ಮೇಲೆಳೆದುಕೊಂಡ ಸೋಲು

ಈ ಮತಗಳೆಲ್ಲಾ ನೇರವಾಗಿ ಬಿಜೆಪಿಗೇ ಹೋಗುತ್ತವೆಂದಲ್ಲ; ಕೆಲವು ಜೆಡಿಎಸ್‍ಗೂ ಜಾರಬಹುದು. ಆದರೆ ಬಹುತೇಕ ಪಕ್ಷೇತರ ಅಭ್ಯರ್ಥಿಗಳ ಸಂಖ್ಯೆಗೇ ಒದಗಿಬರಬಹುದು. ಯಾವುದೇ ಪಕ್ಷಕ್ಕೆ ಬಹುಮತವಿಲ್ಲದ ಸದನದಲ್ಲಿ ಇದು ಪ್ರಜಾಸತ್ತೆಗೆ ದುಪ್ಪಟ್ಟು ಹಾನಿಯನ್ನೇ ತಂದೀತು.

ಶತಾಯ- ಗತಾಯ ಟಿಪ್ಪು ಜಯಂತಿಯನ್ನು ಆಚರಿಸಿಯೇ ತೀರುವ ಹುಚ್ಚಾಟದಲ್ಲಿ ಸರ್ಕಾರ ಗೆದ್ದಂತೆ ಭಾವಿಸಿರಬಹುದು. ಆದರೆ ಯಥಾರ್ಥವಾಗಿ ಇದೊಂದು ಸೋತ ಯುದ್ಧವೇ ಸರಿ! ಈ ಆಚರಣೆಯಿಂದ ಸಮಾಜದ ಯಾವುದೇ ವರ್ಗಕ್ಕೂ ಯಾವ ಐಹಿಕ ಪ್ರಯೋಜನವೂ ಆದಂತಿಲ್ಲ.

ಮೈಸೂರಿನ ಒಬ್ಬ ಹಳೆ ಸುಲ್ತಾನನ ಆಡಳಿತ ತಾರಕವಾಗಿತ್ತೋ, ಮಾರಕವಾಗಿತ್ತೋ ಎನ್ನುವ ಪ್ರಶ್ನೆ ಇಲ್ಲಿಲ್ಲ. ಹಟದ ಈ ಆಚರಣೆ, ಪ್ರಸ್ತುತ ಕಾಂಗ್ರೆಸ್ ಸರ್ಕಾರದ ದೂರದೃಷ್ಟಿಯ ಕೊರತೆಯನ್ನಂತೂ ತೋರಿಸುವಂತಿದೆ. ಟಿಪ್ಪು ಜಯಂತಿಯಿಂದಾಗಿ ಪಕ್ಷಕ್ಕೆ ಒಂದಿಷ್ಟು ಮತಗಳು ಹೆಚ್ಚಾಗಿ ಬರಬಹುದು. ಆದರೆ ಅಷ್ಟೇ ಪ್ರಮಾಣದ ಮತಗಳನ್ನು ಕಳೆದುಕೊಳ್ಳುವ ಸಂಭವವೂ ಇಲ್ಲದಿಲ್ಲ!

ಈ ಮತಗಳೆಲ್ಲಾ ನೇರವಾಗಿ ಬಿಜೆಪಿಗೇ ಹೋಗುತ್ತವೆಂದಲ್ಲ; ಕೆಲವು ಜೆಡಿಎಸ್‍ಗೂ ಜಾರಬಹುದು. ಆದರೆ ಬಹುತೇಕ ಪಕ್ಷೇತರ ಅಭ್ಯರ್ಥಿಗಳ ಸಂಖ್ಯೆಗೇ ಒದಗಿಬರಬಹುದು. ಯಾವುದೇ ಪಕ್ಷಕ್ಕೆ ಬಹುಮತವಿಲ್ಲದ ಸದನದಲ್ಲಿ ಇದು ಪ್ರಜಾಸತ್ತೆಗೆ ದುಪ್ಪಟ್ಟು ಹಾನಿಯನ್ನೇ ತಂದೀತು. ಜಯಂತಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ತಟಸ್ಥವಾಗಿರುತ್ತಿದ್ದರೆ, ಯಥಾಸ್ಥಿಯನ್ನಾದರೂ ಉಳಿಸಿಕೊಳ್ಳುವ ಸಾಧ್ಯತೆ ಇರುತ್ತಿತ್ತು. ಮುಂದಿನ ವಿಧಾನಸಭೆ ಅತಂತ್ರವಾದರೆ, ಆ ದುರಿತಕ್ಕೆ ಈಗಿನ ಮುಖ್ಯಮಂತ್ರಿ ನೇರ ಹೊಣೆಗಾರರಾಗುತ್ತಾರೆ!

ಆರ್.ಕೆ. ದಿವಾಕರ, ಬೆಂಗಳೂರು

Comments
ಈ ವಿಭಾಗದಿಂದ ಇನ್ನಷ್ಟು
‘ಜಾಗತಿಕ ಮಟ್ಟದ ವಿ.ವಿ.ಯಾಗಿ ರೂಪಿಸುವ ಕನಸು’

ಪ್ರೊ. ಎಸ್. ಜಾಫೆಟ್ - ವಾರದ ಸಂದರ್ಶನ
‘ಜಾಗತಿಕ ಮಟ್ಟದ ವಿ.ವಿ.ಯಾಗಿ ರೂಪಿಸುವ ಕನಸು’

21 Jan, 2018

ವಾರೆಗಣ್ಣು
ಹಿಂಡುವ ಮುನ್ನ ಮೇವು–ಬೂಸಾ...!

ಪುರಾತನವಾದ ಸಿದ್ಧೇಶ್ವರ ದೇಗುಲದ ಪಕ್ಕದಲ್ಲಿನ ಶಿವಾನುಭವ ಮಂಟಪದ ಜಾಗದಲ್ಲಿ ಏಳು ಅಂತಸ್ತಿನ ಕಟ್ಟಡ ನಿರ್ಮಿಸಲಾಗುವುದು. ಸುತ್ತಲೂ ಮಳಿಗೆ ಕಟ್ಟಿಸಿ, ಬಾಡಿಗೆಗೆ ಕೊಡಲಾಗುವುದು.

21 Jan, 2018

ವಾರೆಗಣ್ಣು
ಗಂಡನ ಹೆಸರು ಬದಲಿಸಿದ್ದು ಯಾಕೆ?

ಅಲ್ರೀ... ನಾವ್‌ ಎಷ್ಟ್‌ ಅಂತ ನಿಮ್ಮನ್ನ ಕೇಳೋದು. ಇಲ್ಲಿಗೆ ಎರಡ್‌ ವರ್ಷ ಆತ್‌ ಅಲ್ರಿ... ಒಂದ್‌ ಸಾಲಿಗೂ ಸುಣ್ಣಬಣ್ಣ ಬಳೀಲಿಲ್ಲ. ದುರಸ್ತಿನೂ ಮಾಡಿಸ್ಲಿಲ್ಲ. ಮಂದಿ...

21 Jan, 2018
ಭಯದ ನೆರಳಲ್ಲಿ ನರಳಿದ ಸಾಕ್ಷಿ...!

ಕಟಕಟೆ
ಭಯದ ನೆರಳಲ್ಲಿ ನರಳಿದ ಸಾಕ್ಷಿ...!

21 Jan, 2018
ಇಸ್ರೊಗೊಬ್ಬ ಹೊಸ  ‘ಟಾಸ್ಕ್ ಮಾಸ್ಟರ್’

ವ್ಯಕ್ತಿ
ಇಸ್ರೊಗೊಬ್ಬ ಹೊಸ ‘ಟಾಸ್ಕ್ ಮಾಸ್ಟರ್’

21 Jan, 2018