ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರ

ನಾಲ್ಕನೇ ಮಗುವಿನ ತಂದೆಯಾದ ರೊನಾಲ್ಡೊ

ರೊನಾಲ್ಡೊ ಅವರ ಗೆಳತಿ ಜಾರ್ಜಿನಾ ರಾಡ್ರಿಗಸ್‌ ಭಾನುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮಗುವಿಗೆ ಅಲನಾ ಮಾರ್ಟಿನಾ ಎಂದು ಹೆಸರಿಡಲಾಗಿದೆ. ಈ ವಿಷಯವನ್ನು ಅವರು ಟ್ವೀಟ್‌ ಮಾಡಿದ್ದು, ಪತ್ನಿ ಮತ್ತು ಮಗ ಕ್ರಿಸ್ಟಿಯಾನೊ ಜೂನಿಯರ್‌ ಜೊತೆ ಇರುವ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ.

ನಾಲ್ಕನೇ ಮಗುವಿನ ತಂದೆಯಾದ ರೊನಾಲ್ಡೊ

ಮ್ಯಾಡ್ರಿಡ್‌: ರಿಯಲ್‌ ಮ್ಯಾಡ್ರಿಡ್‌ ಫುಟ್‌ಬಾಲ್‌ ತಂಡದ ಆಟಗಾರ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ನಾಲ್ಕನೇ ಮಗುವಿನ ತಂದೆಯಾಗಿದ್ದಾರೆ.

ರೊನಾಲ್ಡೊ ಅವರ ಗೆಳತಿ ಜಾರ್ಜಿನಾ ರಾಡ್ರಿಗಸ್‌ ಭಾನುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮಗುವಿಗೆ ಅಲನಾ ಮಾರ್ಟಿನಾ ಎಂದು ಹೆಸರಿಡಲಾಗಿದೆ. ಈ ವಿಷಯವನ್ನು ಅವರು ಟ್ವೀಟ್‌ ಮಾಡಿದ್ದು, ಪತ್ನಿ ಮತ್ತು ಮಗ ಕ್ರಿಸ್ಟಿಯಾನೊ ಜೂನಿಯರ್‌ ಜೊತೆ ಇರುವ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ.

‘ಈಗಷ್ಟೇ ಅಲಾನ ಜನಿಸಿದಳು. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಈ ಕ್ಷಣ ನನ್ನ ಪಾಲಿಗೆ ಸ್ಮರಣೀಯವಾದುದು’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ರೊನಾಲ್ಡೊ ಪತ್ನಿ ಜಾರ್ಜಿನಾ ಅವರು ಈ ಮೊದಲು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಅವರಿಗೆ ಈವಾ ಮತ್ತು ಮಟಿಯೊ ಎಂದು ನಾಮಕರಣ ಮಾಡಲಾಗಿತ್ತು.

‘ಕ್ರಿಸ್ಟಿಯಾನೊ, ಪತ್ನಿ ಜೊತೆ ಇರಲು ಬಯಸಿರುವುದರಿಂದ ಅವರನ್ನು ಸೌದಿ ಅರೇಬಿಯಾ ಮತ್ತು ಅಮೆರಿಕ ವಿರುದ್ಧದ ಸೌಹಾರ್ದ ಪಂದ್ಯಗಳಿಗೆ ತಂಡಕ್ಕೆ ಆಯ್ಕೆ ಮಾಡಿಲ್ಲ’ ಎಂದು ಪೋರ್ಚುಗಲ್‌ ಕೋಚ್‌ ಫರ್ನಾಂಡೊ ಸ್ಯಾಂಟೊಸ್‌ ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಪಂಕಜ್‌ಗೆ ಏಷ್ಯನ್‌ ಬಿಲಿಯರ್ಡ್ಸ್ ಕಿರೀಟ

11ನೇ ಪ್ರಶಸ್ತಿ
ಪಂಕಜ್‌ಗೆ ಏಷ್ಯನ್‌ ಬಿಲಿಯರ್ಡ್ಸ್ ಕಿರೀಟ

25 Mar, 2018
ಭಾರತಕ್ಕೆ ಇಂಗ್ಲೆಂಡ್ ಸವಾಲು

ತ್ರಿಕೋನ ಟ್ವೆಂಟಿ 20 ಸರಣಿ
ಭಾರತಕ್ಕೆ ಇಂಗ್ಲೆಂಡ್ ಸವಾಲು

25 Mar, 2018
‘ಐಪಿಎಲ್‌: ಅಶ್ವಿನ್‌ಗೆ ಮಿಂಚುವ ಅವಕಾಶ’

ಎಸ್‌.ಬದರಿನಾಥ್ ಅಭಿಪ್ರಾಯ
‘ಐಪಿಎಲ್‌: ಅಶ್ವಿನ್‌ಗೆ ಮಿಂಚುವ ಅವಕಾಶ’

25 Mar, 2018
ಕುಲದೀಪ್ ಮೇಲೆ ಒತ್ತಡ: ಪೀಯೂಷ್‌ ಚಾವ್ಲಾ

ಐಪಿಎಲ್‌
ಕುಲದೀಪ್ ಮೇಲೆ ಒತ್ತಡ: ಪೀಯೂಷ್‌ ಚಾವ್ಲಾ

25 Mar, 2018
ಆರ್‌ಸಿಬಿ: ಕಾಲ್ಟರ್‌ನೈಲ್‌ ಬದಲಿಗೆ ಆ್ಯಂಡರ್ಸನ್‌

ಗಾಯದ ಸಮಸ್ಯೆ
ಆರ್‌ಸಿಬಿ: ಕಾಲ್ಟರ್‌ನೈಲ್‌ ಬದಲಿಗೆ ಆ್ಯಂಡರ್ಸನ್‌

25 Mar, 2018