರ್ಪಕಾವಲಿನಲ್ಲಿ ಆಚರಣೆ ನಡೆಸು ವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ದೂಬಳ ಕೈಮರದಿಂದ ದೂಬಳ ಎಸ್ಟೇಟ್ ವರೆಗಿನ ರಸ್ತೆಯನ್ನು ‘ನಮ್ಮ ಗ್ರಾಮ ನಮ್ಮ ರಸ್ತೆ; ಯೋಜನೆ ಅಡಿಯಲ್ಲಿ ಸುಮಾರು ₹ 1.92 ಕೋಟಿ ವೆಚ್ಚದಲ್ಲಿ ಡಾಂಬರೀಕರಣಗೊಳಿಸಲಾಗುತ್ತಿದೆ. ಕೇಂದ್ರ ರಸ್ತೆ ನಿಧಿ (ಸಿಆರ್ಎಫ್) ಯೋ ಜನೆ ಅಡಿಯಲ್ಲಿ ಹಲವು ರಸ್ತೆಗಳ ಅಭಿವೃದ್ಧಿ ಹಾಗೂ ಡಾಂಬರೀ ಕರಣಗೊಳಿಸಲು ಪ್ರಸ್ತಾವನೆ ಸಲ್ಲಿ ಸಲಾಗಿದೆ. ಶೀಘ್ರದಲ್ಲೇ ಅವುಗಳಿಗೆ ಅನುಮೋದನೆ ದೊರೆಯಲಿದೆ. ಶೃಂಗೇರಿ ಕ್ಷೇತ್ರದ ಹಲವು ರಸ್ತೆಗಳು ಮೇಲ್ದರ್ಜೇಗೇರಲಿವೆ ಎಂದರು.

ಹೇರೂರು ಗ್ರಾಮ ಪಂಚಾಯಿತಿ ಹಿಂಭಾಗದ ಕಾಲೋನಿ ಕಾಂಕ್ರೀಟೀಕ ರಣಕ್ಕೆ ₹ 19 ಲಕ್ಷ, ಸೀಗೋಡು ಸಮೀಪದ ಆರ್‌.ಟಿ.ಎಸ್. ನಗರದ ಕಾಲೋನಿ ಅಭಿವೃದ್ಧಿಗೆ ₹ 15 ಲಕ್ಷ ಮಂಜೂರಾಗಿದ್ದು ಟೆಂಡರ್ ಕರೆಯಲಾಗಿದೆ. ಜಯಪುರ ಆಲ್ದೂರು ನಡುವಿನ ರಸ್ತೆ ಅಭಿವೃದ್ಧಿಗೆ ಸಿ.ಆರ್.ಎಫ್. ಯೋಜನೆ ಅಡಿಯಲ್ಲಿ ₹ 7 ಕೋಟಿ ಮಂಜೂರಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕನಿಷ್ಟ ವರ್ಷಕ್ಕೊಂದರಂತೆ ಕಾಲೋನಿ ಗಳ ರಸ್ತೆ ಕಾಂಕ್ರೀಟಿಕರಣಗೊಳಿಸಿದ್ದರೂ ಇಂದು ಕ್ಷೇತ್ರದ ಯಾವೊಂದು ಕಾಲೋನಿಗಳು ಅಭಿವೃದ್ಧಿಯಲ್ಲಿ ಹಿಂದುಳಿಯುತ್ತಿರಲಿಲ್ಲ. 2004ರ ನಂತರ ಕ್ಷೇತ್ರದ ಬಹುತೇಕ ಕಾಲೋನಿಗಳು ಅಭಿವೃದ್ಧಿ ಕಾಣುತ್ತಿವೆ. ಕಾಂಗ್ರೆಸ್ ಪಕ್ಷದ ಅನಭಿಶಕ್ತ ನಾಯಕರು ಮೊದಲು ಹುಣಸೆಹಳ್ಳಿ–ಬಾಸಾಪುರ ರಸ್ತೆ ಸರಿಪಡಿಸಲಿ ಎಂದು ವ್ಯಂಗ್ಯವಾಡಿದರು.

ಕೊಪ್ಪ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಉದಯ್, ಜಿಲ್ಲಾ ಪಂಚಾಯಿತಿ ಸದಸ್ಯೆ ಸುಜಾತ ಕೃಷ್ಣಪ್ಪ, ಹೇರೂರು ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ಯು.ನಟರಾಜ್, ಭಾಸ್ಕರ್, ಸುಮಾ, ಸಂತೋಷ್ ಆರೆನೂರು, ಕಾಫಿ ಬೆಳೆಗಾರ ಪ್ರದೀಪ್ ಹೆಗ್ಡೆ, ದೂಬ್ಳ ಎಸ್ಟೇಟ್ ವ್ಯವಸ್ಥಾಪಕ ನಾರಾಯಣಮೂರ್ತಿ, ಎಚ್.ಎಸ್.ಬಾಲಚಂದ್ರ, ಸುಗಂದ ರಾಜ ಹೆಗ್ಡೆ, ರತ್ನರಾಜ್ ಜೈನ್, ಗುತ್ತಿಗೆದಾರ ಖುಷ್ಯಶೃಂಗ, ಜಯಂತ್, ಗುರುವಪ್ಪಗೌಡ, ಕೆ.ಆರ್.ಪಾಂಡುರಂಗ, ಅಂಗಜ, ಸುನೀಲ್ ಭಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT