ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲ್ಯಾಪ್‌ಟಾಪ್‌ ಚೀಲದಲ್ಲಿ ಹೊಗೆ: ಇಂಡಿಗೊ ವಿಮಾನದಲ್ಲಿ ಆತಂಕ

Last Updated 13 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಶನಿವಾರ ತಿರುವನಂತಪುರದಿಂದ ಬೆಂಗಳೂರಿಗೆ ಹೋಗುತ್ತಿದ್ದ ಇಂಡಿಗೊ ವಿಮಾನದಲ್ಲಿ ಲ್ಯಾಪ್‌ಟಾಪ್‌ ಚೀಲವೊಂದರಿಂದ ‌ಬರುತ್ತಿದ್ದ ಹೊಗೆ, ಪ್ರಯಾಣಿಕರು ಮತ್ತು ಸಿಬ್ಬಂದಿಯಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು.

ಈ ಬಗ್ಗೆ ವಿಮಾನಯಾನ ಸಂಸ್ಥೆ ಸೋಮವಾರ ಹೇಳಿಕೆ ಬಿಡುಗಡೆ ಮಾಡಿದೆ. ‘ವಿಮಾನ ಹಾರಾಟ ನಡೆಸುತ್ತಿದ್ದಾಗ ಹೊಗೆಯ ವಾಸನೆ ಬರುತ್ತಿರುವ ಬಗ್ಗೆ ಕೆಲವು ಪ್ರಯಾಣಿಕರು ಸಿಬ್ಬಂದಿಗೆ ಮಾಹಿತಿ ನೀಡಿದರು. ತಕ್ಷಣ ಕೂಲಂಕಷವಾಗಿ ತಪಾಸಣೆ ನಡೆಸಲಾಯಿತು.‌ ಲ್ಯಾಪ್‌ಟ್ಯಾಪ್‌ ಇದ್ದ ಕಪ್ಪು ಚೀಲವೊಂದರಿಂದ ಸಣ್ಣ ಬೆಂಕಿ ಕಿಡಿಗಳು ಹೊರಬರುತ್ತಿದ್ದುದು ಕಂಡು ಬಂತು’ ಎಂದು ಇಂಡಿಗೊ ತಿಳಿಸಿದೆ.

‘ಸಿಬ್ಬಂದಿ ತಕ್ಷಣವೇ ಚೀಲದ ಮೇಲೆ ಅಗ್ನಿ ಶಾಮಕ ರಾಸಾಯನಿಕವನ್ನು ಚಿಮುಕಿಸಿದರು’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT