ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಜಾರ ಭಾಷೆಗೆ ಸಂವಿಧಾನ ಸ್ಥಾನಮಾನ

Last Updated 13 ನವೆಂಬರ್ 2017, 6:41 IST
ಅಕ್ಷರ ಗಾತ್ರ

ಧಾರವಾಡ: ‘ಬಂಜಾರ ಸಮಾಜ ತನ್ನದೇ ಆದ ಭಾಷೆ ಹೊಂದಿದೆ. ಸಮಾಜ ಹಾಗೂ ಜನಾಂಗವನ್ನು ಅಭಿವೃದ್ಧಿ ಪಡಿಸುವ ಪ್ರಮುಖ ಸಾಧನ ಭಾಷೆ. ಹೀಗಾಗಿ ಬಂಜಾರ ಭಾಷೆಗೆ ಸಂವಿಧಾನ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಸಮಿತಿ ರಚಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಮುಜರಾಯಿ ಮತ್ತು ಜವಳಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ಅಖಿಲ ಭಾರತ ಬಂಜಾರ ಸೇವಾ ಸಂಘದಿಂದ ಭಾನುವಾರ ಆಯೋಜಿಸಿದ್ದ ‘ಬಂಜಾರ ಪ್ರತಿಭಾವಂತರಿಗೆ ಪ್ರಶಸ್ತಿ ಪುರಸ್ಕಾರ ಸಮಾರಂಭ’ ಉದ್ಘಾಟಿಸಿ ಅವರು ಮಾತನಾಡಿದರು.

‘ಅರಣ್ಯ ಮತ್ತು ಸರ್ಕಾರಿ ಭೂಮಿಯಲ್ಲಿ ವಾಸಿಸುವರಿಗಾಗಿ ರಾಜ್ಯ ಸರ್ಕಾರ ವಾಸಿಸುವವನೇ ಭೂಮಿಯ ಒಡೆಯ ಎಂಬ ಕಾಯ್ದೆಯನ್ನು ಜಾರಿಗೆ ತರುತ್ತಿದೆ. ಇದು ಬಂಜಾರ ಸಮಾಜಕ್ಕೆ ವರದಾನವಾಗಲಿದ್ದು ಪ್ರತಿಯೊಬ್ಬರು ಇದರ ಲಾಭ ಪಡೆದುಕೊಳ್ಳಬೇಕು’ ಎಂದರು.

‘ಬಂಜಾರ ಸಮಾಜದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಸಮಾಜದ ಸರ್ವಾಂಗೀಣ ಪ್ರಗತಿಗಾಗಿ ತಾಲ್ಲೂಕು ಮಟ್ಟದಲ್ಲಿ ಬಂಜಾರ ಭವನ ನಿರ್ಮಿಸಲು ₹ 1 ಕೊಟಿ ಅನುದಾನ ನೀಡಲಾಗುತ್ತಿದೆ. ಧಾರವಾಡದಲ್ಲಿಯೂ ಜಾಗ ನೀಡಿದರೆ ಸರ್ಕಾರದ ವತಿಯಿಂದ ಭವನ ನಿರ್ಮಾಣ ಮಾಡಲಾಗುವುದು. ಸಮಾಜದ ಕೆಲ ಮುಖಂಡರು ಸಂತ ಸೇವಾಲಾಲರ ಜಯಂತಿಯನ್ನು ಸರ್ಕಾರದಿಂದ ಆಚರಿಸುವಂತೆ ಒತ್ತಾಯಿಸಿಸುತ್ತಿದ್ದಾರೆ. ಈ ಕುರಿತು ಶೀಘ್ರವೇ ಮುಖ್ಯಮಂತ್ರಿ ಜತಗೆ ಚರ್ಚಿಸಲಾಗುವುದು’ ಎಂದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ‘ಸರ್ಕಾರ ನೀಡುವ ಸೌಲಭ್ಯವನ್ನು ಬಂಜಾರ ಸಮಾಜ ಬಾಂಧವರು ಪಡೆದುಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ಜೀವನ ನಡೆಸಬೇಕು. ಈ ಸಮಾಜ ಇಂದು ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಕ್ಕೆ ಅನೇಕ ಕೊಡುಗೆ ನೀಡಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಬಂಜಾರ ಸಮುದಾಯ ಭವನ ನಿರ್ಮಾಣಕ್ಕೆ ನಗರದಲ್ಲಿ ಭೂಮಿ ನೀಡಲಾಗುವುದು’ ಎಂದರು.

'ದೇಶದ ಇತರೆ ರಾಜ್ಯಗಳಿಗಿಂತಲೂ ಕರ್ನಾಟಕದಲ್ಲಿ ಬಂಜಾರ ಸಮಾಜದವರು ಉನ್ನತ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ. ಇದಕ್ಕೆಲ್ಲ ಮಹಾ ಮಾನವತಾವಾದಿ ಬಸವಣ್ಣನವರು ಹಾಕಿ ಕೊಟ್ಟ ಸಮಾನತೆ ಮಾರ್ಗದರ್ಶನವೇ ಕಾರಣ’ ಎಂದರು.

‘ಶರಣರು, ಸಂತರು ಹುಟ್ಟಿದ ನಾಡಿನಲ್ಲಿ ಜೀವಿಸುತ್ತಿರುವುದು ನಮ್ಮ ಪುಣ್ಯ. ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮೊದಲೇ ಕರ್ನಾಟಕದಲ್ಲಿ ಅಸಮಾನತೆ ಹಾಗೂ ಅನಕ್ಷರತೆ ವಿರುದ್ಧ ಹೋರಾಟ ನಡೆದಿತ್ತು ಎಂಬುವುದು ಗಮರ್ನಾಹ ವಿಷಯ' ಎಂದರು.

ಲಿಂಗಸೂರಿನ ಅಂಕಲಿ ಮಠದ ವೀರಭದ್ರ ಸ್ವಾಮೀಜಿ, ಬಾಗಲಕೊಟೆಯ ಬಂಜಾರ ಶಕ್ತಿ ಪೀಠದ ಕುಮಾರ ಮಹಾರಾಜರು, ಹುಬ್ಬಳ್ಳಿಯ ಬಂಜಾರ ಗುರುಪೀಠದ ತಿಪ್ಪೇಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

ಶಾಸಕ ಪಿ.ರಾಜೀವ, ಸಮಾಜದ ಮುಖಂಡರಾದ ಮನೋಹರ ಐನಾಪುರ, ಲೀಲಾ ನಾಯ್ಕ, ಪರಮೇಶ್ವರ ನಾಯ್ಕ, ಈಶ್ವರ ನಾಯ್ಕ, ಕೃಷ್ಣಾ ಚವ್ಹಾಣ, ಪಾಂಡುರಂಗ ಪಮ್ಮಾರ, ರಾಮಾ ನಾಯ್ಕ ಇದ್ದರು.

ಎಸ್ಸೆಸ್ಸೆಎಲ್ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ 250ಕ್ಕೂ ಅಧಿಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಐಎಎಸ್, ಕೆಎಎಸ್ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT