ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೋಧನಾ ಕೌಶಲ ಬದಲಾವಣೆ ಅಗತ್ಯ’

Last Updated 11 ನವೆಂಬರ್ 2017, 6:21 IST
ಅಕ್ಷರ ಗಾತ್ರ

ಧಾರವಾಡ: ‘ಭಾರತೀಯರು 21ನೇ ಶತಮಾನಕ್ಕೆ ತಕ್ಕಂತೆ ಬೋಧನಾ ಕೌಶಲಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆ’ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಎಂ.ವೈ.ಸಾವಂತ ಹೇಳಿದರು. ಕ್ಲಾಸಿಕ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಂಘ ಹಾಗೂ ಕ್ಲಾಸಿಕ್ ಪದವಿ ಪೂರ್ವ ಮಹಾವಿದ್ಯಾಲಯ ಗುರುವಾರ ಆಯೋಜಿಸಿದ್ದ ಪರಿಣಾಮಕಾರಿ ಬೋಧನಾ ಕೌಶಲ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ದೇಶದ ಪ್ರಗತಿಯಲ್ಲಿ ಶಿಕ್ಷಣ ಮಹತ್ವದ ಪಾತ್ರನಿರ್ವಹಿಸುತ್ತದೆ. ಹೀಗಾಗಿ ಪ್ರತಿಯೊಬ್ಬ ಶಿಕ್ಷಕನಿಗೆ ಬೋಧನೆ, ಸಂಶೋಧನೆ ಮತ್ತು ಸಾಮಾಜಿಕ ಸೇವೆ ಪ್ರಮುಖ. ಶಿಕ್ಷಕರು ಸದ್ಯ ದೇಶದಲ್ಲಿ ಜಾರಿಯಲ್ಲಿರುವ ಬೋಧನಾ ಕೌಶಲಗಳ ಹೊರತಾಗಿ ನೂತನ ಕೌಶಲಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಬೋಧನಾ ಕೌಶಲದಲ್ಲಿ ಭಾರತೀಯರು 26ನೇ ಸ್ಥಾನದಲ್ಲಿದ್ದು 21ನೇ ಶತಮಾನಕ್ಕೆ ತಕ್ಕಂತೆ ನಮ್ಮ ಬೊಧನಾ ಕೌಶಲಗಳು ಬದಲಾಯಿಸಿಕೊಳ್ಳಬೇಕಿದೆ' ಎಂದರು.

‘ಶಿಕ್ಷಕರು ನೂತನ ಬೋಧನಾ ತಂತ್ರಗಳು, ಉದ್ದೇಶಗಳು, ಯೋಜನೆಗಳು, ಬೋಧನಾ ಸಿದ್ಧತೆ, ಬಹುಶಿಸ್ತಿನ ಅಧ್ಯಯನ, ಬೋಧನೆಯಲ್ಲಿ ಬದ್ಧತೆ, ಸ್ವಪ್ರೇರಣೆ, ಜ್ಞಾನ ಸಂಪತ್ತು, ಸಾಮರ್ಥ್ಯ, ಪ್ರಾಯೋಗಿಕ ಜ್ಞಾನ, ಪ್ರಸ್ತುತ ಬೋಧನಾ ಪದ್ಧತಿಗಳು, ಶಬ್ದ ಸಂಗ್ರಹದ ಬಗ್ಗೆ ಶಿಕ್ಷಕರು ಆಧ್ಯತೆ ನೀಡಬೇಕು’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ.ವಿರೂಪಾಕ್ಷ ಕಾಲಾಳದ ಮಾತನಾಡಿ, ‘ಇತ್ತೀಚೆಗೆ ಶಿಕ್ಷಕರಲ್ಲಿ ಕಲಿಸುವ ಹಾಗೂ ವಿದ್ಯಾರ್ಥಿಗಳಲ್ಲಿ ಬರೆಯುವ ಕೌಶಲ ಕಡಿಮೆಯಾಗಿದೆ. ಹೀಗಾಗಿ ಇಂಥ ಕಾರ್ಯಾಗಾರ ಆಯೋಜಿಸಲಾಗುತ್ತಿದೆ. ಜತೆಗೆ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ಉಪಯುಕ್ತ ಮಾಹಿತಿ ನೀಡಲಾಗುತ್ತಿದೆ’ ಎಂದರು. ಕಾರ್ಯಕ್ರಮ ಸಂಯೋಜಕಿ ಅಶ್ವಿನಿ ಕೊಟ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT