ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟಿಪ್ಪು ಅಪ್ರತಿಮ ದೇಶಭಕ್ತ’

Last Updated 11 ನವೆಂಬರ್ 2017, 9:49 IST
ಅಕ್ಷರ ಗಾತ್ರ

ಗುರುಮಠಕಲ್: ‘ಟಿಪ್ಪು ಸುಲ್ತಾನ್ ಅಪ್ರತಿಮ ದೇಶಭಕ್ತನಾಗಿದ್ದ. ಆತನ ಶೌರ್ಯ, ಸಹಿಷ್ಣುತೆ, ದೇಶಪ್ರೇಮ, ಪಾಂಡಿತ್ಯ ಅನುಕರಣೀಯ’ ಎಂದು ಪುರಸಭೆ ಅಧ್ಯಕ್ಷ ಜಿ.ರವೀಂದ್ರರೆಡ್ಡಿ ಪಾಟೀಲ ಹೇಳಿದರು. ಪಟ್ಟಣದ ಪುರಸಭೆ ಆವರಣದಲ್ಲಿ ಶುಕ್ರವಾರ ಟಿಪ್ಪು ಸುಲ್ತಾನ್‌ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಟಿಪ್ಪು ಸುಲ್ತಾನ್‌ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಆಡಳಿತ ವ್ಯವಸ್ಥೆಯಲ್ಲಿ ಮಾಡಿದ ಮಹತ್ವದ ಬದಲಾವಣೆಗಳು ಅವರ ಆಡಳಿತದ ದಕ್ಷತೆಗೆ ಕನ್ನಡಿ ಹಿಡಿಯುತ್ತವೆ’ ಎಂದರು.

ಉಪನ್ಯಾಸಕ ಯು.ಎ.ಕುಂಟೋಜಿ ಮಾತನಾಡಿ, ‘ಟಿಪ್ಪು ಸುಲ್ತಾನ್‌ ರಾಜನಾಗಿದ್ದಾಗ ಕನ್ನಡದ ಹಲವು ಪುಸ್ತಕಗಳು ಪ್ರಕಟಗೊಂಡಿವೆ. ಟಿಪ್ಪು ಕನ್ನಡ ಭಾಷೆ ಪ್ರಗತಿಗೆ ಮಹತ್ವದ ಕೊಡುಗೆ ನೀಡಿದ್ದಾನೆ’ ಎಂದರು.

ಪುರಸಭೆ ಮುಖ್ಯಾಧಿಕಾರಿ ಸೈಯದ್ ಅಹ್ಮದ್, ಸದಸ್ಯರಾದ ಕೆ.ದೇವದಾಸ, ಲಿಂಗಪ್ಪ ತಾಂಡೂರ್ಕರ್, ಪ್ರಕಾಶ ನಿರೇಟಿ, ಮಾಣಿಕ್ ಮುಕುಡಿ, ಮುಖಂಡರಾದ ಸಂಜೀವಕುಮಾರ ಚಂದಾಪೂರ, ಅಖ್ತರ್ ಪ್ಯಾರೆ, ಫಯಾಜ್, ರವಿಕುಮಾರ ಕೋಟಕೊಂಡಿ, ಚಾಂದಪಾಶ, ಬಾಲಪ್ಪ ಪ್ಯಾಟಿ, ಆಶನ್ನ ಬುದ್ಧ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT