ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸಂಭ್ರಮಾಚರಣೆ

Last Updated 10 ನವೆಂಬರ್ 2017, 10:28 IST
ಅಕ್ಷರ ಗಾತ್ರ

ಗುರುಮಠಕಲ್: ₹ 500 ಮತ್ತು ₹ 1000 ಮುಖಬೆಲೆಯ ನೋಟು ಅಮಾನ್ಯಗೊಂಡು ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪಟ್ಟಣದ ಬಸ್‌ ನಿಲ್ದಾಣದ ಎದುರು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಗುರುವಾರ ಸಂಭ್ರಮ ಆಚರಿಸಿದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ನಾಗರತ್ನಾ ಕುಪ್ಪಿ ಮಾತನಾಡಿ, ‘ನೋಟು ಅಮಾನ್ಯದಿಂದ ನಕಲಿ ನೋಟುಗಳ ಹಾವಳಿ ನಿಯಂತ್ರಣಕ್ಕೆ ಬಂದಿದೆ. ಇದರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ನೆಮ್ಮದಿಯ ಜನಜೀವನಕ್ಕೆ ಸಹಕಾರಿಯಾಗಿದೆ’ ಎಂದರು.

‘ನೋಟು ಅಮಾನ್ಯಗೊಳಿಸಿದ್ದು ಸಹಿಸಲಾಗದೆ ಕಾಂಗ್ರೆಸ್ ನಾಯಕರು ಕರಾಳ ದಿನ ಆಚರಿಸುತ್ತಿದ್ದಾರೆ. ಆದರೆ ನೋಟು ರದ್ದತಿಗೆ ಸಾರ್ವಜನಿಕರೇ ಬೆಂಬಲ ವ್ಯಕ್ತಪಡಿಸಿದ್ದಾರೆ’ ಎಂದರು. ‘ಮೋದಿಯವರು ರಾಷ್ಟ್ರದ ಹಿತದೃಷ್ಟಿಯಿಂದ ಕೈಗೊಂಡಿರುವ ನಿರ್ಣಯಕ್ಕೆ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದ್ದಾರೆ’ ಎಂದರು.

ಮಲ್ಲೇಶಪ್ಪ ಬೇಲಿ. ನಾರಾಯಣರೆಡ್ಡಿ ಪಾಟಿಲ್. ಕೆ, ದೇವದಾಸ, ಆಶಣ್ಣ ಬುದ್ದ, ಸಾಯಿಲು, ನರೇಶ ಗೊಂಗ್ಲೆ, ಪರ್ವತರೆಡ್ಡಿ, ಪುಷ್ಪಾವತಿ, ಅಕ್ಕಮಹಾದೇವಿ, ಸುರೇಖಾ, ವೆಂಕಟಮ್ಮ, ಉದಯಸಿಂಗ್, ಪರ್ವತರೆಡ್ಡಿ ಚಪೆಟ್ಲಾ, ಹಣಮಂತ, ಅನೀಲ, ಸಾಬಣ್ಣ, ಶರಣಗೌಡ, ವಿಜಯಕುಮಾರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT