ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನು ಮಾರಾಟದ ಜಾಗಕ್ಕಾಗಿ ಮಚ್ಚು ಹಿಡಿದು ಕಿತ್ತಾಟ

Last Updated 13 ನವೆಂಬರ್ 2017, 5:39 IST
ಅಕ್ಷರ ಗಾತ್ರ

ಚಿಕ್ಕೋಡಿ: ಪಟ್ಟಣದ ಅಂಕಲಿಖೂಟ್‌ನಲ್ಲಿ ಮೀನು ಮಾರಾಟ ಮಾಡುವ ಜಾಗದ ಸಲುವಾಗಿ ರಸ್ತೆಯಲ್ಲೇ ಕೈಯಲ್ಲಿಮಚ್ಚು ಹಿಡಿದುಕೊಂಡು ಮಹಿಳೆಯರು ಶನಿವಾರ ಹೊಡೆದಾಡಿಕೊಂಡಿದ್ದಾರೆ.

ಎಂದಿನಂತೆ ಮೀನು ಮಾರಲು ಬಂದ ಅವರು, ಜಾಗಕ್ಕಾಗಿ ವಾಗ್ವಾದ ನಡೆಸಿದ್ದಾರೆ. ಬಳಿಕ ಮಚ್ಚು ಹಿಡಿದು ಕಿತ್ತಾಡಿದ್ದಾರೆ. ಈ ವಿಡಿಯೊವನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದು, ಇದೀಗ ವೈರಲ್‌ ಆಗಿದೆ.

ಹೊಡೆದಾಡಿ ಕೊಂಡ ಮಹಿಳೆರು ಅಂಕಲಿ ಗ್ರಾಮ ಮಹಿಳೆಯರು ಎನ್ನಲಾಗಿದ್ದು, ಈ ಕುರಿತು ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಇದು ನವೆಂಬರ್ 4ರಂದು ಈ ಘಟನೆ. ಈ ಕುರಿತು ಮಾಧ್ಯಮಗಳಲ್ಲಿ ಈ ಕುರಿತು ಸುದ್ದಿ ಬಿತ್ತರಗೊಂಡಿದ್ದನ್ನು ಆಧರಿಸಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲಾಗಿದೆ.

ಈ ಸಂಬಂಧ ಕೃಷ್ಣಾಬಾಯಿ ಕಿಳ್ಳೇಕ್ಯಾತರ ಹಾಗೂ ಮಲ್ಲವ್ವ ಕಿಳ್ಳೇಕ್ಯಾತರ ಅವರನ್ನು ಬಂಧಿಸಿ, ನಾಯಾಲಯಕ್ಕೆ ಹಾಜರು ಪಡಿಸಲಾಗಿದೆ’ ಎಂದು ಪಿಎಸ್‌ಐ ಸಂಗಮೇಶ ಹೊಸಮನಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT