ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ವಿಶ್ವಕಪ್‌ಗೆ ಸ್ವಿಟ್ಜರ್‌ಲೆಂಡ್‌ ಅರ್ಹತೆ

Last Updated 13 ನವೆಂಬರ್ 2017, 20:03 IST
ಅಕ್ಷರ ಗಾತ್ರ

ಬಾಸೆಲ್‌, ಸ್ವಿಟ್ಜರ್‌ಲೆಂಡ್‌: ಸ್ವಿಟ್ಜರ್‌ಲೆಂಡ್‌ ಮತ್ತು ಕ್ರೊವೇಷ್ಯಾ ತಂಡದವರು 2018ರಲ್ಲಿ ರಷ್ಯಾದಲ್ಲಿ ನಡೆಯುವ ವಿಶ್ವಕಪ್‌ ಫುಟ್‌ಬಾಲ್ ಟೂರ್ನಿಗೆ ಅರ್ಹತೆ ಗಳಿಸಿದ್ದಾರೆ.

ಭಾನುವಾರ ನಡೆದ ಎರಡನೇ ಹಂತದ ‘ಪ್ಲೇ ಆಫ್‌‘ ಹೋರಾಟದಲ್ಲಿ ಸ್ವಿಟ್ಜರ್‌ಲೆಂಡ್‌ ತಂಡ ನಾರ್ತರ್ನ್‌ ಐರ್ಲೆಂಡ್‌ ವಿರುದ್ಧ ಗೋಲು ರಹಿತ ಡ್ರಾ ಮಾಡಿಕೊಂಡಿತು. ಈ ಮೂಲಕ 1–0 ಗೋಲಿನ ಸರಾಸರಿಯೊಂದಿಗೆ ವಿಶ್ವಕಪ್‌ ಅರ್ಹತೆ ತನ್ನದಾಗಿಸಿಕೊಂಡಿತು.

ಮೊದಲ ಲೆಗ್‌ನ ಹಣಾಹಣಿಯಲ್ಲಿ ಸ್ವಿಟ್ಜರ್‌ಲೆಂಡ್‌ 1–0 ಗೋಲಿನಿಂದ ಐರ್ಲೆಂಡ್‌ ಸವಾಲು ಮೀರಿ ನಿಂತಿತ್ತು.

ಗ್ರೀಸ್‌ನ ಪಿರಾಯಿಯಸ್‌ನಲ್ಲಿ ನಡೆದ  ಮತ್ತೊಂದು ಪಂದ್ಯದಲ್ಲಿ ಕ್ರೊವೇಷ್ಯಾ 4–1 ಗೋಲುಗಳಿಂದ ಆತಿಥೇಯ ಗ್ರೀಸ್‌ ತಂಡವನ್ನು ಸೋಲಿಸಿತು.

ಗುರುವಾರ ನಡೆದಿದ್ದ ಮೊದಲ ಲೆಗ್‌ನಲ್ಲಿ ಕ್ರೊವೇಷ್ಯಾ 4–1ರ ಮುನ್ನಡೆ ಗಳಿಸಿತ್ತು. ಎರಡನೇ ಲೆಗ್‌ನ ಪಂದ್ಯ ಗೋಲು ರಹಿತವಾಗಿ ಅಂತ್ಯ ಕಂಡಿದ್ದರಿಂದ ಗ್ರೀಸ್‌ ತಂಡದ ವಿಶ್ವಕಪ್‌ ಅರ್ಹತೆಯ ಕನಸು ಕಮರಿತು.

ಕ್ರೊವೇಷ್ಯಾ ತಂಡ ಐದನೇ ಬಾರಿಗೆ ವಿಶ್ವಕಪ್‌ನಲ್ಲಿ ಆಡಲಿದೆ. ಈ ತಂಡ 2010ರಲ್ಲಿ ಅರ್ಹತೆ ಗಳಿಸಲು ವಿಫಲವಾಗಿತ್ತು.

ಕಾರೈಸಿಯಾಕಿಸ್‌ ಕ್ರೀಡಾಂಗಣದಲ್ಲಿ ನಡೆದ ಎರಡನೇ ಲೆಗ್‌ನ ಹೋರಾಟದಲ್ಲಿ ಕ್ರೊವೇಷ್ಯಾ ತಂಡ ರಕ್ಷಣಾ ವಿಭಾಗದಲ್ಲಿ ಮಿಂಚಿನ ಆಟ ಆಡಿತು. ಹೀಗಾಗಿ ಆತಿಥೇಯರು ಎದುರಾಳಿಗಳ ಆವರಣ ಪ್ರವೇಶಿಸಲು ಪ್ರಯಾಸ ಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT