ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಮ್‌ ಆರಂಭಕ್ಕೆ ಕೂಡಿಬಾರದ ಮುಹೂರ್ತ!

Last Updated 13 ನವೆಂಬರ್ 2017, 9:24 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲಾ ಕ್ರೀಡಾಂಗಣದಲ್ಲಿ ಅಳವಡಿಸಲು ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ) ಅನುದಾನದಲ್ಲಿ ಖರೀದಿಸಿದ ಜಿಮ್‌ ಸಾಧನಗಳು ಬಂದು ಎರಡು ವರ್ಷಗಳಾದರೂ ಜಿಮ್‌ ಆರಂಭಿಸಲು ಇನ್ನೂ ಕಾಲ ಕೂಡಿ ಬರುತ್ತಿಲ್ಲ! ಜಿಮ್‌ ಸಾಧನಗಳನ್ನು ಅಳವಡಿಸುವುದಕ್ಕೆ ಸೂಕ್ತ ಕಟ್ಟಡವೊಂದು ಜಿಲ್ಲಾ ಕ್ರೀಡಾಂಗಣದಲ್ಲಿ ಇರಲಿಲ್ಲ ಎನ್ನುವುದು ಒಂದು ಕಾರಣ.

ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ವಿವಿಧ ಹುದ್ದೆಗಳು ಖಾಲಿಯಾಗಿರುವ ಪರಿಣಾಮ ಜಿಮ್‌ ಆರಂಭಿಸಿ, ಕ್ರೀಡಾಸಕ್ತರಿಗೆ ಅನುಕೂಲ ಮಾಡುವ ಕೆಲಸ ಇಲ್ಲಿಯವರೆಗೂ ಆಗಿಲ್ಲ. ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲೆ ಬಹುಪಯೋಗಿ ಕಟ್ಟಡವೊಂದನ್ನು ನಿರ್ಮಿಸುವುದಕ್ಕಾಗಿ ಜಿಲ್ಲಾಡಳಿತ ಎಚ್‌ಕೆಆರ್‌ಡಿಬಿಗೆ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಿ ಅನುದಾನ ಪಡೆಯಿತು. ಎರಡು ವರ್ಷಗಳಲ್ಲಿ ಸುಸಜ್ಜಿತ ಕಟ್ಟಡ ಕೂಡಾ ನಿರ್ಮಾಣ ನಿಂತಿದೆ. ಟ್ಯಾಗೋರ್ ಕಾಲೇಜು ಎದುರು ಹೆದ್ದಾರಿಗೆ ಹೊಂದಿಕೊಂಡು ನಿರ್ಮಾಣವಾದ ಹೊಸ ಕಟ್ಟಡದ ಎರಡನೇ ಮಹಡಿಯಲ್ಲಿ ಜಿಮ್‌ ಆರಂಭಿಸುವುದಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.

ಜಿಮ್ ಅಭ್ಯಾಸಕ್ಕೆ ಯುವಕರಿಗೊಂದು, ಯುವತಿಯರಿಗೊಂದು ಪ್ರತ್ಯೇಕ ವಿಶಾಲವಾದ ಕೋಣೆಗಳಿವೆ. ತುಕ್ಕುರಹಿತ ಲೋಹ ಹಾಗೂ ಫೈಬರ್‌ನಿಂದ ತಯಾರಿಸಿದ ಜಿಮ್‌ ಸಾಧನಗಳನ್ನು ಅಳವಡಿಸುವ ಕೆಲಸವು ಭರದಿಂದ ನಡೆಯುತ್ತಿದೆ. ವಿದ್ಯುತ್ ಸಂಪರ್ಕ ಹಾಗೂ ಮ್ಯಾಟಿಂಗ್ ಕೆಲಸ ಬಾಕಿ ಇದ್ದು, ಅದು ಕೂಡಾ ಶೀಘ್ರದಲ್ಲೆ ಪೂರ್ಣ ಗೊಳ್ಳಲಿದೆ.

ಆದರೆ ಜಿಮ್‌ ಯಾವಾಗ ಆರಂಭಿಸಬೇಕು ಎನ್ನುವ ದಿನ ಹಾಗೂ ಜಿಮ್‌ ನಿರ್ವಹಣೆಗಾಗಿ ವ್ಯವಸ್ಥೆಗಳನ್ನು ನಿರ್ಣಯ ಮಾಡುವುದು ಬಾಕಿಯಿದೆ. ಜಿಲ್ಲಾ ಕ್ರೀಡಾ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ಈ ಬಗ್ಗೆ ಆಸಕ್ತಿ ವಹಿಸಿ ಕೆಲಸ ಮಾಡಿಸುತ್ತಿದ್ದಾರೆ. ಇನ್ನು ಮೇಲಾದರೂ ಜಿಮ್‌ ಆರಂಭವಾಗಬಹುದು ಎಂದು ನಗರದ ಕ್ರೀಡಾಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

'ಎಚ್‌ಕೆಆರ್‌ಡಿಬಿ ಯಿಂದ ಜಿಮ್‌ ಸಾಧನಗಳು ಬಂದು ಎರಡು ವರ್ಷವಾದರೂ ಅವುಗಳನ್ನು ಬಳಸಿಲ್ಲ. ಎಲ್ಲವೂ ದೂಳು ಹಿಡಿದಿರಬಹುದು. ಜಿಮ್‌ ತೆರೆಯಲು ಅಗತ್ಯ ಕಟ್ಟಡವಿಲ್ಲದೆ ಸಾಮಗ್ರಿಗಳನ್ನು ತಂದು ಇಟ್ಟಿದ್ದಾರೆ. ಅವುಗಳಿಂದ ಜನರಿಗೆ ಅನುಕೂಲ ಮಾಡಿಕೊಡಲು ಈಗಲಾದರೂ ಜಿಮ್‌ ಆರಂಭಿಸುವುದಕ್ಕೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ನಗರದ ಕ್ರೀಡಾಪಟುಗಳು ಮತ್ತು ದೈಹಿಕ ಕಸರತ್ತು ಮಾಡಬೇಕು ಎನ್ನುವ ಆಸಕ್ತಿ ಇರುವ ಜನರಿಗೆ ಕ್ರೀಡಾಂಗಣದಲ್ಲಿ ಯಾವ ಅನುಕೂಲವು ಇಲ್ಲ. ಶುಲ್ಕ ತೆಗೆದುಕೊಂಡರೂ ಪರವಾಗಿಲ್ಲ. ಆದರೆ ಬೇಗನೆ ಜಿಮ್‌ಪ್ರಾರಂಭಿಸಬೇಕು' ಎನ್ನುತ್ತಾರೆ ಡ್ಯಾಡಿ ಕಾಲೋನಿ ನಿವಾಸಿ ಪವನ ಕಾಂಬಳೆ.

ನಗರದ ಜನರ ಆರೋಗ್ಯ ಸದೃಢವಾಗಿ ಕಾಪಾಡಿಕೊಳ್ಳಲು ನೆರವಾಗುವ ಸದುದ್ದೇಶದಿಂದ ಕಲಬುರ್ಗಿ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ಕೋಟ್ಯಂತರ ಮೌಲ್ಯದ ಜಿಮ್‌ ಸಾಧನಗಳನ್ನು ಎಚ್‌ಕೆಆರ್‌ಡಿಬಿ ಖರೀದಿಸಿ ಕಳುಹಿಸಿದೆ. 2015- 16 ಆರಂಭದಲ್ಲೆ ಜಿಮ್‌ ಸಾಧನಗಳು ಬಂದ ತಕ್ಷಣ ಬಳ್ಳಾರಿ ಹಾಗೂ ಕಲಬುರ್ಗಿಯಲ್ಲಿ ಅವುಗಳ ಬಳಕೆಗೆ ವ್ಯವಸ್ಥೆ ಆಗಿದೆ. ಆ ಜಿಲ್ಲೆಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ಸಮಯ ನಿಗದಿ ಮಾಡಿದ್ದು, ಇದಕ್ಕಾಗಿ ಶುಲ್ಕ ಪಡೆಯಲಾಗುತ್ತದೆ. ಜಿಮ್‌ ನಿರ್ವಹಣೆಗೆ ಎಚ್‌ಕೆಆರ್‌ಡಿಬಿ ಅನುದಾನ ಕೊಡುವುದಿಲ್ಲ. ಜಿಮ್‌ನಿಂದ ಸಂಗ್ರಹವಾಗುವ ಶುಲ್ಕದಲ್ಲೆ ಅದನ್ನು ನಿರ್ವಹಿಸಿಕೊಂಡು ಹೋಗಬೇಕಿದೆ. ಎರಡೂ ಜಿಲ್ಲೆಗಳಲ್ಲಿ ಜಿಮ್‌ ಸಮರ್ಪಕವಾಗಿದ್ದು, ಜನರು ಬಳಸುತ್ತಿದ್ದಾರೆ. ಆದರೆ ರಾಯಚೂರಿನಲ್ಲಿ ಮಾತ್ರ ಎರಡು ವರ್ಷಗಳಾದರೂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT