ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಧಾರ ಅಗತ್ಯ

Last Updated 12 ನವೆಂಬರ್ 2017, 19:03 IST
ಅಕ್ಷರ ಗಾತ್ರ

‘ರಜೆಗಳ ಉಬ್ಬರ, ಪ್ರಗತಿಗೆ ಹಿನ್ನಡೆ’ (ಪ್ರ.ವಾ., ನ.11) ಸಂಪಾದಕೀಯ ಸಕಾಲಿಕವಾಗಿದೆ. ರಜಾದಿನಗಳನ್ನು ನಿಯಂತ್ರಿಸುವ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಚರ್ಚಿಸಿ ಒಂದು ತಾರ್ಕಿಕ ನಿರ್ಧಾರಕ್ಕೆ ಬರಬೇಕಾಗಿದೆ.

ಸರ್ಕಾರವೇ ನೇಮಿಸಿದ, ನೌಕರರ ವೇತನ ಆಯೋಗವೊಂದು ಅನೇಕ ವರ್ಷಗಳ ಹಿಂದೆಯೇ ರಜಾದಿನಗಳ ಕುರಿತು ಉಪಯುಕ್ತ ಶಿಫಾರಸುಗಳನ್ನು ನೀಡಿತ್ತು. ಅದರ ಪ್ರಕಾರ ಸ್ವಾತಂತ್ರ್ಯ ದಿನ, ಗಾಂಧಿ ಜಯಂತಿ ಹಾಗೂ ಗಣರಾಜ್ಯ ದಿನ, ಈ ಮೂರು ದಿನಗಳನ್ನು ಮಾತ್ರ ಸಾರ್ವತ್ರಿಕ ರಜಾ ದಿನಗಳೆಂದು ಘೋಷಿಸಬೇಕು. ಇನ್ನುಳಿದವನ್ನು ಸಾಂದರ್ಭಿಕ ರಜಾ ದಿನಗಳ ಪಟ್ಟಿಗೆ ಸೇರಿಸಬೇಕು. ಅವುಗಳಲ್ಲಿ ಯಾವುದಾದರೂ ಹತ್ತು ದಿನಗಳನ್ನು ಮಾತ್ರ ಅವಶ್ಯಕತೆಗೆ ತಕ್ಕಂತೆ ನೌಕರರು ಬಳಸಬಹುದು. ಈ ಸಲಹೆ ಜಾರಿಗೆ ಬಂದರೆ ಜನರಿಗೆ ಅನುಕೂಲವಾಗುತ್ತದೆ.

–ರಾಘವೇಂದ್ರ ಹೆಗಡೆ, ಸಿದ್ದಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT