ಪದ್ಮಾವತಿ ಚಿತ್ರ

ಖಿಲ್ಜಿ ಹೊಸ ರೂಪ

‘ಪದ್ಮಾವತಿ’ ಸಿನಿಮಾದ ಪೋಸ್ಟರ್‌ ಒಂದಾದ ಮೇಲೊಂದು ಬಿಡುಗಡೆಯಾಗುತ್ತಲೇ ಇದೆ. ಶಾಹಿದ್ ಕಪೂರ್, ದೀಪಿಕಾ ಪಡುಕೋಣೆ ಇರುವ ಪೋಸ್ಟರ್‌ ಬಿಡುಗಡೆಯಾದ ಬೆನ್ನಲ್ಲೇ, ರಣವೀರ್‌ ಮಾಡಿರುವ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದ ಪೋಸ್ಟರ್‌ ಬಿಡುಗಡೆಯಾಗಿದೆ.

ಖಿಲ್ಜಿ ಹೊಸ ರೂಪ

‘ಪದ್ಮಾವತಿ’ ಸಿನಿಮಾದ ಪೋಸ್ಟರ್‌ ಒಂದಾದ ಮೇಲೊಂದು ಬಿಡುಗಡೆಯಾಗುತ್ತಲೇ ಇದೆ. ಶಾಹಿದ್ ಕಪೂರ್, ದೀಪಿಕಾ ಪಡುಕೋಣೆ ಇರುವ ಪೋಸ್ಟರ್‌ ಬಿಡುಗಡೆಯಾದ ಬೆನ್ನಲ್ಲೇ, ರಣವೀರ್‌ ಮಾಡಿರುವ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದ ಪೋಸ್ಟರ್‌ ಬಿಡುಗಡೆಯಾಗಿದೆ.

ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡು ಡಿ.1ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ ಎಂದು ರಣವೀರ್ ಪ್ರಚಾರ ಮಾಡಿದ್ದಾರೆ. ನೇರವಾಗಿ ನೆಟ್ಟ ಸೃಷ್ಟಿ, ಗೆಲ್ಲುವ ಮನೋಭಿಲಾಷೆ, ರಾಜನ ಗತ್ತು ಇರುವ ಖಡಕ್‌ ಲುಕ್‌ನ ಅಲ್ಲಾವುದ್ದೀನ್ ಖಿಲ್ಜಿಯಾಗಿ ಪೋಸ್ಟರ್‌ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಸಿನಿಮಾ ಡಿ.1ರಂದು ಬಿಡುಗಡೆಯಾಗಲಿದೆ. ಆದರೆ ಇನ್ನೂ ಸೆನ್ಸಾರ್ ಮಂಡಳಿ ಪ್ರಮಾಣೀಕರಿಸಿಲ್ಲ. 'ಸಿನಿಮಾದಲ್ಲಿ ರಾಣಿ ಪದ್ಮಾವತಿ ಹಾಗೂ ಅಲ್ಲಾವುದ್ದೀನ್ ಖಿಲ್ಜಿ ನಡುವೆ ಪ್ರಣಯ ಪ್ರಸಂಗದ ದೃಶ್ಯಗಳಿವೆ. ಸಿನಿಮಾ ನಿಷೇಧಿಸಬೇಕು' ಎಂದು ಹಲವರು ಕೋರ್ಟ್‌ ಮೊರೆ ಹೋಗಿದ್ದರು. ಈ ಎಲ್ಲರದ ನಡುವೆ ಅಲಹಾಬಾದ್ ಹೈಕೋರ್ಟ್ ಸಿನಿಮಾ ಬಿಡುಗಡೆಗೆ ಅನುಮತಿ ನೀಡಿದೆ.

ಸಿನಿಮಾ ಬಿಡುಗಡೆಯ ದಿನ ಹತ್ತಿರವಾದಂತೆ ಹೊಸ ಪೋಸ್ಟರ್‌, ವಿಡಿಯೊ ಹಾಡುಗಳನ್ನು ಬಿಡುಗಡೆ ಮಾಡುತ್ತಾ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಸಿನಿಮಾ ತಂಡಕ್ಕೆ ಸೆನ್ಸಾರ್‌ ಮಂಡಳಿ ಪ್ರಮಾಣಪತ್ರ ನೀಡದೆ ಇರುವುದು ಮತ್ತೊಂದು ತಲೆನೋವಾಗಿದೆ.⇒v

Comments
ಈ ವಿಭಾಗದಿಂದ ಇನ್ನಷ್ಟು
ಪ್ರಶ್ನೋತ್ತರ

ಪುರವಣಿ
ಪ್ರಶ್ನೋತ್ತರ

17 Jan, 2018
ನೆಮ್ಮದಿ ಬದುಕಿಗೆ ಹಾದಿಯಾದ ಹೈನೋದ್ಯಮ

ಪುರವಣಿ
ನೆಮ್ಮದಿ ಬದುಕಿಗೆ ಹಾದಿಯಾದ ಹೈನೋದ್ಯಮ

16 Jan, 2018
ಸುಗ್ಗಿ–ಹುಗ್ಗಿ

ಪಿಕ್ಚರ್‌ ಪ್ಯಾಲೇಸ್‌
ಸುಗ್ಗಿ–ಹುಗ್ಗಿ

15 Jan, 2018
ಗೋಡೆಗಳಿಗೊಂದು ಬಣ್ಣದ ಸ್ಪರ್ಶ

ಒಳಾಂಗಣ
ಗೋಡೆಗಳಿಗೊಂದು ಬಣ್ಣದ ಸ್ಪರ್ಶ

12 Jan, 2018
ಖಾದಿ ಉತ್ಸವ, ದೇಸಿ ತಿನಿಸುಗಳ ಘಮ

ರಸಾಸ್ವಾದ
ಖಾದಿ ಉತ್ಸವ, ದೇಸಿ ತಿನಿಸುಗಳ ಘಮ

11 Jan, 2018