ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಕ್ಷಣ, ತಂತ್ರಜ್ಞಾನದಲ್ಲಿ ರಾಜ್ಯ ಮುಂಚೂಣಿ’

Last Updated 13 ನವೆಂಬರ್ 2017, 9:19 IST
ಅಕ್ಷರ ಗಾತ್ರ

ಕೊಪ್ಪಳ: ಶಿಕ್ಷಣ, ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ ಎಂದು ಲೋಕಸಭಾ ಮಾಜಿ ಸ್ಪೀಕರ್‌ ಮೀರಾಕುಮಾರ್‌ ಮುಕ್ತಕಂಠದಿಂದ ಶ್ಲಾಘಿಸಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅಖಿಲ ಕರ್ನಾಟಕ ಮೋಚಿಗಾರ ಮಹಾಸಭಾದ ಆಶ್ರಯದಲ್ಲಿ ನಡೆದ ಮೋಚಿಗಾರ ಸಮಾಜದ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

'ರಾಜ್ಯಕ್ಕೆ ಭವ್ಯ ಇತಿಹಾಸ ಇದೆ. ಸ್ವಾತಂತ್ರ್ಯ ಹೋರಾಟದಲ್ಲಿಯೂ ಇಲ್ಲಿನ ಜನ ಮುಂಚೂಣಿಯಲ್ಲಿದ್ದರು. ಬೇರೆ ರಾಜ್ಯದ ವಿದ್ಯಾರ್ಥಿಗಳು ಇಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ' ಎಂದು ಶ್ಲಾಘಿಸಿದರು. 'ನಮ್ಮ ಸಮಾಜದ ಜನರಲ್ಲಿ ಕೀಳರಿಮೆ ಸಲ್ಲದು. ನಾವು ಉತ್ತಮರು ಎಂದು ಭಾವಿಸಿಕೊಳ್ಳಬೇಕು. ಜಾತಿ ವ್ಯವಸ್ಥೆಯನ್ನು ತೊಡೆದುಹಾಕಬೇಕು' ಎಂದು ಅವರು ಕರೆ ನೀಡಿದರು.

ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, 'ಮನುಷ್ಯ ಹಣವಿಲ್ಲದೆ ಬದುಕಬಹುದು. ಆದರೆ, ಅವಮಾನ ಸಹಿಸಿಕೊಂಡು ಬದುಕಲಾಗದು. ಸಮಾನತೆಯ ಸಮಾಜ ಬರಬೇಕು. 12ನೇ ಶತಮಾನದಲ್ಲಿಯೇ ಸಮಸಮಾಜವನ್ನು ಸೃಷ್ಟಿಸುವ ಪ್ರಯತ್ನ ನಡೆಯಿತು. ಜಾತಿ ವ್ಯವಸ್ಥೆ ಸಂಪೂರ್ಣವಾಗಿ ಹೋಗುವವರೆಗೂ ದೇಶದಲ್ಲಿ ಮೀಸಲಾತಿ ಅಗತ್ಯವಿದೆ' ಎಂದರು.

'ಮೋಚಿಗಾರ ಸಮಾಜದವರು ಶಿಕ್ಷಣ ಪಡೆಯಬೇಕು. ಶಿಕ್ಷಣವೊಂದರಿಂದಲೇ ಬದಲಾವಣೆ ಸಾಧ್ಯ' ಎಂದರು. 'ನಾನು ಜಾತಿ ವ್ಯವಸ್ಥೆಯ ವಿರೋಧಿ. ಏಕೆಂದರೆ ಮನುಸ್ಪೃತಿಯ ಹಾಗೂ ಜಾತಿ ವ್ಯವಸ್ಥೆಯ ಮೂಲಕ ಮನುಷ್ಯರನ್ನು ವಿಂಗಡಣೆ ಮಾಡುವುದು ಮಾನವೀಯತೆ ಅಲ್ಲ. ಇದರಿಂದಾಗಿ ಅಸ್ಪೃಶ್ಯತೆ, ಮೇಲು-ಕೀಳು ಎನ್ನುವ ಭಾವನೆ ಹುಟ್ಟುಹಾಕುವ ಕೆಲಸವನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮಾಡುತ್ತಿವೆ. ಈ ನಿಟ್ಟಿನಲ್ಲಿ ಅಂಬೇಡ್ಕರ್‍ ಮನುಸ್ಪೃತಿ ಸುಟ್ಟು ಹಾಕಿರುವುದನ್ನು ಒಪ್ಪಿಕೊಳ್ಳುತ್ತೇನೆ. ಹಾಗಾಗಿ ದೇಶದ ಬದಲಾವಣೆಗೆ ಉತ್ತಮ ಸುಧಾರಕರು ಬರಬೇಕು' ಎಂದರು.

ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಆಂಜನೇಯ ಮಾತನಾಡಿದರು. ‘ಸಮಾಜದ ಜನರು ಪಂಚಾಯಿತಿಯಿಂದ ಪಾರ್ಲಿಮೆಂಟ್‌ ವರೆಗೂ ಪ್ರವೇಶ ಪಡೆಯಬೇಕು. ಬಡ್ತಿ ಮೀಸಲಾತಿ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶ ಸಂಬಂಧಿಸಿ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ’ ಎಂದರು.  ಮೋಚಿಗಾರ ಮಹಾಸಭಾದ ಅಧ್ಯಕ್ಷ ಟಿ.ಆರ್‌.ಧನಂಜಯ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT