ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ₹91 ಲಕ್ಷ ಉಳಿತಾಯ ಬಜೆಟ್‌

ರಸ್ತೆ, ಒಳಚರಂಡಿ, ಬೀದಿ ಸ್ವಚ್ಛತೆಗೆ ವಿಶೇಷ ಆದ್ಯತೆ
Last Updated 17 ಮಾರ್ಚ್ 2018, 10:06 IST
ಅಕ್ಷರ ಗಾತ್ರ

ವಿಜಯಪುರ: ಪುರಸಭೆಗೆ 2018–19 ನೇ ಸಾಲಿಗೆ ₹91,23,886 ಉಳಿತಾಯ ಬಜೆಟ್ ಮಂಡಿಸಲಾಗಿದೆ.

ನಾಗರಿಕ ಸೌಲಭ್ಯಗಳಾದ ರಸ್ತೆ, ಒಳಚರಂಡಿ, ಬೀದಿ ಸ್ವಚ್ಛತೆಗೆ ಆದ್ಯತೆ ಕಲ್ಪಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಲಭ್ಯವಾಗುವ ನಿಧಿಯೊಂದಿಗೆ ಆಸ್ತಿ, ನೀರಿನ, ಜಾಹಿರಾತುಗಳ ತೆರಿಗೆ, ಆಸ್ತಿ ವರ್ಗಾವಣೆ ಶುಲ್ಕ, ಅಭಿವೃದ್ಧಿ ಶುಲ್ಕ, ಮಳಿಗೆಗಳ ಬಾಡಿಗೆ, ಅನುಪಯುಕ್ತ ವಸ್ತುಗಳ ಮಾರಾಟ, ಬಡ್ಡಿ ದಂಡಗಳು, ಭೂ ಪರಿವರ್ತನೆ ಶುಲ್ಕ ಮುಂತಾದ ಮೂಲಗಳಿಂದ ಬರುವ ಆದಾಯಗಳನ್ನು ಒಳಗೊಂಡಂತೆ ₹16,53,97,283 ಆದಾಯ ನಿರೀಕ್ಷೆ ಮಾಡಿದ್ದೇವೆ ಎಂದು ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ತಿಳಿಸಿದರು.

ಸಾರ್ವಜನಿಕ ಆರೋಗ್ಯ ಮತ್ತು ಅನುಕೂಲತೆ, ಕುಡಿಯುವ ನೀರು ಸರಬರಾಜು, ಕಸ ಸಾಗಾಣಿಕೆ, ಕಾಮಗಾರಿಗಳು, ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳು, ಸಾರ್ವಜನಿಕ ಉದ್ಯಾನಗಳ ಅಭಿವೃದ್ಧಿಗಾಗಿ ₹ 15,62,73,397 ಖರ್ಚು ಮಾಡಲು ಉದ್ದೇಶಿಸಲಾಗಿದೆ ಎಂದರು.

ರಾಜಸ್ವ ಜಮಾಗಳು ₹7,80,40,000, ರಾಜಸ್ವ ಖರ್ಚುಗಳು ₹7,14,29,897. ಬಂಡವಾಳಜಮೆಗಳು ₹2,46,74,000, ಬಂಡವಾಳ ಪಾವತಿಗಳು ₹7,20,50,000, ಅಸಾಮಾನ್ಯ ಖಾತೆಗಳಿಂದ ಜಮೆಗಳು, ₹1,19,93,500, ಅಸಾಮಾನ್ಯ ಖಾತೆಯ ಪಾವತಿಗಳು, ₹1,27,93500, ಎಸ್‌ಎಫ್‌ಸಿ ವೇತನ ಅನುದಾನ ₹2,98,4796, ಅಂಗಡಿ ಮಳಿಗೆಗಳ ಬಾಡಿಗೆ ಆದಾಯ, ₹25ಲಕ್ಷ , ನೌಕರರ ವಸತಿಗೃಹಗಳ ಬಾಡಿಗೆ ಆದಾಯ, ₹1.50 ಲಕ್ಷ ನಿರೀಕ್ಷೆ ಮಾಡಲಾಗುತ್ತಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ₹32 ಲಕ್ಷ , ಶೇ 7.25 ರ ನಗರ ಬಡಜನರ ಕಾರ್ಯಕ್ರಮದ ವೆಚ್ಚಗಳಿಗಾಗಿ ₹9,62,500, ಶೇ 3 ರ ಅಂಗವಿಕಲ ಕಲ್ಯಾಣ ಕಾರ್ಯಕ್ರಮದ ವೆಚ್ಚಗಳಿಗಾಗಿ ₹3.98 ಲಕ್ಷ, ಗುತ್ತಿಗೆದಾರರು, ಸರಬರಾಜುದಾರರ ಇಎಂಡಿ ಠೇವಣಿಗಳು, ಭದ್ರತಾ ಠೇವಣಿಗಳು, ₹1 ಲಕ್ಷ, ಪಾವತಿ ಮಾಡಬೇಕಾದ ಕಟಾವಣೆಗಳು, ನೌಕರರ ಜಿಪಿಎಸ್, ಪಿಟಿ, ಜಿಐಎಸ್, ಎಫ್‌ಬಿಎಫ್, ₹2 ಲಕ್ಷ, ನೌಕರರ ಜೀವವಿಮೆ ಪ್ರೀಮಿಯಂ ₹10 ಲಕ್ಷ, ಗುತ್ತಿಗೆದಾರರಿಂದ ಕಟಾಯಿಸಲಾದ ತೆರಿಗೆ, ₹10ಲಕ್ಷ ಗುತ್ತಿಗೆದಾರರಿಂದ ಕಟಾಯಿಸಲಾದ ವ್ಯಾಟ್, (ಜಿಎಸ್‌ಟಿ, ತೆರಿಗೆ) ₹20 ಲಕ್ಷ ಎಂದು ಅವರು ಹೇಳಿದರು.

ಸ್ಥಳೀಯರು ಕಾಲ ಕಾಲಕ್ಕೆ ಪುರಸಭೆಗೆ ಸಂದಾಯ ಮಾಡಬೇಕಾಗಿರುವ ತೆರಿಗೆಗಳು, ಬಾಡಿಗೆ ಹಣವನ್ನು ನಿಗದಿತ ಸಮಯದಲ್ಲಿ ಸಂದಾಯ ಮಾಡುವ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಅವರು ಕೋರಿದರು.

ಕುಡಿಯುವ ನೀರು ಪೂರೈಕೆ ಮಾಡಲು, ಸ್ವಚ್ಛತೆ ಕಾಪಾಡಲು, ಅಗತ್ಯ ಕ್ರಮ ಕೈಗೊಂಡಿದ್ದೇವೆ. ಜನರು ಸಹಕಾರ ನೀಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT