ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮಾಹಿತಿಯ ಜಾತ್ರೆ

Last Updated 13 ನವೆಂಬರ್ 2017, 19:30 IST
ಅಕ್ಷರ ಗಾತ್ರ

ರೈತರಿಗೆ ಮಾಹಿತಿ ವಿನಿಮಯದ ತಾಣವಾದ ಕೃಷಿ ಮೇಳಕ್ಕೆ ಬೆಂಗಳೂರಿನ ಜಿಕೆವಿಕೆ ಅಂಗಳ ಸಜ್ಜಾಗುತ್ತಿದೆ. ಇದೇ ನವೆಂಬರ್ 16 ರಿಂದ 19ರವರೆಗೆ ಈ ಮೇಳ ನಡೆಯಲಿದೆ.

ಕೃಷಿ, ಜಲಾನಯನ ಅಭಿವೃದ್ಧಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಹಾಗೂ ಕರ್ನಾಟಕ ಹಾಲು ಮಹಾಮಂಡಳಿ ಈ ಮೇಳಕ್ಕೆ ಸಹಯೋಗ ನೀಡಿವೆ.

ಸುಧಾರಿತ ಬೇಸಾಯ ಪದ್ಧತಿಗಳ ತಾಕುಗಳ ಪ್ರಾತ್ಯಕ್ಷಿಕೆ ಇರಲಿದ್ದು, ವಿವಿಧ ಬೆಳೆಗಳ ನೂತನ ತಳಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಸಾಧಕ ರೈತರಿಗೆ ಸನ್ಮಾನ, ಕೃಷಿ ವಸ್ತುಪ್ರದರ್ಶನ, ತಜ್ಞರಿಂದ ಸಲಹೆ, ಚರ್ಚಾಗೋಷ್ಠಿ, ಕೃಷಿ ಪರಿಕರ ಹಾಗೂ ಪ್ರಕಟಣೆಗಳ ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ.

ಕಬ್ಬು (ವಿಸಿಎಫ್ 0517), ಮೇವಿನ ಅಲಸಂದೆ (ಎಂಎಫ್‍ಸಿ-09-1), ಮುಸುಕಿನಜೋಳ (ಎಂಎಎಚ್-14-5), ತೊಗರಿ (ಬಿಆರ್‍ಜಿ-3), ಅಲಸಂದೆ (ಎವಿ-6), ಬೀಜದ ದಂಟು (ಕೆಬಿಜಿಎ-4), ನೇರಳೆ–ಚಿಂತಾಮಣಿ ಸೆಲೆಕ್ಷನ್ (ಆಯ್ಕೆ-1)ನಲ್ಲಿ ಹೊಸ ತಳಿಗಳು ಬಿಡುಗಡೆಯಾಗಲಿವೆ.

700 ಮಳಿಗೆಗಳಿದ್ದು, ಕೃಷಿ, ಇಲಾಖೆಗಳು ರೈತ ಪರ ಸಂಘ –ಸಂಸ್ಥೆಗಳು ಭಾಗವಹಿಸಲಿವೆ. ಸುಮಾರು 175 ಕೃಷಿ ಎಂಜಿನಿಯರಿಂಗ್ ವಿಭಾಗದ ಮಳಿಗೆಗಳಲ್ಲಿ ದೇಶದ ಪ್ರಮುಖ ಕಂಪನಿಗಳು ರೈತರಿಗೆ ಸಲಹೆ ನೀಡಲಿವೆ. 65 ಮಳಿಗೆಗಳು ಹೈನುಗಾರಿಕೆ, ಕುರಿ, ಮೇಕೆ, ಕೋಳಿ, ಹಂದಿ ಮತ್ತು ಮೊಲದ ಸಾಕಾಣಿಕೆಯಲ್ಲಿ ಆಗಿರುವ ಹೊಸ ಆವಿಷ್ಕಾರವನ್ನು ಪರಿಚಯಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT