ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜ್ಯದಲ್ಲಿ ಈಗ ಬದಲಾವಣೆ ಪರ್ವ’

Last Updated 13 ನವೆಂಬರ್ 2017, 10:15 IST
ಅಕ್ಷರ ಗಾತ್ರ

ತಾಂಬಾ: ‘ರಾಜ್ಯದಲ್ಲಿ ಬದಲಾವಣೆ ಪರ್ವ ಆರಂಭವಾಗಿದೆ. ಮುಂಬರುವ ಚುನಾವಣೆಯಲ್ಲಿ ಬಹುಮತದೊಂದಿಗೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ’ ಎಂದು ಮಾಜಿ ಸಚಿವ ಎಂ.ಸಿ.ಮನಗೂಳಿ ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ ಸುರಗಿಹಳ್ಳಿ ಗ್ರಾಮದ ಅನೇಕ ಯುವ ಮುಖಂಡರನ್ನೂ ಬರಮಾಡಿಕೊಂಡು ಅವರು ಮಾತನಾಡಿದರು.

‘ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ರಾಜ್ಯದಾದ್ಯಂತ ಸಂಚರಿಸಿ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಹಗರಣಗಳಲ್ಲಿ ಸಿಲು ಕಿವೆ. ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಜನಪರ, ರೈತಪರ ಯೋಜನೆಗಳನ್ನು ಜಾರಿಗೊಳಿಸಿ ದ್ದಾರೆ’ ಎಂದರು.

ಕಾತನಗೌಡ ಪಾಟೀಲ ಮಾತ ನಾಡಿ ‘ರಾಜ್ಯದಲ್ಲಿ ಬಡವರ ದೀನದಲಿತರ ಪರವಾಗಿ ಚಿಂತನೆ ಮತ್ತು ದೂರದೃಷ್ಟಿಯುಳ್ಳ ವ್ಯಕ್ತಿ ಯಾರಾದರೂ ಇದ್ದರೆ ಅದು ಎಚ್.ಡಿ.ಕುಮಾರಸ್ವಾಮಿ’ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಚನ್ನಮಲ್ಲಪ್ಪ ದೇಗಿನಾಳ, ಇಂಡಿ ತಾಲ್ಲೂಕು ಕಾರ್ಯದರ್ಶಿ ಕುಬೇರ ನಾವದಗಿ, ತಾಂಬಾ ಗ್ರಾಮ ಘಟಕದ ಅಧ್ಯಕ್ಷ ರಾಜಶೇಖರ ಮಂಜಿ, ಭಿರಪ್ಪ ವಗ್ಗಿ, ಸುಭಾಸ ಅಳಗುಣಡಗಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಸಿದನಗೌಡ ಪಾಟೀಲ, ಹಾಜಿಸಾಬ ಕಸಾಬ, ಜೆ.ಎಸ್. ಹತ್ತಿ, ವಿಠೋಲ ಅವಟಿ, ಸುರಗಿಹಳಿ ಗ್ರಾಮ ಘಟಕದ ಅಧ್ಯಕ್ಷ ಶಂಕರ ದೇವಣಗಾವ, ಬಸು ನಾವಿ, ನಜೀರ ಮುಲ್ಲಾ, ಶಬೀರ ಮುಲ್ಲಾ, ಸಂಗಣ್ಣ ಹಳವಾರ, ಮೊನೇಶ ಬಡಿಗೇರ, ಗೋಳು ಮೂದೊಡಗಿ, ರಮೇಶ ಉಡಚ್ಯಣ, ರಾಜು ಗುಮಾಸ್ತೆ, ನಿಂಬಣ್ಣ ವಾಲಿಕಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT