ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

47 ಮಂದಿ ಪರೀಕ್ಷಾರ್ಥಿಗಳು ಗೈರು

Last Updated 13 ನವೆಂಬರ್ 2017, 9:06 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಖಾಲಿ ಇರುವ 106 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಶನಿವಾರ ನಡೆದ ಪರೀಕ್ಷೆಗೆ 47 ಮಂದಿ ಗೈರಾಗಿದ್ದರು. ‘ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗೂ ಮೆಥೋಡಿಸ್ಟ್ ಪ್ರೌಢ ಶಾಲೆ ಕೇಂದ್ರದಲ್ಲಿ ಒಟ್ಟಾರೆ ಎರಡು ವಿಷಯಗಳ ಪರೀಕ್ಷೆ ನಡೆಯಿತು. ಬೆಳಗಿನ ಸಾಮಾನ್ಯ ಜ್ಞಾನ ವಿಷಯಕ್ಕೆ ಹೆಸರು ನೋಂದಾಯಿಸಿದ್ದ 411 ಅಭ್ಯರ್ಥಿಗಳ ಪೈಕಿ 364 ಮಂದಿ ಪರೀಕ್ಷೆಗೆ ಹಾಜರಾದರು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸ್ವಾಮಿ ತಿಳಿಸಿದ್ದಾರೆ.

ಬಾಲಕಿಯರ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ ಪರೀಕ್ಷೆಗೆ ನೋಂದಾಯಿಸಿದ್ದ 205 ಮಂದಿಯ ಪೈಕಿ 22 ಅಭ್ಯರ್ಥಿಗಳು ಗೈರಾಗಿದ್ದಾರೆ. ಮೆಥೋಡಿಸ್ಟ್ ಪರೀಕ್ಷಾ ಕೇಂದ್ರದಲ್ಲಿ 206 ಮಂದಿ ಹೆಸರು ನೋಂದಾಯಿಸಿದ್ದು, 25 ಮಂದಿ ಗೈರಾದರು ಎಂದು ಹೇಳಿದ್ದಾರೆ.

ಮಧ್ಯಾಹ್ನ ನಡೆದ ಇಂಗ್ಲಿಷ್‌ ಭಾಷಾ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ 27 ಮಂದಿ ಪೈಕಿ ನಾಲ್ಕು ಅಭ್ಯರ್ಥಿಗಳು ಪರೀಕ್ಷೆಗೆ ಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಇಂಗ್ಲಿಷ್‌ ಶಿಕ್ಷಕರ 49 ಹುದ್ದೆಗಳು ಖಾಲಿ 24 ಮಂದಿ ಪರೀಕ್ಷೆ ಬರೆದಿದ್ದಾರೆ. ಹೀಗಾಗಿ ಖಾಲಿ ಹುದ್ದೆಗಳು ಹಾಗೆಯೇ ಉಳಿಯುವ ಆತಂಕ ಎದುರಾಗಿದೆ.

ವಿಜ್ಞಾನ ಮತ್ತು ಗಣಿತ ಶಿಕ್ಷಕರ 49 ಹುದ್ದೆಗಳು ಖಾಲಿ ಇದ್ದು, 81 ಮಂದಿ ಪರೀಕ್ಷೆ ಬರೆದಿದ್ದಾರೆ. ಆದರೆ, ಸಮಾಜ ವಿಜ್ಞಾನ ವಿಷಯದಲ್ಲಿ 8 ಹುದ್ದೆಗಳು ಖಾಲಿ ಇದ್ದರೂ ಪರೀಕ್ಷೆಗೆ 311 ಮಂದಿ ಹೆಸರು ನೋಂದಾಯಿಸಿದ್ದರು.

ಶಿಕ್ಷಕರ ನೇಮಕಾತಿ ಪರೀಕ್ಷೆಗೆ ವಿಶೇಷ ವೀಕ್ಷಕರಾಗಿ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ವ ಶಿಕ್ಷಣ ಅಭಿಯಾನದ ಜಂಟಿ ನಿರ್ದೇಶಕಿ ಪದ್ಮಾವತಿ ನಿಯೋಜನೆಗೊಂಡಿದ್ದರು. ಜತೆಗೆ ಜಿಲ್ಲೆಯಿಂದ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ವೀಕ್ಷಕರಾಗಿ ನೇಮಿಸಲಾಗಿತ್ತು. ಡಿಡಿಪಿಐ ಸ್ವಾಮಿ ಅವರ ನೇತೃತ್ವದಲ್ಲಿ ಜಾಗೃತದಳ ರಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT