ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆರವಣಿಗೆ: ಗಮನ ಸೆಳೆದ ಕಲಾ ಪ್ರದರ್ಶನ

Last Updated 13 ನವೆಂಬರ್ 2017, 5:17 IST
ಅಕ್ಷರ ಗಾತ್ರ

ಕೂಡಲಸಂಗಮ: ಇಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಗೋಂಧಳಿ ಸಮಾವೇಶದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಈ ವೇಳೆ ತಮ್ಮ ಮೂಲ ಕಸಬುಗಳ ಪ್ರದರ್ಶನ, ಕುಂಬ ಮೇಳ ಹಾಗೂ ವಿವಿಧ ಕಲಾ ತಂಡಗಳ ಕಲೆಯ ಪ್ರದರ್ಶನ ಮಾಡಿ ಎಲ್ಲರ ಗಮನ ಸೆಳೆದರು.

ಬೆಳಗ್ಗೆ 10 ಗಂಟೆಗೆ ಬಸವ ಕಲಾ ಭಾನುವಾರ ನಡೆದ ರಾಜ್ಯಮಟ್ಟದ ಗೋಂಧಳಿ ಸಮಾವೇಶದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.ಲೋಕದಿಂದ ಆರಂಭವಾದ ಮೆರವಣಿಗೆ ಬಸವೇಶ್ವರ ವೃತ್ತದ ಮೂಲಕ ಸಭಾ ಭವನ ಆಗಮಿಸಿತು. ಮೆರವಣಿಗೆಯಲ್ಲಿ ಜಮಖಂಡಿಯ ಜೈ ಭವಾನಿ ಮಿತ್ರ ಮಂಡಳಿ ಜಗದಂಬಾ ಡೋಲ ಪಥಕ, ಕಮತಗಿಯ ಹಲಗೆ ಮಜಲು, ದಾವಣಗೆರೆ ಜಿಲ್ಲೆ ಅರಸೀಕರೆಯ ದುರ್ಗಾದೇವಿಯ ಹಲಗಿವಾದನ, ಬುಡಬುಡಕಿ ಹೇಳುವುದು, ಕೌದಿ ಪ್ರದರ್ಶನ, ಗಿಳಿ ಶಾಸ್ತ್ರ, ಜ್ಯೋತಿಷ್ಯ ಹೇಳುವವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಕಲಾ ತಂಡಗಳು ಗೋಂಧಳಿ ಸಮಾಜದ ಸಂಘಟನೆ ಗೀತೆಗೆ ನೃತ್ಯ ಹಾಕಿದರೆ ಮಹಿಳೆಯರು ಕುಂಭ ಮೇಳದ ಲ್ಲಿ ಹೆಜ್ಜೆ ಹಾಕಿದರು.

ವಿಳಂಬವಾಗಿ ಬಂದ ಮುಖ್ಯಮಂತ್ರಿ: ಸಮಾವೇಶಕ್ಕೆ ಬೆಳಿಗ್ಗೆ 10.30ಕ್ಕೆ ಬರಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ 1.30ಕ್ಕೆ ಬಂದರು. ಈ ವೇಳೆ ಗೋಂಧಳಿ ಸಮಾಜದ ಮುಖಂಡರು, ಸಚಿವರು, ಶಾಸಕರು ಹೆಲಿಪ್ಯಾಡ್ ಬಳಿ ಕಾಯುತ್ತ ನಿಂತಿದ್ದ ದೃಶ್ಯ ಕಂಡು ಬಂದಿತು.

ಗಿಣಿಗೇರಾದಿಂದ ಹೆಲಿಕ್ಯಾಪ್ಟರ್‌ನಲ್ಲಿ ಬಂದಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸರಿಂದ ಗೌರವ ವಂದನೆ ಸ್ವಿಕರಿಸಿ, ಸಾರ್ವಜನಿಕರ ಅವಾಹಲು ಸ್ವೀಕರಿಸಿ,ಕ್ಷೇತ್ರಾಧಿಪತಿ ಸಂಗಮನಾಥನ ದರ್ಶನ ಪಡೆದರು. ನಂತರ ಸಮಾವೇಶದಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ ಸಂಜೆ ನಾಲ್ಕು ಗಂಟೆಗೆ ಊಟ ಮಾಡಿ ಹೆಲಿಕಾಪ್ಟರ್‌ನಲ್ಲಿ ಮಂಗಳೂರಿಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT