ನಿಮ್ಮ ಪ್ರಶ್ನೆ ನಮ್ಮ ಉತ್ತರ

ಓದಿದ್ದು ಎಂಟೆಕ್, ಆಸಕ್ತಿ ಸಂಗೀತ...

ನಿಮಗೆ ಸಂಗೀತದಲ್ಲಿ ಆಸಕ್ತಿ ಮತ್ತು ಒಲವು ಇರುವುದು ಸಂತೋಷ. ಪ್ರತಿಯೊಬ್ಬರಿಗೂ ಹಲವಾರು ಆಸೆ – ಹಂಬಲಗಳು, ಭಿನ್ನವಾದ ಕ್ಷೇತ್ರದಲ್ಲಿ ಇರುತ್ತವೆ. ನಾವು ವೃತ್ತಿಜೀವನದಲ್ಲಿ ಒಂದನ್ನು ಮೈನ್ ಸ್ಟ್ರೀಮ್ ಕರಿಯರ್ ಆಗಿ ಆರಿಸಿ, ಇನ್ನೊಂದನ್ನು ಹವ್ಯಾಸವಾಗಿ ಬೆಳೆಸಿಕೊಳ್ಳಬಹುದು.

ಅನ್ನಪೂರ್ಣ ಮೂರ್ತಿ

1. ನಾನು ಎಂಟೆಕ್ ಪದವೀಧರೆ. ನನಗೆ ಸಂಗೀತದಲ್ಲಿ ಆಸಕ್ತಿ ಇದೆ. ಜ್ಯೂನಿಯರ್ ಪರೀಕ್ಷೆ ಪಾಸ್ ಮಾಡಿದ್ದೇನೆ. ಬಿಮ್ಯೂಸಿಕ್ ಮತ್ತು ಮ್ಯೂಸಿಕ್‌ಗೆ ಯಾವ ಯಾವ ಕಾಲೇಜುಗಳಿವೆ? ನನಗೆ ಸಂಗೀತದ ಮೇಲೆ ಅತಿಯಾದ ಒಲವಿದೆ. ಹಾಗಾಗಿ ನನಗೆ ಮ್ಯೂಸಿಕ್‌ಗೆ ಪ್ರವೇಶ ಪಡೆಯುವ ಸಮಯ ಹಾಗೂ ಕರ್ನಾಟಕದಲ್ಲಿರುವ ಕಾಲೇಜುಗಳ ಬಗ್ಗೆ ಮಾಹಿತಿ ನೀಡಿ.
–ಪಲ್ಲವಿ, ಮೈಸೂರು

ನಿಮಗೆ ಸಂಗೀತದಲ್ಲಿ ಆಸಕ್ತಿ ಮತ್ತು ಒಲವು ಇರುವುದು ಸಂತೋಷ. ಪ್ರತಿಯೊಬ್ಬರಿಗೂ ಹಲವಾರು ಆಸೆ – ಹಂಬಲಗಳು, ಭಿನ್ನವಾದ ಕ್ಷೇತ್ರದಲ್ಲಿ ಇರುತ್ತವೆ. ನಾವು ವೃತ್ತಿಜೀವನದಲ್ಲಿ ಒಂದನ್ನು ಮೈನ್ ಸ್ಟ್ರೀಮ್ ಕರಿಯರ್ ಆಗಿ ಆರಿಸಿ, ಇನ್ನೊಂದನ್ನು ಹವ್ಯಾಸವಾಗಿ ಬೆಳೆಸಿಕೊಳ್ಳಬಹುದು. ನೀವು ಎಂಟೆಕ್ ಮಾಡಿ ಎಲ್ಲೋ ಕೆಲಸ ಮಾಡುತ್ತಿರಬಹುದು. ಇರುವ ಕೆಲಸವನ್ನು ಬಿಟ್ಟು, ಸಂಗೀತ ಅಭ್ಯಾಸವನ್ನು ಈಗ ಶುರುಮಾಡಿದರೆ, ಯಾವಾಗ ಪರಿಣತರಾಗುತ್ತೀರಾ? ಈಗಾಗಲೇ ಜ್ಯೂನಿಯರ್‌ ಪರೀಕ್ಷೆಯನ್ನು ಪಾಸು ಮಾಡಿದ್ದೀರಿ, ಹಾಗೇ ಸೀನಿಯರ್ ವಿದ್ವತ್ ಪರೀಕ್ಷೆಯನ್ನು ಪಾಸು ಮಾಡಿ. ನಂತರ ನಿಮ್ಮ ಬಿಡುವಿನ ಸಮಯದಲ್ಲಿ ಬೇರೆಯವರಿಗೆ ಸಂಗೀತ ಕಲಿಸಿ.

ಸಂಗೀತದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗೆ ದೇಶದ ಹಲವಾರು ಯೂನಿರ್ವಸಿಟಿಗಳಲ್ಲಿ ಅವಕಾಶವಿದೆ. ನಿಮ್ಮ ಕೇಸ್‌ನಲ್ಲಿ ಗಮನವಿಡಬೇಕಾದದ್ದು, ವಯಸ್ಸಿನ ಮಿತಿ. ನಿಮ್ಮ ಅರಿವಿಗಾಗಿ ಕರ್ನಾಟಕದಲ್ಲಿ ಮೈನ್ ಕೋರ್ಸ್ ಈ ಕೆಳಕಂಡ ವಿಶ್ವವಿದ್ಯಾಲಯಗಳಲ್ಲಿ ದೊರೆಯುತ್ತದೆ.

1. ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಕ್ಯಾಂಪಸ್‌, ಬೆಂಗಳೂರು bangaloreuniversity.ac.in
2. ಮೈಸೂರು ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿ, ಮೈಸೂರು www.uni-mysore.ac.in
3. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ kud.ac.in ಮತ್ತು ಈ ಮೇಲ್ಕಂಡ ವಿಶ್ವವಿದ್ಯಾಲಯದ ಕೆಲವು ಕಾಲೇಜುಗಳಲ್ಲೂ ಸಂಗೀತದ ಕೋರ್ಸ್‌ಗಳು ಲಭ್ಯವಿದೆ.

ಗಮನಿಸಿ: ಪಿಯುಸಿ ನಂತರ ಯಾವ ಕೋರ್ಸ್‌ಗೆ ಹೋಗಬೇಕು ಅನ್ನುವುದನ್ನು ದ್ವಿತೀಯ ಪಿಯುಸಿ ಶುರುವಿನಲ್ಲೇ ಯೋಚನೆ ಮಾಡಿ. ನಂತರ ಆ ಕೋರ್ಸ್‌ಗಳು ಎಲ್ಲೆಲ್ಲಿ ದೊರಕುತ್ತವೆ, ವಯೋಮಿತಿ ಏನು, ನೋಟಿಫಿಕೇಶನ್ ಯಾವಾಗ ಬರುತ್ತದೆ, ವೆಬ್‌ಸೈಟ್‌ ಏನು, ಫೀಸ್‌ ಎಷ್ಟು – ಹೀಗೆ ಸಂಪೂರ್ಣವಾದ ಮಾಹಿತಿಯನ್ನು ಇಟ್ಟುಕೊಳ್ಳಿ. ನನ್ನ ಸಲಹೆ, ನಿಮ್ಮ ಎಂಟೆಕ್‌ ಡಿಗ್ರಿಯನ್ನು ದಂಡ ಮಾಡಬೇಡಿ. 5 ವರ್ಷದ ಜ್ಞಾನವನ್ನು ಸದುಪಯೋಗ ಮಾಡಿಕೊಳ್ಳಿ. ಸಂಗೀತದ ಒಲವನ್ನು ಬಲಗೊಳಿಸಿಕೊಳ್ಳಿ.

2. ನಾನು ಕೇಂದ್ರ ಸರ್ಕಾರಿ ನೌಕರ, ವಯಸ್ಸು 28. ಬಿಎ, ಎಂಎ ಪದವಿ ಪಡೆದಿದ್ದೇನೆ. ಶಿಕ್ಷಕವೃತ್ತಿಯಲ್ಲಿ ತೊಡಗಿಕೊಳ್ಳುವುದು ನನ್ನ ಬಹುದೊಡ್ಡ ಕನಸು. ಬಿಎಡ್‌, ಡಿಎಡ್‌ ಕೋರ್ಸ್ ಮಾಡುವ ಕನಸು ಬಹುದಿನಗಳಿಂದ ಉಳಿದಿದೆ. ಬಾಹ್ಯವಾಗಿ ಈ ತರಹದ ಕೋರ್ಸ್‌ಗಳನ್ನು ಹೇಗೆ ಮಾಡಬಹುದು ತಿಳಿಸಿ.
–ರಾಜು ರಬಕವಿ

ಕೇಂದ್ರ ಸರ್ಕಾರದ ನೌಕರನಾಗಿ ನೀವು 28 ವರ್ಷ ವಯಸ್ಸಿನಲ್ಲಿ ಪಾಠ ಹೇಳಿಕೊಡುವ ಹಂಬಲ ಏಕೆ? ಪದವಿಯ ನಂತರ ಬಿಎಡ್‌, ಎಂಎಡ್ ಮಾಡಿದ್ದರೆ ಮೇಲಾಗಿತ್ತು. ನಿಮ್ಮ ವಯಸ್ಸಿನಲ್ಲಿ ಗಮನದಲ್ಲಿಟ್ಟುಕೊಂಡು ದೂರ ಶಿಕ್ಷಣ ಅಥವಾ ಓ‍ಪನ್ ಯೂನಿರ್ವಸಿಟಿ ಕೋರ್ಸ್ ಅನ್ನು ಆಯ್ಕೆ ಮಾಡಿ. ಕೆಲವು ವಿಶ್ವವಿದ್ಯಾಲಯದಲ್ಲಿ ಸೇವೆಯಲ್ಲಿರುವ ಅಧ್ಯಾಪಕರಿಗೆ ಮಾತ್ರ ಪ್ರವೇಶ.
ಕೆಲವು ದೂರಶಿಕ್ಷಣದಲ್ಲಿ ಬಿಎಡ್‌ಗೆ ಅವಕಾಶವಿರುವ ವಿಶ್ವವಿದ್ಯಾಲಯಗಳು:
1. Bangalore University, Bangalore
bangalore university.ac.in
2. Annamalai University, Annamalai
www.annamalai university.ac.in
3. Madurai Kamaraja university, Madurai
mk university.org
4. Kurukshetra University, Haryana
kuk.ac.in
5. Kakatiya University, Warangal
kakatiya.ac.in ಮತ್ತು ಇನ್ನೂ ಅನೇಕ. Open University ಮೂಲಕ:
1. Indira Gandhi National open University, New Delhi (IGNOU)
www.ignou.ac.in
2. Yashwant Rao Chavan Maharastra Open University, Nashik (YCMOU)
Ycmou.digital university.ac
3. Dr. Babashaheb Ambedkar Open University, Ahmedabad (BAOU)
www.baou.edu.in
4. Netaji Subas Open University, kolkatta
www.wbnsou.ac.in
5.Dr. B.R. Ambedkar Open University, Hyderabad
www.braou.ac.in
ಇನ್ನೂ ಅನೇಕ.

3. ನಾನು ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದೇನೆ. ನನಗೆ ಮುಂದೆ ಬಿಸಿಎ ಕೋರ್ಸ್ ಮಾಡಬೇಕು ಎಂಬ ಆಸೆ. ಆದರೆ ಮುಂದಿನ ಕೆಲಸದ ಬಗ್ಗೆ ಮಾಹಿತಿ ಇಲ್ಲ. ಇದರಿಂದ ನನಗೆ ಬಹಳ ಗೊಂದಲವಾಗುತ್ತಿದೆ. ಬಿಸಿಎ ಓದಿದರೆ ಯಾವ ರೀತಿಯ ಕೆಲಸ ಸಿಗುತ್ತದೆ. ಬಿಸಿಎ ಮತ್ತು ಬಿಬಿಎ ಇದರಲ್ಲಿ ಯಾವ ಕೋರ್ಸ್ ಬೆಸ್ಟ್‌ ತಿಳಿಸಿ.
–ಹೆಸರು, ಊರು ಬೇಡ.

ಬಿಸಿಎ ಮತ್ತು ಬಿಬಿಎನಲ್ಲಿ ಯಾವುದು ಉತ್ತಮ ಎಂಬುದು ನಿಮಗಿರುವ ದ್ವಂದ್ವ. ನಿಮಗೆ ಅಡ್‌ಮಿನಿಸ್ಟ್ರೇಷನ್‌ ಬಗ್ಗೆ ಒಲವು ಇದ್ದಲ್ಲಿ ನೀವು ಬಿಬಿಎ, ಎಂಬಿಎ ಹಾದಿಯಲ್ಲಿ ಹೋಗಬಹುದು.

ನಿಮಗೆ ಮ್ಯಾಥಮ್ಯಾಟಿಕ್ಸ್, ಕಂಪ್ಯೂಟರ್ ಲಾಗ್ವೆಂಜ್, ಫಿಸಿಕ್ಸ್‌, ಟೆಕ್ನಿಕಲ್ ಕಮ್ಯೂನಿಕೇಷನ್‌ ಪ್ರಿನ್ಸಿಪಲ್ ಆಫ್ ಅಕೌಂಟ್ಸ್ ಇದರಲ್ಲಿ ಆಸಕ್ತಿ ಮತ್ತು ಅರ್ಹತೆ ಇದೆ ಅನ್ನಿಸಿದರೆ ಬಿಸಿಎ, ಎಂಸಿಎ ಮಾರ್ಗವನ್ನು ಆರಿಸಬಹುದು. ಬಿಸಿಎ ಅಥವಾ ಬಿಬಿಎ ಯಾವುದನ್ನಾದರೂ ಆರಿಸಿ ಎಂಸಿಎ ಮತ್ತು ಎಂಬಿಎ ಮಾಡಿದರೆ ಉತ್ತಮವಾದ ಕೆಲಸಗಳು ದೊರಕುತ್ತವೆ.

ಕಂಪ್ಯೂಟರ್ ಅಪ್ಲಿಕೇಶನ್ ಮಾಸ್ಟರ್ ಮಾಡಿದವರಿಗೆ ಉತ್ತಮವಾದ ಎಂಎನ್‌ಸಿಯಲ್ಲಿ ಕೆಲಸ ದೊರಯುತ್ತದೆ. ಸಾಫ್ಟ್‌ವೇರ್ ಪ್ರೋಗ್ರಾಮರ್‌ ಆಗಿ ಕೆಲಸ ಶುರು ಮಾಡಬಹುದು. ಕಂಪ್ಯೂಟರ್ ಲ್ಯಾಂಗ್ವೇಜ್‌ನಲ್ಲಿ ಪರಿಣತಿ ಮುಖ್ಯ.

ನಿಮ್ಮ ದೃಷ್ಟಿಯಲ್ಲಿ ಈ ಕೆಳಕಂಡ ಇನ್ಸ್‌ಟಿಟ್ಯೂಟ್ ಅಥವಾ ವಿಶ್ವವಿದ್ಯಾಲಯಗಳಲ್ಲಿ ಎಂಸಿಎ ಮಾಡಲು ನಿರ್ಧರಿಸಿ ವ್ಯಾಸಂಗ ಮಾಡಿದರೆ ಉತ್ತಮ.
1. NIT- National Institute of Technology, Trichy
NIT- Suratkal
NIT - Warangal
www.manit.ac.in
2. BITS - Mesra Birla Institute of Technology and Science
www.bitsmesra.ac.in
3. JNU - Jawaharhal Nehru University, Delhi
www.jnu.ac.in
4. Jamia Milia Islamia, New Delhi
www.jmi.ac.in
5. IIT - Indian Institute of Technology, Roorkee
Entrance for MCA: JAM (Joint Admission Test)
www.iitr.ac.in/ jam
ಇನ್ನೂ ಅನೇಕ.  ಶ್ರದ್ಧೆ, ಪ್ರತಿದಿನ ಕಡ್ಡಾಯ ವ್ಯಾಸಂಗ, ಸಂಪೂರ್ಣ ಮಾಹಿತಿ ನಿಮ್ಮಲ್ಲಿ ಇದೆಯೇ ಎಂಬುದನ್ನು ಖಚಿತಕೊಳ್ಳಿ.

4. ನಾನು ದ್ವಿತೀಯ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು ಕೆಲವು ಕಾರಣದಿಂದ ಈಗಿರುವ ಕಾಲೇಜಿನಲ್ಲಿ ಉಳಿದುಕೊಳ್ಳಲು ಆಗುತ್ತಿಲ್ಲ. ಹಾಗಾಗಿ ನಾನು ಮುಂದಿನ ತೃತೀಯ ವರ್ಷದ ವಿದ್ಯಾಭ್ಯಾಸಕ್ಕೆ ಬೇರೆಯ ಕಾಲೇಜನ್ನು ಆರಿಸಿಕೊಳ್ಳಬಹುದೇ? ಅಥವಾ ಬೇರೆಯ ಕಾಲೇಜು ಅನ್ನು ಆರಿಸಿಕೊಳ್ಳಲು ದ್ವಿತೀಯ ವರ್ಷದ ಎಲ್ಲ ವಿಷಯಗಳಲ್ಲೂ ಪಾಸ್ ಆಗಿರಬೇಕು ಎಂಬ ನಿಯಮವೇನಾದರೂ ಇದೆಯಾ? ಹಾಗೂ ಆ ರೀತಿ ಸಾಧ್ಯವಿದೆ ಎಂದಾದರೆ ಈಗಿರುವ ಕಾಲೇಜಿನಲ್ಲಿ ವಿಟಿಯುನಲ್ಲಿ ಇರುವ ನಾನು ನನ್ನ ಮುಂದಿನ ಕಾಲೇಜಿನಲ್ಲೂ ಅದೇ ಬೋರ್ಡಿರುವ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಬೇಕೆ?
–ಯೋಗೇಶ್, ಬೆಂಗಳೂರು

ನೀವು ಈಗಿರುವ ಕಾಲೇಜಿನಲ್ಲಿ ಉಳಿಯಲು ಏಕೆ ಆಗುತ್ತಿಲ್ಲ? ಕಾಲೇಜಿನಲ್ಲಿ ಹಾಜರಾತಿ ಇಲ್ಲವೇ? ಸ್ನೇಹಿತರು, ಪ್ರಾಧ್ಯಾಪಕರ ಜೊತೆ ನಿಮಗೆ ಒಳ್ಳೆಯ ಸಂಬಂಧವಿಲ್ಲವೇ? ಪಾಸಾಗದಿರಲು ನೀವು ಓದಲಿಲ್ಲವಾ ಅಥವಾ ಸ್ನೇಹಿತರ ಜೊತೆ ಅಲೆದುಕೊಂಡು ಗಮನ ಹರಿಸಿಲಿಲ್ಲವೇ? ಅಥವಾ ಯಾವುದಾದರೂ ಹುಡುಗಿಯ ಜೊತೆ ಸಂಬಂಧ ಅಥವಾ ಅನುಚಿತವಾಗಿ ನಡೆದುಕೊಂಡಿದ್ದೀರಾ? ಇದನ್ನು ನೀವೇ ಯೋಚಿಸಬೇಕು.

ಎಲ್ಲಾ ಕಾಲೇಜಿನಲ್ಲೂ ಕೆಟ್ಟ ವರ್ತನೆ ಇರುವ ವಿದ್ಯಾರ್ಥಿಗಳನ್ನು ಇಟ್ಟುಕೊಳ್ಳುವುದಿಲ್ಲ. ನೀವು ಸಂಬಂಧಪಟ್ಟ ಅಧಿಕಾರಿಗಳ ಜೊತೆ ನಿಮ್ಮ ಮೂಲಪ್ರತಿಗಳನ್ನು ಪಡೆಯಲು ಸಾಧ್ಯವೇ ವಿಚಾರಿಸಿ. (ನೂತನ ಕೋರ್ಟ್ ಆರ್ಡರ್‌ ಬಂದಿದೆ, ಜಾರಿಗೆ ಬಂದಿದೆಯಾ ವಿಚಾರಿಸಿ) ಕೆಲವೆಡೆ ಸಂಪೂರ್ಣ ಕೋರ್ಸ್‌ನ ಹಣವನ್ನು ಕೇಳುತ್ತಾರೆ. ನಿಮ್ಮ ಅಂಕಪಟ್ಟಿ ಸಿಗಲು ಇದೆಲ್ಲವನ್ನೂ ನೀವೇ ವಿಚಾರಿಸಬೇಕು.

ನಿಮ್ಮ ಪ್ರಶ್ನೆಯಿಂದ ನನಗೆ ಅನ್ನಿಸುತ್ತಿರುವುದು, ಎಂಜಿನಿಯರಿಂಗ್‌ ಶಿಕ್ಷಣ ನಿಮ್ಮದಲ್ಲ; ನೀವು ನಿಮ್ಮ ಆಸಕ್ತಿ, ಅರ್ಹತೆ ಮತ್ತು ಅಭಿರುಚಿಗೆ ತಕ್ಕ ಕೋರ್ಸ್‌ನ್ನು ಆರಿಸುವುದು ಉತ್ತಮ. ಎರಡು ವರ್ಷದ ದಂಡವಾಗಿದೆ. ಆದರೆ ಮುಂದೆ ಎಚ್ಚರಿಕೆಯಿಂದ ಬೇರೆ ಕೋರ್ಸ್‌ಗೆ ಸೇರಿ ಶ್ರಮವಹಿಸಿ ಓದಿ. ನೀವು ಜಯಶಾಲಿಯಾಗುತ್ತೀರಿ.

5. ನಾನು ಸರ್ಕಾರಿ ನೌಕರಿಯಲ್ಲಿದ್ದು ಭವಿಷ್ಯದ ಜೀವನಕ್ಕೆ ಸಹಕಾರಿಯಾಗಲೆಂದು ನಾನು ದೂರಶಿಕ್ಷಣದಲ್ಲಿ ಬಿಎ ಓದುತಿದ್ದೇನೆ. ನಾನು ಓದಿಗೆ ಮತ್ತು ಇತರ ಚಟುವಟಿಕೆಗಳು ಒಳಗೊಂಡಂತೆ ಟೈಂ ಟೇಬಲನ್ನು ಹಾಕಿಕೊಂಡು ಅದನ್ನು ಪಾಲಿಸುವಲ್ಲಿ ವಿಫಲನಾಗುತ್ತಿದ್ದೇನೆ. ಇದರಿಂದ ನನಗೆ ನನ್ನ ಮೇಲೆ ಬೇಸರ ಉಂಟಾಗಿ ಭವಿಷ್ಯದಲ್ಲಿ ನಾನು ಅಂದುಕೊಂಡಿರುವುದನ್ನು ಸಾಧಿಸಲಾಗದಿದ್ದರೆ ಎಂಬ ಭಯ ಕಾಡುತ್ತಿದೆ; ನನಗೆ ಮಾರ್ಗದರ್ಶನ ನೀಡಿ.
–ಪ್ರಮೋದ್, ಮಂಡ್ಯ

ನೀವು ಟೈಂ ಟೇಬಲ್ ಅನ್ನು ಸರಿಯಾಗಿ ಹಾಕಿಲ್ಲ. ಏನೇ ಮಾಡಬೇಕಾದರೂ ಸಮಯ ಪರಿಪಾಲನೆ ಬಹಳ ಮುಖ್ಯ. ಇದಕ್ಕೆ ಮಲ್ಟಿ ಟಾಸ್ಕ್ ಅಹರ್ತೆ ಇರಬೇಕು. ನೀವು ಲೇಟಾಗಿ ಎದ್ದು, ಬೇಗ ಮಲಗುವ ಗುಂಪಿಗೆ ಸೇರಿದ್ದರೆ, ಖಂಡಿತ ಸಾಧನೆ ಸಾಧ್ಯವಿಲ್ಲ. ಕೆಲಸಕ್ಕೆ ಹೋಗಬೇಕು, ಬೆಂಗಳೂರಿನ ಟ್ರಾಫಿಕ್‌ನಲ್ಲಿ, ದಿನದ ಚಟುವಟಿಕೆಗಳು, ಹೊರಗಿನ ಸೋಶಿಯಲ್ ಕಾಲ್ಸ್‌, ಆರೋಗ್ಯದ ಬಗ್ಗೆ ಗಮನ – ಈ ಎಲ್ಲವನ್ನೂ ನಿರ್ವಹಣೆ ಮಾಡುವುದು ಎಲ್ಲರಿಗೂ ಕಷ್ಟ. ಆದರೆ ‘ಮನಸ್ಸಿದ್ದಲ್ಲಿ ಮಾರ್ಗ’ ಎಂಬುವುದು ಸತ್ಯ. ಮತ್ತೆ ಟೈಂ ಟೇಬಲ್ ಮಾಡಿ, ಅದನ್ನು ಅನುಸರಿಸಿ.

Comments
ಈ ವಿಭಾಗದಿಂದ ಇನ್ನಷ್ಟು
ಮಕ್ಕಳೇ ಪರೀಕ್ಷೆಗೆ ಸಿದ್ಧರಾಗಿ...

ಒತ್ತಡ
ಮಕ್ಕಳೇ ಪರೀಕ್ಷೆಗೆ ಸಿದ್ಧರಾಗಿ...

14 Mar, 2018
‘ಪಿಯುಸಿಯಲ್ಲಿ ಯಾವ ಕಾಂಬಿನೇಷನ್ ಸೂಕ್ತ?’

ನಿಮ್ಮ ಪ್ರಶ್ನೆ ನಮ್ಮ ಉತ್ತರ
‘ಪಿಯುಸಿಯಲ್ಲಿ ಯಾವ ಕಾಂಬಿನೇಷನ್ ಸೂಕ್ತ?’

12 Mar, 2018
ಸಂತುಲಿತ ಶಿಕ್ಷಣದ ದಾರಿಯಲ್ಲಿ...

ಶಿಕ್ಷಣ
ಸಂತುಲಿತ ಶಿಕ್ಷಣದ ದಾರಿಯಲ್ಲಿ...

12 Mar, 2018
ಪ್ರಜಾವಾಣಿ ಕ್ವಿಜ್ 13

ಶಿಕ್ಷಣ
ಪ್ರಜಾವಾಣಿ ಕ್ವಿಜ್ 13

12 Mar, 2018
‘ಪರೀಕ್ಷೆ ಬರೆಯೋದು ನಾನಾ... ನೀವಾ?!’

ಶಿಕ್ಷಣ
‘ಪರೀಕ್ಷೆ ಬರೆಯೋದು ನಾನಾ... ನೀವಾ?!’

5 Mar, 2018